ಮಂದಾರ- ಪ್ರೊ.ಮಾಲತಿ ಪಟ್ಟಣಶೆಟ್ಟಿ ಅಭಿನಂದನ ಗ್ರಂಥ

Author : ಶಿವಾನಂದ ಗಾಳಿ

Pages 556

₹ 350.00




Year of Publication: 2007
Published by: ಚಂದ್ರನಾಥ ಪ್ರಕಾಶನ
Address: ಸನ್ಮತಿ ಮಾರ್ಗ , ಧಾರವಾಡ - 580001

Synopsys

‘ಮಂದಾರ’ ಪ್ರೊ.ಮಾಲತಿ ಪಟ್ಟಣಶೆಟ್ಟಿ ಅಭಿನಂದನ ಗ್ರಂಥ. ಈ ಗ್ರಂಥವನ್ನು ಡಾ.ಶಿವಾನಂದ ಗಾಳಿ, ಡಾ.ಹೆಚ್.ಎ. ಪಾರ್ಶ್ವನಾಥ, ಡಾ.ಶಾಂತಾ ಇಮ್ರಾಪೂರ ಹಾಗೂ ಡಾ.ಜಿನದತ್ತ ಅ.ಹಡಗಲಿ ಅವರು ಸಂಪಾದಿಸಿದ್ದಾರೆ. ಕೃತಿಯಲ್ಲಿ ಪಕಳೆ ಒಂದು: ನಾವು ಕಂಡಂತೆ ವಿಭಾಗದಲ್ಲಿ ಚೆನ್ನವೀರ ಕಣವಿ ಅವರ ಹೊಂದೊಡಿಗೆ, ಬನ್ನಂಜೆ ಗೋವಿಂದಾಚಾರ್ಯರ ಪರದೇಸಿಯ ಹರಕೆ, ಪ್ರೊ. ಹಂಪನಾ ಅವರ ಬಲು ಅಪರೂಪದಾಕಿ, ಜಿನದತ್ತ ದೇಸಾಯಿ ಅವರ ವಾತ್ಸಲ್ಯ ವೃಕ್ಷ, ಸುಮಿತ್ರಾ ಹಲವಾಯಿ ಅವರ ಅಗ್ನಿಕನ್ಯೆ, ಎಂ.ಡಿ. ಗೋಗೇರಿ ಅವರ ಒಂಟಿ ಜೀವಕ್ಕೆರಡು ನುಡಿ ನಮನಗಳು, ಬಸವರಾಜ ವಕ್ಕುಂದ ಅವರ ಬೆಂದ ದಾರಿಯ ಬೆಳಕು, ಸುಜಾತಾ ಜಿನದತ್ತ ಹಡಗಲಿ ಅವರ ಅಗ್ನಿತಾವರೆ, ಸೀಮಾ ಕುಲಕರ್ಣಿ ಅವರ ನುಡಿಮಲ್ಲಿಗೆ, ಲೀಲಾ ಕಲಕೋಟಿ ಅವರ ಪುಟ್ಟ ದಿಟ್ಟ ಹೆಜ್ಜೆ, ಡಾ.ಸರೋಜಿನಿ ಶಿಂತ್ರಿ ಅವರ ನನ್ನ ಶಿಷ್ಯೆ, ಡಾ. ಕಮಲಾ ಹಂಪನಾ ಅವರ ಪುಟ್ಟ ಶರೀರದ ದಿಟ್ಟ ಲೇಖಕಿ, ಡಾ.ಎಂ.ಎಂ. ಕಲಬುರ್ಗಿ ಅವರ ಫೀನಿಕ್ಸ ಪಕ್ಷಿ, ಪ್ರೊ.ಕೆ.ಎಸ್. ದೇಶಪಾಂಡೆ ಅವರ ಕಾಮನಬಿಲ್ಲು ಮೂಡಿಸಿದಾಕೆ, ಶಿವಪುತ್ರಪ್ಪ ಚ.ಅನಾಡ ಅವರ ಛಲಗಾರ್ತಿ, ಡಾ.ಗುರುಲಿಂಗ ಕಾಪಸೆ ಅವರ ಆತ್ಮಪ್ರತ್ಯಯದ ಪ್ರತೀಕ, ಶಾಂತಲಾ ಹಿರೇಮಠ ಅವರ ಬೆಂಕಿಯನ್ನು ಬೆಳಕಾಗಿಸಿದವಳು, ಪ್ರೊ. ಶ್ರೀಪತಿ ಭಟ್ಟ ಅವರ ಸಹನಾಮೂರ್ತಿ, ಪ್ರೊ.ಪರಮೇಶ್ವರ ಮ. ಹೆಗಡೆ ಅವರ ನನ್ನ ಸಹಪಾಠಿ, ಪ್ರೊ. ಭಾಲಚಂದ್ರ ಜಯಶೆಟ್ಟಿ ಅವರ ಮೌನವೊಡೆದು ಗರಿಗೆದರಿದಾಗ, ಪ್ರೊ.ಸ್ವಸ್ತಿಕ ಪಾಟೀಲ ಅವರ ಒಂದು ಸ್ಮೃತಿ, ಜಯಶೀಲಾ ಬಿ. ಬೆಳಲದವರ ಅವರ ನೋವುಂಡು ನಲಿವು ತೂರಿದಾಕೆ, ರಂಜನಾ ನಾಯಕ ಅವರ ತಸ್ಮೈಶ್ರೀ ಗುರುವೇನಮಃ, ಡಾ. ಸರೋಜಿನಿ ಚವಲಾರ ಅವರ ಒಡನಾಡಿ, ಪ್ರಭಾ ಸಿರೂರ ಅವರ ಬಕುಳದ ಹೂವು, ಸರೋಜಾ ಜಾಧವ ಅವರ ಗುರುಮಾತೆ, ನಿರಂಜನ ವಾಲಿಶೆಟ್ಟರ ಸ್ಥಿತಪ್ರಜ್ಞಮಾತೆ, ಡಾ.ಎಸ್.ಎನ್. ಭಟ್ಟ ಅವರ ಮಾಲತಿ ಅಕ್ಕ, ಸುಲೋಚನಾ ಕೋಟೂರ ಅವರ ನನ್ನ ತಂಗಿ ಮಾಲೂ, ಗಂಗಾ ಸುಬ್ಬರಾಯ ಭಟ್ಟ ಅವರ ತುಂಬಿದ ಕೊಡ, ಡಾ. ಚೆನ್ನಕ್ಕ ಪಾವಟೆ ಅವರ ನನ್ನಕ್ಕ, ಶೈಲಾ ಛಬ್ಬಿ ಅವರ ಒಡನಾಟ, ಇಂದಿರಾ ಪ್ರಸಾದರ ಸ್ನೇಹದ ಬಳ್ಳಿಯ ಹೂವು, ಡಾ. ಮಂದಾಕಿನಿ ಪುರೋಹಿತರ ಪಾದರಸದ ವ್ಯಕ್ತಿ, ಡಾ.ಚಂದ್ರಮೌಳಿ ಎಸ್. ನಾಯ್ಕರ ಅವರ ನೆನಪುಗಳು, ಡಾ. ಹೆಚ್. ಸಿ. ವಿಷ್ಣುಮೂರ್ತಿ ಅವರ ಅತ್ಮೀಯರು, ಡಾ.ಸುಮತೀಂದ್ರ ನಾಡಿಗ್ ಅವರ ಮೆಲುಕು ಹಾಕುತ್ತೇನೆ ಆ ದಿನಗಳನ್ನು, ಶಿವಶಂಕರ ಹಿರೇಮಠ ಅವರ ಒಡನಾಟಗಳು, ಡಾ.ವೀಣಾ ಶಾಂತೇಶ್ವರ ಅವರ ಮಾಲತಿ ಪಟ್ಟಣಶೆಟ್ಟಿ- ನಾ ಕಂಡಂತೆ, ಡಾ. ತೇಜಶ್ವಿ ಕಟ್ಟೀಮನಿ ಅವರ ಛಲಗಾತಿ, ವೀಣಾ ಕುಲಕರ್ಣಿ ಅವರ ಜೀವನದಿ, ರಾಧಾ ಶಾಮರಾವ ಅವರ ನಗುಮೊಗದಾಕೆ, ಡಾ. ಬಸವರಾಜ ಸಾದರ ಅವರ ಕೂಗಬೇಡ..ಕುಣಿಯಬೇಕ, ಡಾ. ಅಜಿತಪ್ರಸಾದರ ಸಹೋದ್ಯೋಗಿ, ಶುಭದಾ ಅಮಿನಭಾವಿ ಅವರ ಸ್ನೇಹಮಯಿ, ಕಮಲಾ ಜೇರೆ ಅವರ ತ್ರಿಕೂಟ, ಸಂಧ್ಯಾ ದೀಕ್ಷಿತ ಅವರ ಬಹುಮುಖಿ ವ್ಯಕ್ತಿತ್ವ, ಪ್ರೊ.ಹಸನಭಿ ಬೀಳಗಿ ಅವರ ಸ್ನೇಹಜೀವಿ, ಲೀಲಾ ಕಲಕೋಟಿ ಅವರ ಪುಟ್ಟ ದಿಟ್ಟ ಹೆಜ್ಜೆ, ವತ್ಸಲಾ ಕುಲಕರ್ಣಿ ಅವರ ನೂಲಿನಂಗ ಸೀರಿ, ಡಾ. ಸ್ನೇಹಾ ಸದಾನಂದ ಜೋಶಿ ಅವರ ಸ್ನೇಹಜೀವಿ ಅಕ್ಕ, ಲೀಲಾ ಮುದ್ಗಾಲಿ ಅವರ ಬಾಲ್ಯದ ಆ ದಿನಗಳು, ಭಾರತಿ ಜೋಶಿ ಅವರ ಗೆಳತಿ, ಡಾ.ಮಾಲತಿ ಆದವಾನಿ ಅವರ ಸಹೋದ್ಯೋಗಿ, ಸೀಮಾ ಕುಲಕರ್ಣಿ ಅವರ ಆದರ್ಶ ತಾಯಿ, ನಿಮಿಷಾ ಪಟ್ಟಣಶೆಟ್ಟಿ ಅವರ ಚೈತನ್ಯಮೂರ್ತಿ, ಶ್ರೀಶೈಲ ಪಟ್ಟಣಶೆಟ್ಟಿ ಅವರ ಮಮತೆಯ ಕತೆ, ಡಾ.ಎ. ಮುರಿಗೆಪ್ಪ ಅವರ ಸ್ತ್ರೀ ಪಾತ್ರಧಾರಿಣಿ, ಡಾ. ಗುರುದೇವಿ ಹುಲೆಪ್ಪನವರಮಠ ಅವರ ಅರಿವೆ ಗುರು, ಡಾ.ಶಾಲಿನಿ ರಘುನಾಥ ಅವರ ಒಂದು ಸಂವಾದ ಲೇಖನಗಳು ಸಂಕಲನಗೊಂಡಿವೆ.

ಪಕಳೆ ಎರಡು: ಆತ್ಮಕಥನ ಭಾಗದಲ್ಲಿ ಮಾಲತಿ ಪಟ್ಟಣಶೆಟ್ಟಿ ಅವರ ನೆನಪಿನ ಹನಿಗಳು ಸಂಕಲನಗೊಂಡಿದೆ.

ಪಕಳೆ ಮೂರು: ಕೃತಿ ಸಮೀಕ್ಷೆ ಯಲ್ಲಿ ಡಾ. ಶಾಂತಾ ಇಮ್ರಾಪೂರ ಅವರ ಜೀವನಪ್ರೀತಿಯ ಕಾವ್ಯ, ಡಾ. ಚೆನ್ನವೀರ ಕಣವಿ ಅವರ ಬಾ ಪರೀಕ್ಷೆಗೆ(ಮುನ್ನುಡಿ), ಜಗದೀಶ ಮಂಗಳೂರಮಠ ಅವರ ಬಾ ಪರೀಕ್ಷೆಗೆ ಕುರಿತು, ಪು.ತಿ.ನ ಅವರ ತಂದೆ ಬದುಕು ಗುಲಾಬಿ(ಮುನ್ನುಡಿ), ಡಾ. ಬಸವರಾಜ ಸಬರದ ಅವರ ತಂದೆ ಬದುಕು ಗುಲಾಬಿ ಕುರಿತು, ಡಾ. ಪಂಚಾಕ್ಷರಿ ಹಿರೇಮಠ ಅವರ ತಂದೆ ಬದುಕು ಗುಲಾಬಿ ಸಹೃದಯ ಸ್ಪಂದನ, ಸತೀಶ ಕುಲಕರ್ಣಿ ಅವರ ಒಂದು ಸಂಕಲನ:ಎರಡು ಓದು, ಡಾ.ಬಿ.ಎ. ಸನದಿ ಅವರ ಹೂದಂಡಿ:ಆಯ್ದ ಕವಿತೆಗಳ ಸಂಗ್ರಹ(ಮುನ್ನುಡಿ), ಎಂ.ಆರ್. ಕಮಲ ಅವರ ಅರಳುವ ನೂರು ನೋವಿನ ಪಕಳೆಗಳು, ಬಸವರಾಜ ವಕ್ಕುಂದ ಅವರ ಅನುಭವದ ಬೆಂಕಿಯಲ್ಲಿ ಅರಳಿದ ಹೂ ದಂಡಿ, ಡಾ.ಪ್ರಹ್ಲಾದ ಅಗಸನಕಟ್ಟೆ, ಡಾ.ಎಸ್.ಪಿ. ಪದ್ಮಪ್ರಸಾದ ಅವರ ಹೂ ದಂಡಿ ಬಗೆಗೆ, ವೈದೇಹಿ ಅವರ ಮಾತು ಮೌನದ ಹೊದಿಕೆ(ಮೌನ ಸುಗಂಧಿ, ಆ ನಿಶ್ಯಬ್ಧ ಗೀತೆ), ಡಾ. ಎಚ್.ಎಂ. ಮಹೇಶ್ವರಯ್ಯ, ಪ್ರೊ.ನಿಸಾರ್ ಅಹಮದ್ ಅವರ ಮೌನ ಕರಗುವ ಹೊತ್ತು(ಮುನ್ನುಡಿ), ಸತೀಶ ಕುಲಕರ್ಣಿ ಅವರ ಏಕಾಂತದಿಂದ ಲೋಕಾಂತದತ್ತ:ದಾಹತೀರ, ಡಾ.ಜಿ.ಎಂ.ಹೆಗಡೆ ಅವರ ದಾಹತೀರ, ವಿಷ್ಣುನಾಯ್ಕ ಅವರ ಮನೆ, ಹಂಬಲ, ಸಹಗಮನ, ಡಿ.ಬಿ. ಢಂಗ ಅವರ ಸಾಂದರ್ಭಿಕ ಕವಿತೆಗಳು, ರವಿ ಉಪಾಧ್ಯ ಅವರ ನದಿಯಾಗಲಾರೆ, ಡಾ.ಎ. ಮುರಿಗೆಪ್ಪ ಅವರ ತಾಜಮಹಲುಗಳ ಕಟ್ಟಬೇಡ, ಪ್ರೊ.ಚಂದ್ರಶೇಖರ ಪಾಟೀಲರ ತಿಮ್ಮಕ್ಕನ ಕನಸು, ಸ.ಉಷಾ ಅವರ ನಿಶಾಂತ ಪ್ರೀತಿಯ ಮಾಲತೀತಾಯಿಗೆ, ಸುನಂದಾ ಪ್ರಕಾಶ ಕಡಮೆ ಅವರ ಕಣ್ಣ ಬೆಳಕಿನ ಮೌನ( ಇಂಥ ಕದಗಳು, ಆ ಒಂದು ಗೂಡಿಗೆ), ದೇಶಪಾಂಡೆ ಸುಬ್ಬರಾಯರ ಪಂಕ್ತಿ ಮುಖೇನ ಪದ್ಯಾಭಿಸರಣ, ಬಸು ಬೇವಿನಗಿಡದ ಅವರ ಎದೆಯ ಹಾಡಾದ ನಮ್ಮ ಹಾಡು, ಸವಿತಾ ನಾಗಭೂಷಣ ಅವರ ಮೌನ ಮೊಗ್ಗೆಯನೊಡೆದು ಮಾತರಳಿ ಬಂದಂತೆ, ಡಾ. ಗುಂಡಣ್ಣ ಕಲಬುರ್ಗಿ ಅವರ ಕಾವ್ಯ: ಮಾನವೀಯ ಸಂಬಂಧಗಳ ಅನಾವರಣ, ಡಾ. ಕಮಲಾ ಹೆಮ್ಮಿಗೆ ಅವರ ಕಾವ್ಯದಲ್ಲಿ ಸ್ತ್ರೀ ಸಂವೇದನೆ, ಡಾ.ಗುರುಲಿಂಗ ಕಾಪನೆ ಅವರ ಸೂರ್ಯ ಮುಳುಗುವುದಿಲ್ಲ(ಮುನ್ನುಡಿ), ಡಾ.ಎಸ್. ಪಿ. ಪದ್ಮಪ್ರಸಾದ್ ಅವರ ಸೂರ್ಯ ಮುಳುಗುವುದಿಲ್ಲ, ಡಾ.ಎಲ್.ಎಸ್. ಶೇಷಗಿರಿರಾವ್ ಅವರ ಇಂದು ನಿನ್ನಿನ ಕಥೆಗಳು(ಮುನ್ನುಡಿ), ಸಿ.ಎಂ. ಮುನಿಸ್ವಾಮಿ ಅವರ ಇತ್ತೀಚಿನ ಕತೆಗಳು, ಪ್ರೊ.ದುಷ್ಯಂತ ನಾಡಗೌಡ ಅವರ ಕತೆಗಳಲ್ಲಿ ಪ್ರೇಮ-ಪ್ರಣಯದ ಪರಿಕಲ್ಪನೆ, ಡಾ.ಅರುಂಧತಿ ಎಫ್. ಬದಾಮಿ ಅವರ ಕಥಾ ಸಾಹಿತ್ಯದಲ್ಲಿಯ ಪಾತ್ರ ಪ್ರಪಂಚ, ಡಾ.ರಾಜೇಶ್ವರಿ ಮಹೇಶ್ವರಯ್ಯ ಅವರ ಕಥೆಗಳು: ಕೆಲವು ಭಾಷಿಕ ಅಂಶಗಳು, ಡಾ.ಸಿ.ವಿ. ಪ್ರಭುಸ್ವಾಮಿಮಠರ ಬಸವರಾಜ ಕಟ್ಟೀಮನಿ, ಡಾ.ಹೆಚ್.ಎ. ಪಾರ್ಶ್ವನಾಥ್ ಅವರ ವ್ಯಕ್ತಿಚಿತ್ರಣ ನಿಪುಣೆ ಲೇಖನಗಳು ಸಂಕಲನಗೊಂಡಿದ್ದು,

ಪಕಳೆ ನಾಲ್ಕು; ಭಾರತೀಯ ಭಾಷೆಗಳಲ್ಲಿ ಸ್ವಾತಂತ್ರ್ಯೋತ್ತರ ಮಹಿಳಾ ಕಾವ್ಯ ವಿಭಾಗದಲ್ಲಿ ವಿವಿಧ ಲೇಖಕಿಯರ ಕಾವ್ಯ ಹಾಗೂ ಅನುವಾದಿತ ಕಾವ್ಯ ಸಂಕಲನಗೊಂಡಿವೆ.

About the Author

ಶಿವಾನಂದ ಗಾಳಿ
(01 February 1946 - 04 March 2018)

ಹಿರಿಯ ಸಾಹಿತಿ, ಪ್ರಕಾಶನ ಶಿವಾನಂದ ಗಾಳಿ ಅವರು ಮೂಲತಃ ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮದವರು. ತಂದೆ -ಶಾಂತಪ್ಪ ಹಾಗೂ ತಾಯಿ-ಸುಂದರಮ್ಮ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದರೊಂದಿಗೆ ‘ಮಿರ್ಜಿ ಅಣ್ಣಾರಾಯರ ಬದುಕು-ಸಾಹಿತ್ಯ’ ಕುರಿತು ಡಾ. ಗುರುಲಿಂಗ ಕಾಪಸೆಯವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದ ಅವರು ನರಗುಂದದ ಸಿದ್ಧೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕ ವತ್ತಿ ಪ್ರಾರಂಭಿಸಿದರು. ನಂತರ ಧಾರವಾಡದ ಜೆ.ಎಸ್.ಎಸ್. ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ರೀಡರ್ ಆಗಿ, ಸಿಲೆಕ್ಷನ್ ಗ್ರೇಡ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ 1999ರಿಂದ 2006ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ...

READ MORE

Related Books