ಮನೆಯಂಗಳದಲ್ಲಿ ಔಷಧಿವನ

Author : ವಸುಂಧರಾ ಎಂ

Pages 200

₹ 200.00




Year of Publication: 2014
Published by: ನವಕಾರ್ನಾಟಕ ಪಬ್ಲಿಕೇಷನ್‌
Address: ದೇವನಗರ ,ಕೆಂಪೇಗೌಡ ರೋಡ್‌, ಬೆಂಗಳೂರು 560009
Phone: 7353530805

Synopsys

ಮನೆಯಂಗಳದಲ್ಲಿ ಔಷಧಿವನ ಎಂಬುದು ವಸುಂಧರಾ ಎಂ ಅವರ ಕೃತಿಯಾಗಿದೆ. ಮನೆಯ ಸುತ್ತ ಇದ್ದಷ್ಟು ಸ್ಥಳದಲ್ಲಿ ಹೊಂದಿಸಿಕೊಂಡು ಔಷಧಿ ಮತ್ತು ಸುಗಂಧ ಸಸ್ಯಗಳನ್ನು ಬೆಳೆಸಬೇಕೆನ್ನುವ ಸದಾಶಯದಿಂದ ರೂಪುಗೊಂಡ ಪುಸ್ತಕವಿದು. ಮುಖ್ಯವಾಗಿ ಮಲೆನಾಡು, ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಿಗೆ ಸೂಕ್ತವಾದ ಸಸ್ಯಗಳನ್ನು ಬೆಳೆಸುವ ಬಗ್ಗೆ ಇಲ್ಲಿ ನಿರೂಪಿಸಲಾಗಿದೆ. ಗಿಡಮೂಲಿಕೆಗಳ ಔಷಧೀಯ ಗುಣಗಳು, ಬಳಕೆಯ ವಿಧಾನ ಹಾಗೂ ಬೇರೆ ಬೇರೆ ಭಾಷೆಯಲ್ಲಿ ಮೂಲಿಕೆಗಳ ಹೆಸರುಗಳ ವಿವರಗಳನ್ನು ನೀಡಿದ್ದಾ‌ರೆ. ತುಂಬಾ ಸರಳ ವಿವರಣೆಗಳಿಂದ ಕೂಡಿರುವ ಈ ಪುಸ್ತಕವು ಸಾಮಾನ್ಯ ಓದುಗನಿಗೂ ಉಪಯುಕ್ತವಾಗಿದ್ದು, ಮನೆಯ ಸುತ್ತಮುತ್ತ ಇರುವ ಜಾಗಗಳನ್ನು ಸೂಕ್ತವಾಗಿ ಬಳಸಿ ಸಣ್ಣ ಮೂಲಿಕಾ ವನ ನಿರ್ಮಾಣಕ್ಕೆ ಪ್ರೇರಣೆ ನೀಡಬಲ್ಲುದು. ಪ್ರತಿ ಸಸ್ಯವನ್ನು ವಿವಿಧ ಭಾಷೆಯಲ್ಲಿ ಕರೆಯುವ ರೀತಿ, ಅವುಗಳು ದೊರೆಯುವ ಸ್ಥಳಗಳನ್ನೂ ಉಲ್ಲೇಖಿಸಿರುವುದು ಓದುಗರಿಗೆ ಹೆಚ್ಚಿನ ಅನುಕೂಲವಾಗಿದ್ದು, ಸಸ್ಯಲೋಕದ ಸಮಗ್ರ ಚಿತ್ರಣವನ್ನು ಮೂಡಿಸುತ್ತದೆ. 

About the Author

ವಸುಂಧರಾ ಎಂ
(20 May 1957)

ವಿಜ್ಞಾನ, ಆರ್ಯುವೇದ ಕುರಿತು ಹಲವು ಕೃತಿಗಳನ್ನು ರಚಿಸಿರುವ ಲೇಖಕಿ ವಸುಂಧರಾ ಎಂ. 1957 ಮೇ 20ರಂದು ಜನಿಸಿದರು. ಮಂಡ್ಯ ಇವರ ಹುಟ್ಟೂರು. ತಾಯಿ ಸಾವಿತ್ರಮ್ಮ. ತಂದೆ ಮರಿಯಪ್ಪ. ವಿಜ್ಞಾನ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.  ಆರ್ಯುವೇದ, ಗಿಡಮೂಲಿಕೆಗಳ ಕುರಿತು ಅಧ್ಯಯನದಲ್ಲಿ ನಿರತರಾಗಿದ್ದ ಇವರು ಇದಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. ಸೌಂದರ್ಯವರ್ಧಕ ಗಿಡಮೂಲಿಕೆಗಳು, ಮನೆಯಂಗಳದಲ್ಲಿ ಔಷಧಿ, ಔಷಧಿ ಮತ್ತು ಸುಗಮಧ ಸಸ್ಯಗಳ ಕೈಪಿಡಿ, ಔಷಧಿ ಬೆಳೆಗಳ ಬೇಸಾಯ ಕ್ರಮಗಳು, ಔಷಧಿ ಬೆಳೆಗಳ ತಾಂತ್ರಿಕ ತರಬೇತಿ ಕೈಪಿಡಿ, ಔಷಧಿ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳು ಮತ್ತು ...

READ MORE

Related Books