ಮಂಜೀ ಮಹಾದೇವನ ಗಂಜೀ ಪುರಾಣ

Author : ಜಿ.ಎಸ್. ಭಟ್

Pages 432

₹ 315.00




Year of Publication: 2020
Published by: ಚಾರುಮತಿ ಪ್ರಕಾಶನ
Address: 224, 4ನೇ ಮುಖ್ಯರಸ್ತೆ, ಕಮಲನಗರ, ಚಾಮರಾಜಪೇಟೆ, ಬೆಂಗಳೂರು-560018

Synopsys

ಮಂಜೀ ಮಹಾದೇವನ ಗಂಜೀ ಪುರಾಣ-ಈ ಕೃತಿಯು ಯಕ್ಷಗಾನ ಆವರಣದ ಸಾಮಾಜಿಕ ಕಾದಂಬರಿ. ಜಿ.ಎಸ್. ಭಟ್ಟ ಅವರು ರಚಿಸಿದ್ದು, ಸಾಮಾಜಿಕ ವಿದ್ಯಮಾನ, ವಿಷಯ ವಸ್ತುವನ್ನು ಯಕ್ಷಗಾನ ಕಲೆಯಲ್ಲಿ ಪ್ರಚುರಪಡಿಸುವ ಸಾಹಿತ್ಯ ಪ್ರಕಾರವಿದು. ತನ್ನ ವಿಶಿಷ್ಟ ಶೈಲಿಯೊಂದಿಗೆ ಓದಗರ ಗಮನ ಸೆಳೆಯುತ್ತದೆ.

About the Author

ಜಿ.ಎಸ್. ಭಟ್

ಹಿರಿಯ ಲೇಖಕ ಜಿ.ಎಸ್ ಭಟ್ (ಸಾಗರ) 1944ರಲ್ಲಿ ಹೊನ್ನಾವರದ ಗಜನಿ ಮಠದಲ್ಲಿ ಜನಿಸಿದರು. ಸಾಗರದ ಲಾಲ ಬಹುದ್ದೂರ್ ಶಾಸ್ತ್ರೀ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನಿವೃತ್ತರಾಗಿರುವ ಜಿ.ಎಸ್ ಭಟ್ ಅವರು ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಮತ್ತು ಪರಿಣತಿ ಹೊಂದಿರುವರು. ಇವರು ಯಕ್ಷಗಾನ ಕುರಿತ ಸಂಶೋಧನಾ ಲೇಖನಗಳು, ಕತೆ, ಕವಿತೆ, ಅಂಕಣಗಳಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ರಂಗಭೂಮಿ, ಯಕ್ಷಗಾನ ವಿದ್ವಾಂಸರಾಗಿರುವ ಅವರು ಸಾಂಸ್ಕೃತಿಕ, ಸಂಘಟಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.  ಕೃತಿಗಳು: ಕುಮಾರವ್ಯಾಸನ ಕರ್ಣಾಟಭಾರತ ಕಥಾ ಮಂಜರಿ ಪ್ರವೇಶ, ರಾಘವಾಂಕನ ಹರಿಶ್ಚಂದ್ರಕಾವ್ಯ ಪ್ರವೇಶ, ಅಕ್ಕಮ್ಮಜ್ಜಿಯ ಗಂಡನೂ ವಾಣಾಸಜ್ಜನ ಹೆಣ್ತಿಯೂ, ಕೆರೆಮನೆ ಶಂಭು ಹೆಗಡೆ ಅಧ್ಯಯನ, ಪಾವೆಂ ಕಸ್ತೂರಿ, ಮಂಜೀ ಮಹಾದೇವನ ಗಂಜೀ ಪುರಾಣ, ನೆನಪಿನ ರಂಗಸ್ಥಳ,    ...

READ MORE

Related Books