ಮರೆಯುವ ಮುನ್ನ...

Author : ಸಿದ್ಧರಾಮ ಹೊನ್ಕಲ್

Pages 136

₹ 130.00




Year of Publication: 2022
Published by: ಬೆರಗು ಪ್ರಕಾಶನ
Address: ಕಡಣಿ, ಅಲ್‌ಮೇಲ್‌ ತಾಲ್ಲೂಕು, ವಿಜಯಪುರ- 586202
Phone: 9945922151

Synopsys

ಲೇಖಕ ಸಿದ್ಧರಾಮ ಹೊನ್ಕಲ್ ಅವರ ಆತ್ಮಕಥನ ಮಾದರಿಯ ಲಲಿತ ಪ್ರಬಂಧ ಸಂಕಲನ ʻಮರೆಯುವ ಮುನ್ನ...ʼ. ಹಲವಾರು ಮೌಲಿಕ ವಿಷಯಗಳು ಹಾಗೂ ಚಿಂತನಾ ಲಹರಿಗಳಲ್ಲಿ ಜೀವನ, ಪ್ರೇಮ, ವಾತ್ಸಲ್ಯ, ತಮಾಷೆ, ಉದಾರ ಮನಸ್ಸು, ಆರ್ದ್ರ ಭಾವನೆಗಳು ಇಲ್ಲಿ ಅನಾವರಣಗೊಂಡಿವೆ. ಹೀಗೆ 30ಕ್ಕೂ ಹೆಚ್ಚು ಆತ್ಮಕಥನ ಮಾದಿರಿಯ ಬರಹಗಳಿವೆ. ಇದು ಲೇಖಕರ ಐದನೇ ಲಲಿತ ಪ್ರಬಂಧ ಸಂಕಲನವಾಗಿದೆ. 

 ಕೃತಿಯಲ್ಲಿ ಲೇಖಕಿ ಕಮಲಾ ಹೆಮ್ಮಿಗೆ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಸಮಕಾಲೀನತೆಗೆ ಸ್ಪಂದಿಸುವ, "ಬದುಕು ದುಬಾರಿಯಾದ ಬಗೆ..",ಕೊರೋನಾ ಕಾಲದ ವೈಪರಿತ್ಯಗಳನ್ನು ಚಿತ್ರಿಸಿದೆ.ಬಹುಪಾಲು ಭಾರತೀಯರಿಗೆ ಹೊರೆಯಾದ ವ್ಯಾದಿಯ ಕುರಿತು ಲಲಿತವಾದ ಶೈಲಿಯಲ್ಲಿ ಹಂಚಿಕೊಂಡಿದ್ದಾರೆ ಹೊನ್ಕಲ್ ಅವರು. "ಹೀಗೊಂದು ಕಾಡುವ ವ್ಯಥೆಯ ಕಥೆ.." ಕೂಡ ಇದೇ ಜಾಡಲ್ಲಿದೆ. ರೈತಪರ ಧೋರಣೆಗೆ ಇದು ನಿದರ್ಶನ.ಇದನ್ನು ಓದುತ್ತಿದ್ದರೆ "Humour is a major deffence against minor troubles." ಎಂಬ ಮಾತಿಗೆ ನಾವು ದನಿಗೂಡಿಸಬಹುದಲ್ಲವೇ? ಇರಲಿ ಎಂದಿದ್ದಾರೆ. 

 ಪುಸ್ತಕದ ಪರಿವಿಡಿಯಲ್ಲಿ ʻಲೇಖಕನ ಹೊಸ ಹೊಸ ಅನುಭವಗಳುʼ, ʻಬಟ್ಟೆ ಒಗೆಯುವ ಮೆಷಿನ್‌ನಲ್ಲಿ ದೇವರು ಕೊಟ್ಟ ನೋಟುಗಳು- ಒಂದು ಪವಾಡʼ, ʻಗುಡ್ಡ ಕಡಿದು ಇಲಿ ಹಿಡಿದ ಪ್ರಸಂಗʼ, ʻಗಜಲ್‌ ಬರೆದ ಕಥೆ ನಿಮ್ಮೊಂದಿಗೆʼ, ʻಭಾವಲೋಕದಲ್ಲಿ ಒಂದು ಸುಂದರ ಪಯಣʼ ಸೇರಿ ಒಟ್ಟು 32 ಶೀರ್ಷಿಕೆಗಳ ಪ್ರಬಂಧಗಳಿವೆ. 

About the Author

ಸಿದ್ಧರಾಮ ಹೊನ್ಕಲ್
(22 December 1960)

ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು.  ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು.  ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...

READ MORE

Related Books