ಮಾರ್ಗ-೭

Author : ಎಂ.ಎಂ. ಕಲಬುರ್ಗಿ

Pages 640

₹ 500.00




Year of Publication: 2015
Published by: ಸಪ್ನ ಬುಕ್ ಹೌಸ್, ಬೆಂಗಳೂರು

Synopsys

ವಿ‌ದ್ವಾಂಸ ಎಂ.ಎಂ. ಕಲಬುರ್ಗಿ ಅವರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಹಾಗೂ ಇತರ ಬರಹಗಳನ್ನು ವಿಷಯಾನುಸಾರ ವಿಂಗಡಿಸಿ ಆರು ಸಂಪುಟಗಳಲ್ಲಿ ಪ್ರಕಟಿಸಿದ್ದರು.  ಪ್ರಕಟಿಸದೇ ಉಳಿದಿದ್ದ ಪ್ರಬಂಧಗಳನ್ನು ಪ್ರಕಟಿಸುವ ಸಿದ್ಧತೆಯಲ್ಲಿರುವಾಗಲೇ ಅನಿರೀಕ್ಷಿತವಾಗಿ ದುಷ್ಕರ್ಮಿಗಳಿಂದ ಹತ್ಯೆಗೀಡಾದರು. ಈ ಘಟನೆಯದ ನಾಲ್ಕು ತಿಂಗಳ ನಂತರ ಅವರ ಪತ್ನಿ ಉಮಾದೇವಿ ಕಲಬುರ್ಗಿಯವರು ಈ ಏಳನೆಯ ಸಂಪುಟವನ್ನು ಪ್ರಕಟಿಸಲು ಮನಸ್ಸು ಮಾಡಿದರು.

ಮರಣೋತ್ತರ ಪ್ರಕಟವಾದ ಈ ಸಂಪುಟದಲ್ಲಿ ಪ್ರಬಂಧ ಪ್ರತಿಕ್ರಿಯೆ, ಪ್ರಸ್ತಾವನೆ, ಪುಸ್ತಕಾವಲೋಕನ, ಭಾಷಣಗಳೆಂಬ ವಿಭಾಗಗಳಿವೆ.

ಮೊದಲ ಭಾಗದಲ್ಲಿ 43 ಪ್ರಬಂಧಗಳಿವೆ. ಅವು, ಬಸವಣ್ಣನವರ ಜೀವನ ಚರಿತ್ರೆ, ಬಸವಣ್ಣ ದಕ್ಷಿಣಭಾರತದ ಪರ್ಯಾಯ ಬುದ್ಧ: ಬಸವಣ್ಣನವರ ಲಿಂಗಾಯತವು ಪೂರ್ಣಧರ್ಮ, 'ಪಂಚಾಚಾರ್ಯರ ನಿಜಸ್ವರೂಪ', 'ಜಗದಾರಾಧ್ಯ ಜಗದ್ಗುರು', 'ವೀರಶೈವ ಇತಿಹಾಸ ಮತ್ತು ಭೋಗೊಲ', 'ಲಿಂಗಾಯತ: ಒಂದು ಸ್ವತಂತ್ರ ಧರ್ಮ'- ಮುಂತಾದ ಆಕರನಿಷ್ಟ ಒಳನೋಟಗಳಿಂದ ಪುಷ್ಟಿಪಡೆದು ಅವರ ಸಮಾಜಮುಖಿ ಚಿಂತನೆಗಳನ್ನು  ನಿದರ್ಶಿಸುತ್ತವೆ. ಮುಖ್ಯವಾಗಿ ನಾಥ-ಶೈವ-ವೀರಶೈವ-ಲಿಂಗಾಯತ ಪಂಥಗಳ ನಿರ್ವಚನಗಳು ಇವಾಗಿವೆ. ಅಲ್ಲದೆ ಗ್ರಂಥ ಸಂಪಾದನೆ, ಶಾಸನ ಸಾಹಿತ್ಯ ಸಂಪಾದನೆ, ಜಾನಪದ ಸಾಹಿತ್ಯ ಸಂಪಾದನೆಗಳಿಗೆ ಸಂಬಂಧಿಸಿದಂತೆ ಪಾರಂಪರಿಕ ಪರಿಷ್ಕರಣ ಪದ್ದತಿ ಕೈಬಿಟ್ಟು ನೂತನ ವಿಧಾನಗಳನ್ನು ಹೇಗೆ ಅಳವಡಿಸಿಕೊಳ್ಳಬಹುದೆಂಬುದನ್ನು ಮತ್ತು ಅದರಿಂದಾಗುವ ಪ್ರಯೋಜನ ನಿರೂಪಿಸುವ ಲೇಖನಗಳನ್ನು ಈ ಸಂಪುಟದಲ್ಲಿ ನೋಡಬಹುದು

'ಪ್ರತಿಕ್ರಿಯೆ' ವಿಭಾಗವು ಪತ್ರಿಕೆಗಳಲ್ಲಿ ಧರ್ಮ, ಸಾಹಿತ್ಯ, ಸಮಾಜ, ಸಂಶೋಧನೆ ವಿಚಾರಗಳ ಕುರಿತು ಪ್ರಕಟವಾಗುತ್ತಿದ್ದ ಲೇಖನಗಳಿಗೆ ಕಲಬುರ್ಗಿಯವರು ತೋರಿದ ಭಿನ್ನಾಭಿಪ್ರಾಯರೂಪದ ಬರಹಗಳಿವೆ.

'ಪುಸ್ತಕಾವಲೋಕನ' ಭಾಗವು 12 ಕೃತಿಗಳ ಕುರಿತು ಬರೆದಿರುವ ವಿಶ್ಲೇಷಣಾತ್ಮಕ ಚಿಂತನಗಳನ್ನು ಒಳಗೊಂಡಿದೆ. ಕೊನೆಯದಾದ- 'ಸಂಪಾದಕರ ನುಡಿ' ಭಾಗವು ಇವರು ಬರೆದ ಸಂಪಾದಕೀಯಗಳಿಗೆ ಸಂಬಧಿಸಿದುದಾಗಿದೆ. 'ಭಾಷಣ' ವಿಭಾಗವು ನುಡಿಹಬ್ಬ, ಸಮ್ಮೇಳನ, ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ, ಸಮಾರೋಪ- ಮುಂತಾದ ಸಾಂದಂರ್ಭಿಕ ಭಾಷಣಗಳ ಲಿಖಿತ ರೂಪಗಳನ್ನು ಒಳಗೊಂಡಿದೆ. 

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books