ಮಾರ್ಗ-೫

Author : ಎಂ.ಎಂ. ಕಲಬುರ್ಗಿ

Pages 776

₹ 600.00




Year of Publication: 2010
Published by: ಸಪ್ನ ಬುಕ್ ಹೌಸ್

Synopsys

ಕಲಬುರ್ಗಿ ಅವರು ತಮ್ಮ ಲೇಖನಗಳ ಸಂಪುಟಗಳಾದ ಮಾರ್ಗದ ಆರು ಸಂಪುಟಗಳನ್ನು ಏಕಕಾಲಕ್ಕೆ ಪ್ರಕಟಿಸುವ ಯೋಜನೆಯ ಅಂಗವಾಗಿ ಪ್ರಕಟವಾದ  ಮೊದಲ ಆವೃತ್ತಿ ಇದು.

ಪ್ರಸ್ತಾವನೆ, ಅರಿಕೆ, ಸಂಪಾದಕೀಯ ಎಂಬ ಮೂರು ವಿಭಾಗಗಳನ್ನು ಒಳಗೊಂಡಿದೆ. 'ಪ್ರಸ್ತಾವನೆ' ವಿಭಾಗವು ವಿವಿಧ ಕೃತಿಗಳಿಗೆ ಇವರು ಬರೆದು ಮಾರ್ಗ ಸಂಪುಟ ಮೂರರಲ್ಲಿ ಪ್ರಕಟಿಸಿದ್ದ 15 ಪ್ರಸ್ತಾವನೆಗಳು ಪರಿಷ್ಕೃತಗೊಂಡು ಇಲ್ಲಿ ಮರುಮುದ್ರಣಗೊಂಡಿವೆ. ಜೊತೆಗೆ ಇವರು ಹೊಸದಾಗಿ ಬರೆದಿದ್ದ 14 ಪ್ರಸ್ತಾವನೆಗಳೂ ಇಲ್ಲಿ ಸೇರಿವೆ. ವಚನ, ಕೇಶಿರಾಜ, ಆದಯ್ಯ, ಮಲ್ಲಿನಾಥ ಮೊದಲಾದವರ ಕೃತಿಗಳನ್ನು ಶೋಧಿಸಿ, ಪರಿಷ್ಕರಿಸಿ ಪ್ರಕಟಿಸುವ ಸಂದರ್ಭದಲ್ಲಿ ಬರೆದ ವಿಸ್ತೃತವಾದ ಪ್ರಸ್ತಾವನೆಗಳೂ ಇಲ್ಲಿವೆ.

'ಅರಿಕೆ'ಎಂಬ ಎರಡನೆಯ ಭಾಗದಲ್ಲಿ ಗ್ರಂಥ ಸಂಪಾದನೆ, ಹಸ್ತಪ್ರತಿ, ಸಂಶೋಧನ , ನಾಮವಿಜ್ಞಾನಗಳಂತ ಶಾಸ್ತ್ರಕೃತಿಗಳಿಗೂ ಮತ್ತು ಮಾಹಾರಾಷ್ಟ್ರದ ಕನ್ನಡ ಶಾಸನ ಹಾಗೂ ಸಮಾಧಿ ಬಲಿದಾನ ವೀರಮರಣಗಳಂತಹ ಸ್ಮಾರಕ ಕೃತಿಗಳಿಗೆ ಬರೆದ ನಿವೇದನೆರೂಪದ ಬರಹಗಳೂ ಇಲ್ಲಿವೆ.

'ಸಂಪಾದಕೀಯ' ವಿಭಾಗದಲ್ಲಿ ಬೇರೆಯವರು ರಚಿಸಿದ ಆಧುನಿಕ ಪುಸ್ತಕಗಳಿಗೆ ಕಲಬುರ್ಗಿ ಅವರು ಬರೆದ ಸಂಪಾದಕೀಯ ಲೇಖನಗಳಿವೆ. 2010ರಲ್ಲಿ ಸಪ್ನ ಬುಕ್ ಹೌಸ್, ಬೆಂಗಳೂರು ಮೊದಲಿಗೆ ಈ ಸಂಪುಟ ಪ್ರಕಟಿಸಿತ್ತು.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books