ಮನಸೋಲ್ಲಾಸ

Author : ರೋಹಿತ್ ಚಕ್ರತೀರ್ಥ

₹ 150.00




Published by: ಅಯೋಧ್ಯ ಪಬ್ಲಿಕೇಶನ್ಸ್
Address: 1571, 36ನೇ ಕ್ರಾಸ್‌, ಔಟರ್‌ ರಿಂಗ್‌ ರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು- 560070
Phone: 96209 16996

Synopsys

ಲೇಖಕ ರೋಹಿತ್‌ ಚಕ್ರತೀರ್ಥ ಅವರ ಲೇಖನ ಕೃತಿ ʻಮನಸೋಲ್ಲಾಸʼ. ಇದು ಬಾಲ್ಯದ ಕುರಿತಾಗಿ ಬರೆದ ಪುಸ್ತಕವಾಗಿದೆ. ಪುಸ್ತಕದ ಬೆನ್ನುಡಿಯಲ್ಲಿ, "ಅದೇಕೋ ಏನೋ, ಹಳೆಯ ನೆನವು ಗತಜೀವನ ಎಂದಾಗಲ್ಲ ನಮ್ಮ ಮನಸ್ಸನ್ನು ತುಂಬುವುದು ಒಳ್ಳೆಯ ಸಂಗತಿಗಳೇ. ನೋಡ್ರಿ, ನಮ್ಮ ಕಾಲದಲ್ಲಿ ಹೀಗೆಲ್ಲ ಇರಲಿಲ್ಲ. ಆಗ ನಾವು ಕರೆಂಟ್ ಇಲ್ಲದೆ ಚಿಮಣ ದೀಪದಲ್ಲಿ ಓದಿದ್ವಿ. ಶಾಲೆಗೆ ನಡೆದುಕೊಂಡೇ ಹೋಗಿಬರ್ತಿದ್ವಿ. ಊಟಕ್ಕೆ ಗಂಜಿ ಬಿಟ್ರೆ ಪಂಚಭಕ್ಷ ಪರಮಾನ್ನ ಏನೂ ಇರಲಿಲ್ಲ. ನೋಡಲು ಮೊಬೈಲ್, ಟಿವಿಗಳ ಸೌಲಭ್ಯ ಇರಲಿಲ್ಲ. ಎಂದಲ್ಲ ಹೇಳಿ ಕೊನೆಗೆ ಆ ಕಾಲವೇ ಚೆನ್ನಾಗಿತ್ತು ಬಿಡ್ರಿ! ಎಂದುಬಿಡುತ್ತೇವೆ! ಅಂದರೆ ಹಿಂದೆ ನಾವು ಅನುಭವಿಸಿದ ಕಷ್ಟಕಾರ್ಪಣ್ಯಗಳು ಕೂಡ ನಮಗೆ ಹಲವಾರು ವರ್ಷಗಳ ನಂತರ ಸಿಹಿನೆನಪುಗಳೇ ಆಗುತ್ತವೆ. ನೆನಪಿನ ಮಹಿಮೆ ಅಪಾರ! ರೋಹಿತ್ ಚಕ್ರತೀರ್ಥರ 'ಮನಸೋಲ್ಲಾಸʼ ಕೃತಿಯನ್ನು ಓದುವಾಗ ಕಾಲ ಎಂಬ ಟ್ರೇನಿನಲ್ಲಿ ಕೂತು ಹಿಮ್ಮುಖವಾಗಿ ಸಾಗಿದ ಅನುಭವವಾಗುತ್ತದೆ. ಕಳೆದ ಎರಡು ಮೂರು ತಲೆಮಾರುಗಳಲ್ಲಿ ನಾವು ಕಂಡುಂಡ ಅನೇಕ ಸಂಗತಿಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ಮನೆಯ ಹಜಾರದಲ್ಲೋ ಪಡಸಾಲೆಯಲ್ಲೋ ಗೋಡೆಗೆ ವಾಲಿಸಿದ ದೇವರ ಪಟದ ಹಿಂಭಾಗದಲ್ಲಿ ಸಂಸಾರ ಹೂಡುತ್ತಿದ್ದ ಗುಬ್ಬಚ್ಚಿ, ಅಟ್ಟ ಎಂಬ ನಿಗೂಢ ಅನೂಹ್ಯ ಪ್ರಪಂಚ, ಕಚೇರಿಗಳಲ್ಲಿ ಕೇಳಿಬರುತ್ತಿದ್ದ ಟಕ ಟಕ ಎಂಬ ಟೈಪ್ ರೈಟರ್ ಸಂಗೀತ, ವಿಸಿಆರ್, ಕಾಂಪ್ಯಾಕ್ಟ್ ಡಿಸ್ಕ್‌ಗಳಲ್ಲಿ ತೆರೆದುಕೊಳ್ಳುತ್ತಿದ್ದ ಸಿನೆಮಾ ಲೋಕ, ಮೂರು ತಾಸುಗಳಷ್ಟು ಕಾಲ ಊರ ಜನರನ್ನೆಲ್ಲ ಬೆಂಚಿನ ತುದಿಯಲ್ಲಿ ಕೂರಿಸಿ ಮಂತ್ರಮುಗ್ಧಗೊಳಿಸುತ್ತಿದ್ದ ಸರ್ಕಸ್ ಎಂಬ ಮಾಯಾಲೋಕ, ಬಾಲ್ಯದ ಬೆರಳಿಗೆ ಬಣ್ಣತುಂಬಿದ ಗಾಳಿಪಟ, ಶಾಲಾರಂಭದ ಜೊತೆಗೇ ಬೆರೆತುಹೋದ ವರ್ಷವೈಭವದ ಪರಿಪಾಟಲುಗಳು, ನಮ್ಮೆಲ್ಲರ ಮನೆಗಳಲ್ಲೂ ಭಾರತೀಯತೆಯ ಊದುಬತ್ತಿ ಹಚ್ಚಿದ್ದ ಸಿದ್ಧಾರ್ಥ ಕಾ‌ನ ಸುರಭಿ... ಎಲ್ಲವೂ ಇರುವ ಈ ಕೃತಿ ಶೀರ್ಷಿಕೆಗೆ ತಕ್ಕಂತೆ ಮಾನಸೋಲ್ಲಾಸವೇ, ಹಳೆ ನೆನಪು ಎಂಬ ಬ್ಲ್ಯಾಕ್‌ ಆಂಡ್ ವೈಟ್ ಚಿತ್ರಕ್ಕೆ ವರ್ಣಮಯ ಚೌಕಟ್ಟು ತೊಡಿಸಿದ್ದಾರೆ ಚಕ್ರತೀರ್ಥರು" ಎಂದು ಹೇಳಿದ್ದಾರೆ.

About the Author

ರೋಹಿತ್ ಚಕ್ರತೀರ್ಥ

ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ.  ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...

READ MORE

Related Books