ಮನ ಮಿಡಿತ

Author : ತುರುವನೂರು ಮಂಜುನಾಥ

Pages 152

₹ 150.00




Year of Publication: 2021
Published by: ಕೆಂಧೂಳಿ ಪ್ರಕಾಶನ
Address: ಡಿಎಸ್ ಮ್ಯಾಕ್ಸ್ ಸವ್ಯ ಅಪಾರ್ಟ್ ಮೆಂಟ್ ಪ್ಲಾಟ್ ಸಂಖ್ಯೆ: 202,2ನೇ ಮಹಡಿ, ಜೆ.ಪಿ. ನಗರ, 9ನೇ ಹಂತ, ಅಮೃತನಗರ ಮುಖ್ಯರಸ್ತೆ, ಅಂಜನಾಪುರ, ಬೆಂಗಳೂರು-560108

Synopsys

ಪತ್ರಕರ್ತ-ಲೇಖಕ ತುರುವನೂರು ಮಂಜುನಾಥ ಅವರು ತಮ್ಮದೇ ‘ಕೆಂಧೂಳಿ’ ವಾರಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳ ಸಂಕಲನ-ಮನಮಿಡಿತ. ಒಟ್ಟು 35 ಬರಹಗಳಿವೆ. ಸಂಖ್ಯೆಯಲ್ಲಿ ಪ್ರಚಲಿತ ರಾಜಕೀಯ ವಿದ್ಯಮಾನಗಳೇ ಹೆಚ್ಚು. ಪ್ರತಿ ಬರಹವು ನಿಯಮಗಳಿಂದ ದೂರ ಸರಿಯುತ್ತಿರುವ ಪತ್ರಿಕೋದ್ಯಮ, ಸಾಮಾಜಿಕ ಹೊಣೆಗಾರಿಕೆಯ ನಿರ್ಲಕ್ಷ್ಯದ ಪರಿಸರ, ಸಂವಿಧಾನ ಪಾಲನೆಯಲ್ಲ; ಪುರೋಹಿತಶಾಹಿಯನ್ನು ಮೆಚ್ಚಿಸುವಂತೆ ನಡೆದುಕೊಳ್ಳುತ್ತಿರುವ ಸರ್ಕಾರಗಳನ್ನು ಕೇಂದ್ರವಾಗಿರಿಸಿಕೊಂಡಿವೆ. ತೆರೆಮರೆಯ ಪ್ರತಿಭೆ, ಮುತ್ಸದ್ಧಿಗಳನ್ನೂ ಸಹ ಇಲ್ಲಿಯ ಅಂಕಣ ಬರಹಗಳು ನಿರ್ಲಕ್ಷಿಸಿಲ್ಲ. ನ್ಯಾಯ ನಿಷ್ಠುರಿ, ಲೋಕ ವಿರೋಧಿ ಎನ್ನುವ ಹಾಗೆ ಅಪಾಯಗಳನ್ನು ಎದುರುಗೊಳ್ಳುವ ಸಾಹಸಗಳನ್ನು ಇಲ್ಲಿಯ ಬರಹಗಳಲ್ಲಿ ಕಾಣಬಹುದು. ಆದರೆ, ಈ ಎಲ್ಲ ಬರಹಗಳ ಮೂಲ ಮಾನವೀಯತೆ ಎಂಬುದು ಸ್ವತಃ ಅಂಕಣಕಾರರೇ ಹೇಳಿಕೊಂಡಿದ್ದು, ಅವರ ಸಾಮಾಜಿಕ ಹೊಣೆಗಾರಿಕೆಯ ಪ್ರಜ್ಞೆಯ ಎಚ್ಚರವನ್ನು ತೋರುತ್ತದೆ.

ಕೃತಿಗೆ ಮುನ್ನುಡಿ ಬರೆದ ಪತ್ರಕರ್ತ-ಚಿಂತಕ ಅನಂತ ಚಿನಿವಾರ ‘ಇಲ್ಲಿಯ ಬರಹಗಳಲ್ಲಿ ನೇರವಂತಿಕೆ ಹಾಗೂ ಸೈದ್ಧಾಂತಿಕ ಬದ್ಧತೆಗಳಿವೆ ಮಾತ್ರವಲ್ಲ; ಅಧ್ಯಯನದ ಹೊಳವುಗಳಿವೆ’ ಎಂದು ಪ್ರಶಂಸಿಸಿದ್ದರೆ, ಸಾಹಿತಿ-ಪತ್ರಕರ್ತ ಶೂದ್ರ ಶ್ರೀನಿವಾಸ್ ಕೃತಿಗೆ ಬೆನ್ನುಡಿ ಬರೆದು ‘ನಾನಾ ವಿಧವಾದ ವರ್ತಮಾನದ ವಿಷಯಗಳಿಗೆ ಅನ್ವಯಿಸಿ, ಆರೋಗ್ಯಪೂರ್ಣವಾಗಿ ಅರಿಯುವ ಮತ್ತು ಗ್ರಹಿಸುವ ಅನನ್ಯ ಚಿಂತನೆ ಇದೆ’ ಎಂದು ಶ್ಲಾಘಿಸಿದ್ದಾರೆ.

About the Author

ತುರುವನೂರು ಮಂಜುನಾಥ
(07 September 1967)

ಲೇಖಕ ತುರುವನೂರು ಮಂಜುನಾಥ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ತುರುವನೂರಿನವರು. ತಂದೆ ತಿಪ್ಪೇಸ್ವಾಮಿ ತಾಯಿ ಜಯಮ್ಮ ರೈತ ಕುಟುಂಬದಿಂದ ಬಂದವರು. ಹುಟ್ಟೂರಿನಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ ಪಡೆದರು. ಸ್ನಾತಕೋತ್ತರ ಪದವೀಧರರು. ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯದಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಚಿತ್ರದುರ್ಗದ ಮುರುಘಾ ಮಠದಿಂದ ಪ್ರಕಟವಾಗುತ್ತಿದ್ದ ‘ಜನವಾಹಿನಿ’ (!992) ವರದಿಗಾರನಾಗಿ ವೃತ್ತಿ ಆರಂಭಿಸಿದರು. (1994ರಲ್ಲಿ) ಚಿತ್ರದುರ್ಗದ ‘ಸುದ್ದಿಗಿಡುಗ’ ಪತ್ರಿಕೆ,  1996ರಿಂದ 2007ರವರೆಗೆ  ಸಂಯುಕ್ತ ಕರ್ನಾಟ ಪತ್ರಿಕೆ ಬೆಂಗಳೂರಿನಲ್ಲಿ ವರದಿಗಾರರಾಗಿ, ನಂತರ ಸುವರ್ಣ ಟಿವಿಗೆ ಸೇರ್ಪಡೆ ಎಫ್ ಐಆರ್ ಕ್ರೈಮ್ ನ್ಯೂಸ್ ಪ್ರೋಗ್ರಾಂ ಮುಖ್ಯ ವರದಿಗಾರಿಕೆ, ಕೋರ್ಟ್ ವರದಿ ಸ್ಪೆಷಲ್ ರಿಪೋರ್ಟ್ ಕಾರ್ಯಕ್ರಮ ನಿರೂಪಣೆ 2010 ಫೆಬ್ರವರಿಯಿಂದ ಹಿರಿಯ ...

READ MORE

Related Books