ಮನಸಾರೆ ಕ್ಷಮಿಸಿಬಿಡಿ

Author : ಶಿವಕುಮಾರ ಡಿ

Pages 204

₹ 199.00




Year of Publication: 2021
Published by: ಖುಷಿ ಪಬ್ಲಿಕೇಷನ್ಸ್
Address: # 433/23, ರಾಯಲ್ ಟಚ್ ಕಾಂಪ್ಲೆಕ್ಸ್, ಮೊದಲನೇ ಮಹಡಿ, 4 ನೇ ಮುಖ್ಯರಸ್ತೆ, ಹನುಮಂತನಗರ ಬೆಂಗಳೂರು.
Phone: 080026611666

Synopsys

’ಮನಸಾರೆ ಕ್ಷಮಿಸಿಬಿಡಿ’ ಕೃತಿಯನ್ನು ಡಿ. ಶಿವಕುಮಾರ ಅವರು ರಚಿಸಿದ್ದು, ಜೀವನದ ಸವಿಯನ್ನು ತುಂಬಿ ಸವಿಯಬೇಕು ಎನ್ನುವವರಿಗೆ ದಾರಿದೀಪವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಅವರು, ‘ಆವೇಗ, ಅಕ್ರೋಶ, ದ್ವೇಷಗಳು, ಹೇಗೆ ಬದುಕನ್ನು ಬರಡು, ಬೇಸರ, ಬವಣೆ, ಜಿಗುಪ್ಸೆ ಹಾಗೂ ವಿಫಲತೆಗಳತ್ತ ಎಳೆದೊಯ್ಯುತ್ತವೆ ಎನ್ನುವುದನ್ನು ಈ ಕೃತಿಯು ಎಳೆಎಳೆಯಾಗಿ ಬಿಚ್ಚಿಡುತ್ತದೆ. ತಂದೆ ತಾಯಿಗಳ ಪ್ರೀತಿ ಹಾಗೂ ಮೂಲಭೂತ ಮೌಲ್ಯಗಳ ಬಗ್ಗೆ ಅರ್ಥಪೂರ್ಣವಾದ ರೀತಿಯಲ್ಲಿ ಕೈಹಿಡಿಯುವ ಇಲ್ಲಿನ ಬರವಣಿಗೆ, ಪ್ರಚಂಡ ಆತ್ಮವಿಶ್ವಾಸ, ನಂಬಿಕೆ, ಭರವಸೆಗಳು ಹೇಗೆ ಬದುಕಿಗೆ ಸಾಥಕ ಸಮರ್ಥ ಪರಿವರ್ತನೆಯನ್ನು ತಂದುಕೊಡಬಲ್ಲವು ಎನ್ನುವುದನ್ನು ತಿಳಿಸುತ್ತದೆ. ಕಲ್ಪವೃಕ್ಷವನ್ನು ಕೊಡುವ ತೆಂಗಿನಮರದಂತೆ ಜೀವನದ ಪ್ರತಿಕ್ಷಣಗಳನ್ನು ಉಪಯುಕ್ತವಾಗಿ ಕಳೆಯಬೇಕು ಎನ್ನುವ ಲೇಖಕರ ಮಾತು ಅಕ್ಷರಶಃ ನಿಜವೆನಿಸುತ್ತದೆ. ಜೀವನದ ಮೌಲಿಕ ಮಾರ್ಗದರ್ಶನ ಪ್ರೇರಣಾತ್ಮಕವಾಗಿದೆ. ನಾಡಿನ ಯುವಜನತೆಗೆ, ವೃತ್ತಿಪರರಿಗೆ, ಗೃಹಿಣಿಯರಿಗೆ, ವಿದ್ಯಾರ್ಥಿವೃಂದಕ್ಕೆ ದಾರಿದೀಪವಾಗಲಿ’ ಎಂದು ಆಶಿಸಿದ್ದಾರೆ. 

About the Author

ಶಿವಕುಮಾರ ಡಿ

ಲೇಖಕ ಶಿವಕುಮಾರ ಡಿ ಅವರು ಲೈಪ್ ಕೋಚ್, ಬಿಸಿನೆಸ್ ಮಾರ್ಗದರ್ಶಿ ಹಾಗೂ ಯಶಸ್ವಿ ಲೇಖಕರು. ಮೂಲತಃ ಚನ್ನಪಟ್ಟಣದವರು. ಚನ್ನಪಟ್ಟಣದ ಮರದ ಆಟಿಕೆಗಳನ್ನು ರಪ್ತು ಮಾಡುವ ಕೌಟುಂಬಿಕ ಹಿನ್ನೆಲೆಯವರು. ವೃತ್ತಿಯಲ್ಲಿ ಶಿಕ್ಷಕರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ ಪದವೀಧರರು. ಮಾರ್ಕೆಟಿಂಗ್ ಕಂಪೆನಿಯಲ್ಲಿ 6 ವರ್ಷ ಕಾಲ  ಮುಖ್ಯಸ್ಥರಾಗಿ, 2007 ರಿಂದ ’ಎ ’ವ್ಯಾಪಾರ ತರಬೇತುದಾರ ಮತ್ತು ಜೀವನ ತರಬೇತುದಾರರಾಗಿ 13 ವರ್ಷ ಕಾಲ ಕೆಲಸ ಮಾಡಿದ್ದಾರೆ. ತಮ್ಮ ಸ್ವಂತ ಕಂಪೆನಿಗಳಾದ ’ಎಸ್ ಕೆಎಲ್ 3’ ಅನ್ನು 2014 ಸಪ್ಟೆಂಬರ್ 5 ರಂದು, ಅಚೀವರ್ಸ್ ವರ್ಲ್ಡ್ ಗ್ರೂಪ್ ಹಾಗೂ ಪಬ್ಲಿಕೇಷನ್ ಸಂಸ್ಥೆಯನ್ನು 2015 ಮಾರ್ಚ್ 16 ರಂದು ...

READ MORE

Related Books