ಮಂಕುತಿಮ್ಮನ ಕಗ್ಗ: ಅರ್ಥಾನುಸಂಧಾನ

Author : ಎ. ನರಸಿಂಹ ಭಟ್ಟ

Pages 536

₹ 400.00




Year of Publication: 2021
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020

Synopsys

ಸಾಹಿತ್ಯ ತಪಸ್ವಿ ಎಂದೇ ಖ್ಯಾತಿ ಡಿ.ವಿ.ಜಿ ಅವರು ರಚಿಸಿದ ಮಂಕುತಿಮ್ಮನ ಕಗ್ಗ ಎಂಬ ಅನುಸಂಧಾನದ ಬೃಹತ್ ಕೃತಿಯನ್ನು ವಿದ್ವಾಂಸ ಎ. ನರಸಿಂಹ ಭಟ್ಟರು ಸರಳವಾಗಿ ಕನ್ನಡಕ್ಕೆ ಅನುವಾದಿಸಿ, ಅರ್ಥ ವಿವರಣೆಯನ್ನೂ ನೀಡಿದ್ದಾರೆ. ಕನ್ನಡದ ಭಗವದ್ಗೀತೆಯಂದೇ ಖ್ಯಾತಿ ಪಡೆದ ಈ ಕೃತಿಯು ಬದುಕಿನ ಎಲ್ಲ ಆಯಾಮಗಳನ್ನು ಪ್ರತಿನಿಧಿಸಿ, ಚರ್ಚಿಸುತ್ತದೆ ಮಾತ್ರವಲ್ಲ; ಸಮಸ್ಯೆಗಳಿಗೆ ಪರಿಹಾರವೂ ಸೂಚಿಸುತ್ತದೆ ಮತ್ತು ಬದುಕನ್ನು ಸೂಕ್ತವಾಗಿ ಅರ್ಥೈಸಿಕೊಳ್ಳಲು ಮಾರ್ಗದರ್ಶನವನ್ನು ನೀಡುತ್ತದೆ.

About the Author

ಎ. ನರಸಿಂಹ ಭಟ್ಟ
(20 August 1931 - 19 February 2022)

ಎ. ನರಸಿಂಹ ಭಟ್ಟರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಡ್ಯನಡ್ಕದವರು. 1931 ಆಗಸ್ಟ್ 20 ರಂದು ಜನನ. ಕಾಸರಗೋಡಿನಲ್ಲಿ ವಾಸ್ತವ್ಯವಿದ್ದರು. ಬಿ.ಇ.ಬಿ.ಟಿ ಹೈಸ್ಕೂಲ್ ಅಧ್ಯಾಪಕ ಪ್ರಶಿಕ್ಷಣ, ಅಧ್ಯಾಪನ ವಿಷಯ ಇಂಗ್ಲಿಷ್ ಮತ್ತು ಸಾಮಾಜಿಕ ಅಧ್ಯಯನ ಮಾಡಿದ್ದರು.  1954 ಜೂನ್ ನಲ್ಲಿ ಸಹಾಯಕ ಹೈಸ್ಕೂಲು ಅಧ್ಯಾಪಕ  ಸೈಂಟ್ ಜೋಸೆಫ್ಸ್ ಹೈಸ್ಕೂಲು ಬಜಪೆ, ಮುನಿಸಿಪಲ್ ಹೈಸ್ಕೂಲ್ ಹೊಸಪೇಟೆ, ಸೈಂಟ್ ಮೈಕಲ್ಸ್ ಹೈಸ್ಕೂಲು ಮಡಿಕೇರಿ, ಗವರ್ನ್‌ಮೆಂಟ್ ಹೈಸ್ಕೂಲು ಕಾಸರಗೋಡು  ಹಾಗೂ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳಮುನಿಯನ ಕಗ್ಗ ಮತ್ತು ಗೋವಿಂದಪೈಯವರ ಗೊಲ್ಗೊಥಾ ಮತ್ತು ...

READ MORE

Related Books