ಮಾಮೂಲಿ ಗಾಂಧಿ

Author : ಕಲಿಗಣನಾಥ ಗುಡದೂರು

Pages 138

₹ 60.00




Year of Publication: 2008
Published by: ಕನ್ನಡ ನಾಡು ಪ್ರಕಾಶನ
Address: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರಿ ಸಂಘ, ಗುಲ್ಬರ್ಗ

Synopsys

ಮಾಮೂಲಿ ಗಾಂಧಿ ಕಲಿಗಣನಾಥ ಗುಡದೂರು ಅವರ ಕಥೆ ಸಂಕಲನ. ಸಮಕಾಲೀನ ವಿಷಯಗಳನ್ನು ಆಳವಾಗಿ ವಿವರಿಸುವ ಕತೆಗಾರ ಕಲಿಗಣನಾಥ ಅವರು ಈ ಕೃತಿಯಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕವಾದ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಅವುಗಳಿಗೆ ಮುಖಾಮುಖಿಯಾಗುವ, ನೊಂದ ಮನಸ್ಸುಗಳಿಗೆ ಸಾಂತ್ವಾನ ಬಯಸುವಂತಹ ಕತೆಗಳನ್ನು ಬರೆದಿದ್ದಾರೆ. ಈ ಕೃತಿಯಲ್ಲಿ ಬರುವ ಮಾಮೂಲಿ ಗಾಂಧಿ, ಎರಡು ಪಾರಿವಾಳಗಳು, ಕನ್ನಡಿಯೊಳಗಿನ ಚಿತ್ರಗಳು, ಮಳೆ, ದೊಡ್ಡವರ ನಾಯಿ, ಹೀಗೊಂದು ಸಹಜ ಸಾವು, ಡಾಟರ್‌ ಆಫ್‌ ದುರುಗವ್ವ, ಬೀರ, ಆಸರೆ, ಕತ್ತಲೆ ಕತೆಗಳು ಓದುಗರನ್ನು ಚಿಂತನೆಗೆ ಅಚ್ಚುತ್ತವೆ. 

About the Author

ಕಲಿಗಣನಾಥ ಗುಡದೂರು
(11 October 1974)

 ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಗುಡದೂರು ಗ್ರಾಮದವರಾದ ಕಲಿಗಣನಾಥ ಅವರು ವೃತ್ತಿಯಂದ ಪತ್ರಕರ್ತ. ಕಥೆ, ಕವನ, ಲೇಖನಗಳನ್ನು ಬರೆದಿದ್ದರೂ ಸಾಹಿತ್ಯಲೋಕದಲ್ಲಿ ’ಕತೆಗಾರ’ ಎಂದೇ ಚಿರಪರಿಚಿತ. ಜಾಗತೀಕರಣದ ನಂತರದ ಹೊಸ ತಲೆಮಾರಿನ ತಲ್ಲಣಗಳಿಗೆ ಸ್ಪಂದಿಸುವ ಕಲಿಗಣನಾಥ ಅವರು, ಬದಲಾದ ಗ್ರಾಮೀಣ ಆರ್ಥಿಕತೆ ಸಂಕಷ್ಟ ಹಾಗೂ ಸಾಮಾಜಿಕ ಸ್ಥಿತ್ಯಂತರಗಳನ್ನು ತಮ್ಮ ಕತೆಗಳಲ್ಲಿ ದಾಖಲಿಸುತ್ತಾರೆ. ಮತಾಂತರ, ಮಾಮೂಲಿ ಗಾಂಧಿ, ತೂತುಬೊಟ್ಟು (ಕಥಾ ಸಂಕಲನಗಳು) ಪ್ರಕಟಿತ ಕೃತಿಗಳು. ...

READ MORE

Related Books