ಮರೆಯಲಾಗದ ನಾಟಕಕಾರ ಮರಡಿಹಳ್ಳಿ ಸೀತಾರಾಮರೆಡ್ಡಿ

Author : ಮೀರಾಸಾಬಿಹಳ್ಳಿ ಶಿವಣ್ಣ

Pages 170

₹ 60.00




Year of Publication: 2007
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ನಾಟಕಕಾರ ಮರಡಿಹಳ್ಳಿ ಸೀತಾರಾಮರೆಡ್ಡಿ ಆಧುನಿಕ ಧ್ವನಿ ಮತ್ತು ಯುದ್ಧ ವಿರೋಧಿ ನಿಲುವಿನಂದಲೇ ಎಲ್ಲರ ಮನೆಮಾತದವರು. ಕೇವಲ ನಾಟಕ ಕ್ಷೇತ್ರದಲ್ಲಿ ಮಾತ್ರ ಗುರುತಿಸಿಕೊಂಡಿದ್ದಲ್ಲದೆ, ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ಅಲ್ಲದೆ ರೈತನಾಗಿ,ಪ್ರಗತಿಪರರಾಗಿ, ಭೂದನ ಚಳುವಳಿಯ ಮುಂಚೂಣಿಗಾರರಾಗಿ, ಪ್ರಚಾರಕರಾಗಿ, ತಮನ್ನು ತಾವು ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಉತ್ತಮ ನಾಯಕತ್ವ ಗುಣ ಹೊಂದಿದ್ದರು. ಕೃಷಿಯ ಪ್ರಯೋಗ ಶೀಲ ಸಂಘಟಗರಾಗಿ ಛಾಪನ್ನು ಮೂಡಿಸಿದವರು. ಇವರ ಬಗ್ಗೆ ಮೀರಾಸಾಬಿಹಳ್ಳಿ ಶಿವಣ್ಣ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಮೀರಾಸಾಬಿಹಳ್ಳಿ ಶಿವಣ್ಣ

ಚಿತ್ರದುರ್ಗ ಜಿಲ್ಲೆಯ ಆಂಧ್ರಗಡಿಯಂಚಿನ ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿಯವರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ (1952) ಜಾನಪದ ವಿದ್ವಾಂಸರು. ಮೀರಾಸಾಬಿಯಳ್ಳಿಯ ಪಟೇಲರಾದ ಪಟೇಲ್ ಬೊಮ್ಮೇಗೌಡ  ಅವರ ತಂದೆ. ಕರಿಯಮ್ಮ ತಾಯಿ. ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಬಿ.ಎ. (ಆನರ್) (1972). ಎಂ.ಎ. (1974) ಪದವಿ ಪಡೆದವರು. ಮೈಸೂರು ವಿಶ್ವವಿದ್ಯಾನಿಲಯದಿಂದ “ಕಾಡುಗೊಲ್ಲರ ಇಬ್ಬರು ಸಾಂಸ್ಕತಿಕ ವೀರರು (ಎತ್ತಪ್ಪ-ಮುಂಜಪ)- ಒಂದು ಅಧ್ಯಯನಕ್ಕಾಗಿ ಪಿಎಚ್.ಡಿ (1996) ಪದವಿ ದೊರೆಯಿತು. ಎರಡು ಬಾರಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ (1984-1987 ಮತ್ತು 1998-2001) ಸೇವೆ ಸಲ್ಲಿಸಿರುವ ಅವರಿಗೆ ಜಾನಪದ ಕ್ಷೇತ್ರಕಾರ್ಯಕ್ಕಾಗಿ ಜಿ.ಶಂ.ಪ ಜಾನಪದ ತಜ್ಞ ಪ್ರಶಸ್ತಿ' (2011) ನೀಡಿ ...

READ MORE

Related Books