ಮಲೆಯ ಮಾದೇಶ್ವರ

Author : ಬಿ.ಎಸ್. ಸ್ವಾಮಿ

Pages 394

₹ 300.00




Year of Publication: 2001
Published by: ದಾಮಿನಿ ಸಾಹಿತ್ಯ
Address: ಬೆಂಗಳೂರು

Synopsys

ಈ ಜಾನಪದ ಮಹಾಕಾವ್ಯವನ್ನು ಡಾ. ಬಿ ಎಸ್ ಸ್ವಾಮಿ ಸಂಪಾದಿಸಿದ್ದಾರೆ. ಈ ಮಹಾಕಾವ್ಯ ಜನಪದ ಮಹಾಕವಿಗೆ ಅರಿವಾಗದಂತೆ ಅಲಂಕಾರ, ರಸಗಳು ಬೆರೆತು, ಛಂದೋಗಂಧಿ ಶೈಲಿಯಲ್ಲಿ, ಕೆಲವೆಡೆ ತ್ರಿಪದಿ ಮತ್ತು ಚಂಪೂ ಶೈಲಿಯಲ್ಲಿ ವ್ಯಕ್ತವಾಗಿದೆ. ಇದು ಏಕಸೂತ್ರವಿಲ್ಲದೆ, ಖಂಡಕಾವ್ಯಗಳ ಸಂಗಮವಾಗಿ ರೂಪಿತವಾದ ಮಹಾಕಾವ್ಯ. ತುಂಬ ಅಪರೂಪದ ವಿವರಗಳೊಂದಿಗೆ ಈ ಕೃತಿ ಸಿದ್ಧಗೊಂಡಿದೆ.

About the Author

ಬಿ.ಎಸ್. ಸ್ವಾಮಿ
(08 September 1942)

ಕಥೆ, ಕಾದಂಬರಿ, ಕವನ, ನಾಟಕ, ಪ್ರಬಂಧ-ಹೀಗೆ ವೈವಿಧ್ಯಮಯ ಬರೆಹ ವ್ಯವಸಾಯದಿಂದ ಸಾಹಿತ್ಯ ಲೋಕದಲ್ಲಿ ಪರಿಚಿತರಾಗಿರುವ ಬಿ. ಸಿದ್ಧಲಿಂಗಸ್ವಾಮಿ (ಬಿ.ಎಸ್‌.ಸ್ವಾಮಿ) ಅವರು ಹುಟ್ಟಿದ್ದು 1942ರ ಸೆಪ್ಟಂಬರ್‌ 8 ರಂದು. ಊರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನ ಹಳ್ಳಿ. ತಂದೆ ವಿ. ಬಸವಲಿಂಗಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರು, ತಾಯಿ ಶಿವನಾಗಮ್ಮ. ಪ್ರಾರಂಭಿಕ ಶಿಕ್ಷಣ ಮಧುವನಹಳ್ಳಿ, ಕೊಳ್ಳೇಗಾಲ. ಮೈಸೂರಿನ ಸೇಂಟ್‌ ಫಿಲೋಮಿನ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. ಪದವಿ. ಮೈಸೂರು, ಚಾಮರಾಜನಗರ ಸುತ್ತಮುತ್ತಲ ಕಡೆಗಳಲ್ಲಿ ಹಬ್ಬಿರುವ ಪವಾಡ ಸದೃಶ ವಿಚಾರಗಳು, ಐತಿಹ್ಯ, ಜನರ ನಂಬಿಕೆ, ...

READ MORE

Related Books