ಮರೆಯಾಗುತ್ತಿರುವ ಸಂಪ್ರದಾಯಗಳು

Author : ಸಿ.ಕೆ. ಪರಶುರಾಮಯ್ಯ

Pages 138

₹ 115.00




Year of Publication: 2019
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರತು-02
Phone: 08022107704

Synopsys

ಸಮಾಜದಲ್ಲಿಸಾಂಪ್ರದಾಯಿಕ ಆಚರಣೆಗಳಿರುವುದು ಸಾಮಾನ್ಯ. ವ್ಯಕ್ತಿ ಹುಟ್ಟಿದಂದಿನಿಂದ ಹಿಡಿದು ಸಾಯುವವರೆಗೂ ಆತ ಈ ಸಂಪ್ರದಾಯಗಳಿಂದ ಹೊರತಲ್ಲ. ಸಂಪ್ರದಾಯಗಳ ಮಹತ್ವ ಬಿಂಬಿಸುವ ಕೃತಿ ಇದು.

ಸಂಪ್ರದಾಯಗಳ ಮಾಹಿತಿ ಜೊತೆಗೆ ಅರ್ಥ ಸಹಿತ ವಿವರಗಳಿವೆ. ಜಾನಪದೀಯ ವಿದ್ಯಾರ್ಥಿಗಳಿಗೆ, ಸಮುದಾಯಗಳ ಅಧ್ಯಯನದ ಸಂದರ್ಭದಲ್ಲಿ ಆಕರಗ್ರಂಥವಾಗಿ ಬಳಸಬಹುದಾಗಿದೆ.

ಕಳೆದುಹೋಗುತ್ತಿರುವ ಕೆಲವು ಆಚಾರ ವಿಚಾರಗಳನ್ನು ಸವಿವರವಾಗಿ ಪೂರ್ಣವಾಗಿ ಕಣ್ಣಿಗೆ ಕಟ್ಟುವಂತೆ ಲೇಖಕ ಸಿ.ಕೆ.ಪರಶುರಾಮಯ್ಯ ಅವರು ನಿರೂಪಿಸಿದ್ದಾರೆ.

 

About the Author

ಸಿ.ಕೆ. ಪರಶುರಾಮಯ್ಯ

ಗಾದೆ ಗಾರುಡಿಗ ಸಿ.ಪಿ.ಕೆ. ಎಂದೇ ಖ್ಯಾತಿಯ  ಸಿ.ಕೆ. ಪರಶುರಾಮಯ್ಯ, ಚಿಕ್ಕನಾಯಕನಹಳ್ಳಿಯವರು. ಸರ್ಕಾರಿ ಸಾಹಿತ್ಯ ಬರೆದು ಜನರಿಗೆ ತಲುಪಿಸಬೇಕಾದ ಉದ್ಯೋಗದಲ್ಲಿದ್ದ ಅವರು, ಅಭಿವೃದ್ಧಿ ಸಾಹಿತ್ಯದೊಂದಿಗೆ  ಸ್ವಾರಸ್ಯ ನಿರೂಪಣೆ, ಸುಲಭ ಶೈಲಿ ಲೇಖನಗಳನ್ನು ಬರೆದವರು. ’ಜನಪದ’ ಪತ್ರಿಕೆಯ ಸಂಪಾದಕರು. ಈಗಾಗಲೇ ಪ್ರಕಟಣೆ ಕಂಡ ’ಗಾದೆಗಳ ಸಂಕಲನ’ ಎಂಬ ಅಂಕಣದ ಬರಹಗಾರರು. ಅದೇ ಹೆಸರಿನ ಪುಸ್ತಕವನ್ನು ಪ್ರಕಟಿಸಿದ್ದಾರೆ. ‘ಮರೆಯಾಗುತ್ತಿರುವ ಸಂಪ್ರದಾಯಗಳು’ ಅವರ ಮತ್ತೊಂದು ಕೃತಿ.  ...

READ MORE

Related Books