ಮಲ್ಲಿಕಾರ್ಜುನ ಪಾಟೀಲರ ನಾಟಕಗಳು

Author : ಮಲ್ಲಿಕಾರ್ಜುನ ಪಾಟೀಲ

Pages 270

₹ 250.00




Published by: ಶಿವನಗೌಡ ಪಾಟೀಲ ಪ್ರಕಾಶನ
Address: ಧಾರವಾಡ

Synopsys

ಮಾಧ್ಯಮಗಳಲ್ಲಿ ಆಸಕ್ತಿ ಹೊಂದಿರುವ ಮಲ್ಲಿಕಾರ್ಜುನ ಪಾಟೀಲರು ತಮ್ಮ ಕೆಲ ಕಾದಂಬರಿಗಳನ್ನು ನಾಟಕಗಳಾಗಿಯೂ, ಸಿನಿಮಾ ಲೋಕಕ್ಕೂ  ತಂದವರು. ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನ ಅವರ ’ರೈತ ಕಲ್ಲಪ್ಪನ ಆತ್ಮಹತ್ಯೆ’ ಕಾದಂಬರಿ ನೇಗಿಲ ಯೋಗಿ  ಹೆಸರಿನಲ್ಲಿ ಸಿನಿಮಾ ಆಗಿದೆ. 

ರಂಗಭೂಮಿಯು ತನ್ನ ಮೂಲ ಉದ್ದೇಶ ಬಿಟ್ಟು ಬೇರೆಡೆ ಸಾಗುತ್ತಿದೆ ಅನ್ನಿಸಿದಾಗ ಅವರು ’ಇದು ಹಿಂಗ್ಯಾಕ ಆತು’ ಎಂಬ ನಾಟಕದ ಮೂಲಕ ಅರಿವು ಮೂಡಿಸಿದರು. ಮಲ್ಲಿಕಾರ್ಜುನ ಪಾಟೀಲರ ಹಲವು ನಾಟಕಗಳ ಮೊತ್ತ ಈ ಸಂಕಲನ. 

About the Author

ಮಲ್ಲಿಕಾರ್ಜುನ ಪಾಟೀಲ

ಮಲ್ಲಿಕಾರ್ಜುನ ಪಾಟೀಲ ಅವರು ಮೂಲತಃ ಧಾರವಾಡದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ಪಿಎಚ್ ಡಿ ಮತ್ತು ಹೈದರಾಬಾದಿನ ಇಎಫ್ ಎಲ್ ವಿಶ್ವವಿದ್ಯಾಲಯದಿಂದ ಪಿಜಿಡಿಟಿಇ ಪದವೀಧರರು. ಇಂಗ್ಲೆಂಡಿನ ಆಕ್ಸ್ ಫರ್ಡ್ ನಲ್ಲಿ ಫೆಲೋಶಿಪ್ ಪಡೆದು ಅಧ್ಯಯನ ನಡೆಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್  ಹಾಗೂ ವಿಜಯಪುರ ಮಹಿಳಾ ವಿವಿಯಲ್ಲಿಅಸೋಶಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದು, ಸದ್ಯ ಕರ್ನಾಟಕ ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ರೇಡಿಯೋ-ಟಿ.ವಿ.ಗಳಲ್ಲಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ವಿದ್ವತ್ ಪೂರ್ಣ ವಿಚಾರಗಳನ್ನು ಮಂಡಿಸಿರುವ ಅವರು ಹಲವು ಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ.  ತಮ್ಮ ವೃತ್ತಿಬದುಕಿನೊಂದಿಗೆ ಸಾಹಿತ್ಯಿಕ ಸೇವೆಯನ್ನೂ ಸಲ್ಲಿಸುತ್ತಿರುವ ಅವರು 'ಶಿವನಗೌಡ ಪಾಟೀಲ್' ...

READ MORE

Related Books