ಮಾರ್ಗ-೪

Author : ಎಂ.ಎಂ. ಕಲಬುರ್ಗಿ

Pages 564

₹ 450.00




Year of Publication: 2004
Published by: ಸಪ್ನ ಬುಕ್ ಹೌಸ್

Synopsys

ಈ ಸಂಪುಟದ ಪ್ರಬಂಧಗಳು ವಿಷಯ ವೈವಿಧ್ಯತೆಯಿಂದ ಕೂಡಿವೆ. ವರ್ಗೀಕರಣ ಮಾಡುವುದು ಸಾಧ್ಯವಿಲ್ಲ. ಪ್ರಾಚೀನ ಕನ್ನಡ ಸಾಹಿತ್ಯ, ಧರ್ಮ, ವಚನಸಾಹಿತ್ಯ - ಶರಣ ಧರ್ಮ, ವೀರಶೈವ ಧರ್ಮ ಚತುರಾಚಾರ್ಯರ ಪರಿಕಲ್ಪನೆ ಮತ್ತು ಅವರ ಪೀಠವಿಚಾರ, ಪಂಚಪೀಠಗಳ ಚರ್ಚೆ, ಪಂಚಮಠ, ಪಂಚಮಸಾಲಿ ಪರಿಕಲ್ಪನೆ, ಕುರುಬ-ಲಿಂಗಾಯತ ಸಮಾಜ, ಶೈವರ ದೇವಾಲಯಗಳು, ಕೃಷ್ಣದೇವರಾಯ: ತೆಲಗು ಸಂಸ್ಕೃತಿಯ ಆಕ್ರಮಣ, ವ್ಯಕ್ತಿನಾಮಗಳು, ಗ್ರಾಮನಾಮಗಳು, ವಿಷ್ಣುವರ್ಧನ; ತಮಿಳು ಸಂಸ್ಕೃತಿಯ ಆಗಮನ, ಚಾಮುಂಡರಾಯನ ತಮಿಳು ಪ್ರೀತಿ, ಗಂಗರಾಜನ ಮರಾಠಿ ಪ್ರೀತಿ, ಸಿದ್ಧಾಂತ ಶಿಖಾಮಣಿ: ಸೃಷ್ಟಿಸಂದರ್ಭ, ಅನುಭವ ಮಂಟಪ: ಹುಟ್ಟು-ಮರುಹುಟ್ಟು, ವಿರಕ್ತ ಪರಂಪರೆಯ ಎರಡು ಪ್ರಥಮ ಮಠಗಳು, (ವೀರ) ಶೈವ ಸಿದ್ಧಾಂತದ ಕೇಂದ್ರಗಳು: ದ್ವಾರಸಮುದ್ರ, ಹಂಪಿ, ಶಿವಗಂಗೆ ಮುಂತಾದ ವಿಷಯದ ಕುರಿತ ಪ್ರತಿಯೊಂದು ಪ್ರಬಂಧವೂ ಕನ್ನಡ ಸಂಶೋಧನಾ ಕ್ಷೇತ್ರದ ಅರಿವನ್ನು ವಿಸ್ತರಿಸುತ್ತದೆ. ಹಾಗೆಯೇ ಹೊಸ ಚರ್ಚೆಗೆ ಅವಕಾಶ ಒದಗಿಸುತ್ತದೆ.  2004ರಲ್ಲಿ ಸಪ್ನ ಬುಕ್ ಹೌಸ್, ಬೆಂಗಳೂರು ಈ ಪುಸ್ತಕವನ್ನು ಮೊದಲಿಗೆ ಪ್ರಕಟಿಸಿತ್ತು.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Awards & Recognitions

Related Books