ಮರೆಯಬಾರದ ಇತಿಹಾಸಾಧ್ಯಾಯಗಳು

Author : ಎಸ್‌.ಆರ್‌. ರಾಮಸ್ವಾಮಿ

Pages 180

₹ 100.00




Year of Publication: 2004
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ಮರೆಯಬಾರದ ಇತಿಹಾಸಾಧ್ಯಾಯಗಳು ಪರಾಮಾರ್ಶ ಪ್ರಬಂಧಗಳು ಪುಸ್ತಕವನ್ನು ಎಸ್.ಆರ್.‌ ರಾಮಸ್ವಾಮಿ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ಇತಿಹಾಸ ವ್ಯಾಸಂಗದಿಂದ ಪ್ರಯೋಜನವಾಗಬೇಕಾದರೆ ರಾಜಕೀಯ ಸ್ಥಿತ್ಯಂತರಗಳ ಕಥನವಷ್ಟೇ ಸಾಕಾಗುವುದಿಲ್ಲ. ಆ ಘಟನಾವಳಿಗಳ ವಿಸ್ತ್ರತ ಹಿನ್ನೆಲೆಯ ಮತ್ತು ಜನಸಮುದಾಯಗಳ ಮೇಲೆ ಅವುಗಳ ಪರಿಣಾಮಸರಣಿಗಳ ಅರಿವೂ ಅವಶ್ಯವಾಗುತ್ತದೆ. ರಾಜಕೀಯಪ್ರಧಾನ ಕಥನದೊಡನೆ ಅಲ್ಪಪರಿಚಿತ ಆಯಾಮಗಳನ್ನೂ ಪರಿಚಯಿಸುವ ಆಶಯದವು ಈ ಗ್ರಂಥದೊಳಗಿನ ಪ್ರಬಂಧಗಳು. ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಕ್ರೈಸ್ತಮತವಿಸ್ತಾರಕರಿಂದ ಜಗತ್ತಿನಲ್ಲಿ ನಡೆದ ಕ್ರೌರ್ಯಸರಣಿಗಳು; ಹದಿನೆಂಟನೇ ಶತಮಾನದ ಸಂನ್ಯಾಸಿ ಆಂದೋಲನ; ಇಪ್ಪತ್ತನೇ ಶತಮಾನದ ಆರಂಭಕಾಲದ ಕೋಮಗಾತ ಮರು ದುರಂತ; ಇಪ್ಪತ್ತನೇ ಶತಮಾನದ ಆರಂಭದಶಕಗಳಲ್ಲಿ ವೈಚಾರಿಕಕ್ಷೇತ್ರದಲ್ಲಿ ನಡೆದ ಸ್ವಾತಂತ್ರ್ಯಾಭಿಮುಖ ಪ್ರಯಾಸಗಳು; ಎರಡು ಮಹಾಯುದ್ಧಗಳು ಮೈಲಿಗಲ್ಲುಗಳೆನಿಸಿರುವ ಈ ಹಲವು ಇತಿಹಾಸಖಂಡಗಳನ್ನು ಕುರಿತ ವಿಶ್ಲೇಷಣಾತ್ಮಕ ಪ್ರಬಂಧಗಳ ಸಂಕಲನ – ’ಮರೆಯಬಾರದ ಇತಿಹಾಸಾಧ್ಯಾಯಗಳು’ ಎಂದು ಪುಸ್ತಕದ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.

About the Author

ಎಸ್‌.ಆರ್‌. ರಾಮಸ್ವಾಮಿ

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...

READ MORE

Related Books