ಮಾನವ ಪುತ್ರ-ಜೀಸಸ್

Author : ದೇಸಾಯಿ ದತ್ತಮೂರ್ತಿ(ದೇವದತ್ತ)

Pages 240

₹ 200.00




Year of Publication: 2014
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020

Synopsys

ಖಲೀಲ್ ಗಿಬ್ರಾನ್ ಅವರ ಕೃತಿಯನ್ನು ದೇವದತ್ತ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕ್ರಿಸ್ತನು ಜಗತ್ತಿನ ಅವತಾರಿಕ ಪುರುಷರಲ್ಲೊಬ್ಬ ಇಂಥವರ ಮಹಾ ಜೀವನವನ್ನು ವಸ್ತುವಾಗಿಸಿಕೊಂಡು ಹುಟ್ಟಿದ ಕೆಲವೇ ಮಹೋನ್ನತ ಕೃತಿಗಳಲ್ಲಿ ಗಿಬ್ರಾನ್ ಅವರ ಈ ಕೃತಿಯೂ ಒಂದು.

ಪ್ರವಾದಿ ಎಂಬ ಗಿಬ್ರಾನನ ಕೃತಿಯಲ್ಲಿ ಜಗತ್ತನ್ನು ಓರ್ವ ಮಹಾ ಪುರುಷನ ದೃಷ್ಟಿಕೋನದಿಂದ ನೋಡಿದ ಹವಣಿಕೆ ಇದೆ.  ’ಮಾನವಪುತ್ರ ಜೀಸಸ” ಕೃತಿಯಲ್ಲಿ ಓರ್ವ ಮಹಾಪುರುಷನ ಜೀವನವನ್ನು ಜಗತ್ತಿನ ವಿವಿಧ ದೃಷ್ಟಿಕೋನಗಳಿಂದ ನೋಡಿದ ಉಪಕ್ರಮವಿದೆ. 

ಕ್ರಿಸ್ತನ ಅನೇಕ ಶಿಷ್ಯರು ಬರೆದ ಚರಿತ್ರೆಗಳು ಉಪಲಬ್ಧವಾಗಿವೆ. ಜ್ಯೂ ಜನಾಂಗದ ಇತಿಹಾಸವೆಲ್ಲ ಪುರಾತನ ಉಲ್ಲೇಖನದಲ್ಲಿ ಸಂಗ್ರಹಿತವಾಗಿದೆ. ಆದರೆ, ಪರಂಪರೆಯೂ ಧರ್ಮಾಂಧತೆಯೂ ಬೆಳೆದು ಬಂದ ಕ್ರಿಸ್ತ ಧರ್ಮದ ಆಡಂಬರದಲ್ಲಿ ಕ್ರಿಸ್ತನೇ ಮುಚ್ಚಿಹೋಗಿದ್ದಾನೆ. ಗಿಬ್ರಾನನು ಈ ಎಲ್ಲ ಆವರಣಗಳನ್ನು ಬದಿಗೆ ಸರಿಸಿದ. ಕ್ರಿಸ್ತನ ದಿವ್ಯ ವ್ಯಕ್ತಿತ್ವವನ್ನು ಎದುರಿಗಿರಿಸಿಕೊಂಡು ಅದರ ಶುದ್ಧ ಚಿತ್ರಣಕ್ಕಾಗಿ ಇದ್ದ ಸಾಮಗ್ರಿಯನ್ನೆಲ್ಲ ಉಪಯೋಗಿಸಿದ. ಆ ಮಹತ್ವದ ಕೃತಿಯನ್ನು ದೇಸಾಯಿ ದೇವದತ್ತರು ಅಷ್ಟೇ ಸೂಕ್ಷ್ಮವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. 

About the Author

ದೇಸಾಯಿ ದತ್ತಮೂರ್ತಿ(ದೇವದತ್ತ)

ದೇವದತ್ತ ಕಾವ್ಯ ನಾಮದಲ್ಲಿ ಕೃತಿಗಳನ್ನು ರಚಿಸುತ್ತಿದ್ದ ದೇಸಾಯಿ ದತ್ತಮೂರ್ತಿ (ಜೀವಿತಾವಧಿ: 1927-1979) ಅವರು ಬೇಂದ್ರೆಯವರ ಸಮಕಾಲೀನರು. ಖಲೀಲ್ ಗಿಬ್ರಾನ್ರ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಅನುವಾದಿತ ಕೃತಿ ‘ಮಾನವಪುತ್ರ ಜೀಸಸ್’ ಪ್ರಸಿದ್ಧ ಕೃತಿಯಾಗಿತ್ತು. ಹಾಗೇ ಖಲೀಲ್ ಗಿಬ್ರಾನ್ ಉಕ್ತಿ ಸಂಗ್ರಹವಾದ ’ಪ್ರವಾದಿಯ ತೋ’ಟ ’ವನ್ನು ರಚಿಸಿದ್ದಾರೆ. ಹೂಬಳ್ಳಿ ಎಂಬುದು ಅವರ ಮತ್ತೊಂದು ಕೃತಿ.  ...

READ MORE

Related Books