ಮಣಿ ಮಾಲೆ

Author : ಬಿ.ಆರ್. ಲಕ್ಷ್ಮಣರಾವ್

Pages 208

₹ 150.00




Year of Publication: 2015
Published by: ಅಂಕಿತ ಪುಸ್ತಕ
Address: 53, ಶಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 08026617755

Synopsys

ಹಿರಿಯ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಅವರು ತಮ್ಮ ಆಪ್ತರ ಕುರಿತು ಬರೆದ ನುಡಿಚಿತ್ರಗಳಿವು. ಈ ಚಿತ್ರಗಳಲ್ಲಿಯ ಅವರ ಹಿರಿ-ಕಿರಿಯ ಗೆಳೆಯರನೇಕರು ಕನ್ನಡ ಸಾಹಿತ್ಯ, ಸಂಗೀತ, ಸಿನೆಮಾಗಳಲ್ಲಿ ಹೆಸರು ಮಾಡಿದವರು. ಕನ್ನಡ ಪ್ರಪಂಚದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಓದಿ ಕೇಳಿ ಪರಿಚಿತರು. ಇಂಥವರ ಜೊತೆಗಿನ ತಮ್ಮ ಒಡನಾಟದ ಪರಿಯನ್ನು ಒಬ್ಬ ಕವಿ ಹೇಳಹೊರಟರೆ ಆ ವಿವರಣೆಗೆ ದಕ್ಕುವ ದೀಪ್ತತೆ ಬೇರೆಯೇ. ಈ ಸಂಕಲನ ಅದಕ್ಕೆ ಉತ್ತಮ ಉದಾಹರಣೆಯಂತಿದೆ ಎನ್ನುತ್ತಾರೆ ಲೇಖಕಿ ವೈದೇಹಿ.

ಕವಿಗೆ ಸ್ವತಃ ಅರಿಯದಂತೆ ಇಲ್ಲಿ ಅರಳಿರುವುದು ಅವನೊಳಗೆ ಹುದುಗಿದ್ದ ಹೃದಯಂಗಮ ಗದ್ಯಶೈಲಿ. ಕಣ್ಮುಂದೆ ಕಡೆದು ನಿಲ್ಲಿಸಿದ ಕನ್ನಡದ ಸಾಂಸ್ಕೃತಿಕ ವ್ಯಕ್ತಿತ್ವಗಳ ಮುಖ್ಯ ಮಾದರಿಗಳಷ್ಟೇ ಅಲ್ಲ ಇವು. ಒಂದು ದೃಷ್ಟಿಯಲ್ಲಿ ಲೇಖಕರ ಆತ್ಮಕಥನದ ಚಿತ್ರಪಟಗಳು ಕೂಡ. ಮನೆಜಗಲಿಯಲ್ಲಿ ಕುಳಿತು ತನ್ನ ಒಡನಾಡಿಗರ ಸುತ್ತ ಮಾತು-ಕತೆ-ನೆನಕೆಯಲ್ಲಿ ಲವಲವಿಕೆಯಿಂದ ಹಂಚುವ ಅನುಭವದ ಸಂಚಿಯೂ. ವಿಶೇಷವೆಂದರೆ ಈ ನುಡಿರೇಖೆಗಳ ಮೂಲಕವೇ ಹಾಸ್ಯ, ಚೇಷ್ಟೆ ಗುಣ, ಲೋಕಾಭಿರಾಮಗುಣ, ದೇಶಾವರಿ ನಗೆ, ಗಾಂಭೀರ್ಯ, ವಿಷಾದ, ತಳಮಳ, ಭಾವನಾಶೀಲತೆ ಮುಂತಾದವು ಇಲ್ಲಿ ಸಮ್ಮಿಳಿತಗೊಂಡಿವೆ.

About the Author

ಬಿ.ಆರ್. ಲಕ್ಷ್ಮಣರಾವ್
(09 September 1946)

ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್‌. ಲಕ್ಷ್ಮಣರಾವ್‌ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...

READ MORE

Related Books