ಮಾರ್ಗಾನ್ವೇಷಣೆ

Author : ನಿತ್ಯಾನಂದ ಬಿ. ಶೆಟ್ಟಿ

Pages 304

₹ 350.00




Year of Publication: 2021
Published by: ಆರತಿ.ಎನ್.ಶೆಟ್ಟಿ
Address: ಬೆಸುಗೆ ಪಬ್ಲಿಕೇಶನ್, ಹೊಸಹಳ್ಳಿ ರೋಡ್, ದಿಬ್ಬೂರು ಅಂಚೆ-ಗ್ರಾಮ , ತುಮಕೂರು-572 106
Phone: 8970162207

Synopsys

`ಮಾರ್ಗಾನ್ವೇಷಣೆ' ಕೃತಿಯು ತುಮಕೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ನಿತ್ಯಾನಂದ ಬಿ ಶೆಟ್ಟಿ ಅವರ ಸಾಹಿತ್ಯ ಸಂಶೋಧನೆ ರೀತಿ- ನೀತಿಯ ಬಗೆಗೆ ಬರೆದಿರುವ ಸಂಶೋಧನಾ ಕೃತಿಯಾಗಿದೆ. ಈ ಕೃತಿಯು ಒಂಭತ್ತು ಅನುಕ್ರಮಗಳಾದ ಅರಿಕೆ-ನೆನವರಿಕೆ, ಭೂಮಿಕೆ, ಪ್ರವೇಶ, ಸಂಶೋಧನೆ: ಹೆಜ್ಜೆ ಜಾಡು, ಸಂಶೋಧನೆ: ವಿಧಾನ- ವಿಧಾನಕ್ರಮ, ಕನ್ನಡ ಸಂಶೋಧನೆ: ಆರಂಭದ ದಾರಿಗಳು, ಕನ್ನಡ ಸಾಹಿತ್ಯ ಸಂಶೋಧನೆ: ವಿಭಿನ್ನ ನೆಲೆಗಳು, ಸಾಹಿತ್ಯ ಸಂಶೋಧನೆ- ಸಂಶೋಧನ ಸಂಸ್ಕೃತಿ, ಅನುಬಂಧ ಮತ್ತು ಪರಾಮರ್ಶನ ಗ್ರಂಥಗಳ ವಿವರಗಳನ್ನು ಒಳಗೊಂಡಿದೆ. ಲೇಖಕ ಎನ್. ಎಸ್. ಗುಂಡೂರ ಅವರು ಕೃತಿಗೆ ಮುನ್ನುಡಿ ಬರೆದು  ‘ಹೊಸ ರೀತಿಯ ಚಿಂತನೆಯ ಕಾಳಜಿಯೊಂದನ್ನು ಪ್ರಾರಂಭ ಮಾಡಿದೆ. ಬೀಜಗುಣವುಳ್ಳ ಇಂತಹ ಪಠ್ಯಗಳನ್ನು ಮತ್ತೆ ಮತ್ತೆ ಓದಬೇಕಾಗುತ್ತದೆ. ಓದಿದಷ್ಟು ನಿಧಾನವಾಗಿ, ಅರಿವು ತೆರೆದುಕೊಳ್ಳುತ್ತದೆ. ಈ ಪುಸ್ತಕಕ್ಕೆ ಬೀಜದ ಗುಣ ಬಂದಿರುವುದು ಲೇಖಕರ ಮನೋಭಾವ ಮತ್ತು ಅವರು ಆಯ್ದುಕೊಂಡ ಸಂಭಾಷಣೆಯ ರಚನೆಯಿಂದ. ಇದು ಪ್ರಕಟಣೆಗೆಂದು ಬರೆದುಕೊಂಡ ಪುಸ್ತಕವಲ್ಲ. ಲೇಖಕರಿಗೆ ಕಾಡಿದ ಕೆಲವು ಪ್ರಶ್ನೆ, ಹೊಳೆದ ಒಳನೋಟಗಳನ್ನು ಹಂಚಿಕೊಳ್ಳಬೇಕು, ತಾವು ಏನನ್ನೋ ಮುಖ್ಯವಾಗಿ ಹೇಳಿಕೊಳ್ಳಬೇಕೆಂಬ ಉತ್ಕಟ ಬಯಕೆಯಿಂದ ಮೂಡಿಬಂದ ಪುಸ್ತಕ. ಇಂತಹ ಮನೋಭಾವದಿಂದಲೇ ಸಂಶೋಧನಾಸಕ್ತ ಹಾಗೂ ಮಾರ್ಗದರ್ಶಕರ ನಡುವೆ ನಡೆಯುವ ಸಂಭಾಷಣೆಯು ನಮಗೆ ಸಂಶೋಧನೆಯ ಕ್ರಮವನ್ನು ಕಲಿಸುತ್ತದೆ. ಮೊಟ್ಟ ಮೊದಲ ಬಾರಿಗೆ, ಆಧುನಿಕ ಕನ್ನಡ ಅಧ್ಯಯನದಲ್ಲಿ ಶೈಕ್ಷಣಿಕ ಚರ್ಚೆಯೊಂದು ಈ ರೂಪದಲ್ಲಿ ಮೂಡಿಬಂದಿದೆ ಎಂದು  ಪ್ರಶಂಸಿಸಿದ್ದಾರೆ. 

About the Author

ನಿತ್ಯಾನಂದ ಬಿ. ಶೆಟ್ಟಿ

ಸದ್ಯ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಧ್ಕಕ್ಷ ಹಾಗೂ ಪ್ರಸಾರಾಂಗದ ನಿರ್ದೇಶಕರಾಗಿರುವ ನಿತ್ಯಾನಂದ ಬಿ. ಶೆಟ್ಟಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕೋಟೆಕಾರು ಗ್ರಾಮದ ಬಲ್ಯಬಾಳಿಕೆಯವರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಹಾಗೂ ಪಿಹೆಚ್.ಡಿ ಪದವಿ ಪಡೆದವರು. 1997ರಲ್ಲಿ ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು 1998ರಿಂದ2008 ರವರೆಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರಿನ ಮಹೇಶ್ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿದ್ದ ಅವರು ಎರಡು ವರ್ಷ ಅವಧಿಯಲ್ಲಿ ಕಾಲೇಜನ್ನು ರಾಜ್ಯ ...

READ MORE

Reviews

’ಮಾರ್ಗಾನ್ವೇಷಣೆ’ ಕೃತಿಯ ವಿಮರ್ಶೆ

ಸಂಶೋಧನೆ ಬರೀ ವಿಧಾನಕ್ರಮವಲ್ಲ ಅದೊಂದು ಸಂಕಥನ

ಮಾರ್ಗಾನ್ವೇಷಣೆ'; ಸಾಹಿತ್ಯ ಸಂಶೋಧನೆಯ ರೀತಿ-ನೀತಿ ಎಂಬ ಹೊತ್ತಗೆಯು ಮುಖ್ಯವಾಗಿ ಸಂಶೋಧನೆಯ ಹೆಜ್ಜೆ-ಜಾಡು, ವಿಧಾನ-ವಿಧಾನಕ್ರಮ, ಆರ೦ಭದ ದಾರಿಗಳು, ವಿಭಿನ್ನ ನೆಲೆಗಳು ಹಾಗೂ ಸಂಸ್ಕೃತಿ ಅಧ್ಯಾಯಗಳನ್ನೊಳಗೆ ೧೦ಡಿದೆ. ಪದವಿ ಮತ್ತು ಸಂಶೋಧನೆಯ ಪ್ರಾಥಮಿಕ ತಿಳಿವಳಿಕೆಯಿಂದ ಇಲ್ಲಿಯ ಚರ್ಚೆಗಳು ಶುರುವಾಗುತ್ತದೆ, ಇಂತಹ ತಿಳಿವಳಿಕೆಯ ಉದ್ದೇಶ ಏನು? ಯಾಕೆ? ಮತ್ತು ಹೇಗೆ? ಎಂಬ ಪ್ರಶ್ನೆಗಳು, ಸಾಹಿತ್ಯ ಸಂಶೋಧನೆಯ ಇಡೀ ತಾತ್ವಿಕ ಮತ್ತು ಪ್ರಾಯೋಗಿಕ * ಚರ್ಚೆಗಳ ಸ್ವರೂಪವನ್ನು ರೂಪಿಸುತ್ತವೆ. ಜ್ಞಾನದ ಭಾಷೆಯ ಸ್ವರೂಪ, ಭಾಷೆ ಮತ್ತು ವಿಚಾರ ಸಂವಹನಕ್ಕೆ ಸಂಬಂಧಿಸಿದ ಪ್ರಶ್ನೆಗಳೂ ಇಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತವೆ, ಮಾನವಿಕ, ಸಮಾಜವಿಜ್ಞಾನಗಳು, ನ್ಯಾಯಶಾಸ್ತ್ರ, ಥಿಯಾಲಜಿ, ವಿಜ್ಞಾನ ಮತ್ತು ಫಿಲಾಸಫಿ ಮೊದಲಾದವು ಪಶ್ಚಿಮದ ವಿಚಾರಧಾರೆಗಳನ್ನು ರೂಪಿಸಿದ ಆಧಾರ ಸ್ತಂಭಗಳು ಎನ್ನುವ ಹೇಳಿಕೆ ಈ ಪ್ರಸ್ತಕದ ಪ್ರಮುಖ ಚಿಂತನೆಗಳನ್ನು ಒಡಮೂಡಿಸುವುದಕ್ಕೆ ಒತ್ತಾಸೆಯಾಗಿವೆ ಜ್ಞಾನಪರ್ವ, ಆಧುನಿಕತೆ ಮತ್ತು ಬಂಡವಾಳಶಾಹಿ ಎಂಬ ಪರಿಕಲ್ಪನೆಗಳು ಪ್ರಸ್ತಕದುದ್ದಕ್ಕೂ ಉಲ್ಲೇಖಗೊಂಡಿವೆ ಪರಿಣಾಮವಾಗಿ, ಸಂಶೋಧನೆಯ ತಾತ್ವಿಕತೆಯನ್ನು ಪಶ್ಚಿಮದ ಕಣೋಟದಲ್ಲಿ ವ್ಯಾಖ್ಯಾನಿಸಲಾಗಿದೆ. ದಿಟ, ಕನ್ನಡ ಸಂಶೋಧನೆಯ ಪೂರ್ವಸೂರಿಗಳ ಪ್ರಸ್ತಾಪ ಮತ್ತು ಅವರ ವೈಚಾರಿಕ ವಿನ್ಯಾಸಗಳನ್ನೂ ಪರಿಭಾವಿಸಲಾಗಿದೆ.

ಯಾವುದೇ ಅಧ್ಯಯನ ವಸ್ತುವಿನ ಅಗತ್ಯವಾದ ತಾತ್ವಿಕತೆ ಮತ್ತು ವಿಶ್ಲೇಷಣೆಯ ಬಗೆಗಳು ಹೇಗಿರಬೇಕು ಅಂದರೆ ಸಂಶೋಧನೆ ಎಂದರೇನು? ವಿಧಾನ ಯಾವುದು (ಮೆಥೆಡ್)? ವಿಧಾನಕ್ರಮ ಯಾವುದು (ಮೆಥಡಾಲಜಿ)? ಇಲ್ಲಿ ಬಳಸಿಕೊಳ್ಳಬಹುದಾದ ತತ್ವ ಮತ್ತು ಸಿದ್ಧಾಂತಗಳಾವವು? ಏಕೆಂದರೆ ವಿಚಾರವನ್ನು ವಿವರಿಸುವ ಬಗೆಯಲ್ಲಿ ಈ ಎಲ್ಲ ತತ್ವ ಮತ್ತು ಸೈದ್ಧಾಂತಿಕ ನಿಲುವುಗಳು ಅವಶ್ಯವಾಗಿ ಬೇಕಾಗುತ್ತವೆ. ಇವುಗಳ ಪರಿಣಾಮಗಳನ್ನು ಯಾವ ವಿಧಾನದಲ್ಲಿ ಗ್ರಹಿಸಲಾಗುತ್ತದೆ ಎಂಬುದಿಲ್ಲಿ ಮುಖ್ಯ ಸಂಶೋಧನೆಯ ಫಲಿತಗಳನ್ನು ಅರಿಯುವ ಕ್ರಮಗಳನ್ನು ಬಹುತೇಕವಾಗಿ ಕಾರ್ಯಕಾರಣ ಸಂಬಂಧ, ಪ್ರಕ್ರಿಯೆ ಮೀಮಾಂಸೆ ಹಾಗೂ ಪರಿಣಾಮ ಮೀಮಾಂಸೆ ಎಂದು ವಿಂಗಡಿಸಲಾಗುತ್ತದೆ. ಲಿಂಗ, ಸಮಾಜ, ಸಂಸ್ಕೃತಿ, ಧರ್ಮ, ಸಾಹಿತ್ಯ, ಚಿತ್ರ ನಾಗರಿಕತೆ, ಭಾಷೆ, ಶಿಕ್ಷಣ ಮುಂತಾದ ವಿದ್ಯಮಾನಗಳನ್ನು ಕುರಿತ ಸಂಶೋಧನೆಯ ಫಲಿತಗಳನ್ನು ಯಾವ ವಿಧಾನಕಮದಲ್ಲಿ ಅರಿಯುತ್ತೇವೆ ಎನ್ನುವುದನ್ನು ಆಧರಿಸಿ, ಸಾಂಸ್ಕೃತಿಕ ಚಿತ್ರಗಳು ನೆಲೆಗೊಳ್ಳುತ್ತವೆ. ಈ ತಾತ್ವಿಕತೆಗೆ ಸಂಬಂಧಿಸಿದ ಇಲ್ಲಿಯ ಚರ್ಚೆ-ಸಂವಾದಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವಲ್ಲಿ, ಆಧುನಿಕತೆ, ಜ್ಞಾನಪರ್ವ, ಸಾಂಪ್ರದಾಯಿಕತೆ, ಪೌರಸ್ತ್ರತೆ, ವಸಾಹತುಶಾಹಿ ಹಾಗೂ ಪಾಶ್ಚಿಮಾತ್ಯ ಚಿಂತಕರನ್ನು ಬಹುವಾಗಿ ಆಶ್ರಯಿಸಲಾಗಿದೆ. ಮಾನವಿಕ, ಸಾಮಾಜಿಕ ವಿಜ್ಞಾನಗಳ ಕುರಿತ ಸಂಶೋಧನೆಯ ವಿಧಾನ ಮತ್ತು ವಿಧಾನಕ್ರಮಗಳನ್ನು ಅರ್ಥೈಸಲು ಬಳಸಿಕೊಂಡಿರುವ ತಾತ್ವಿಕ ವಿನ್ಯಾಸಗಳಲ್ಲಿ ದೋಷಗಳು ಇಲ್ಲವಾದರೂ ಅವುಗಳನ್ನು ನೆಲೆಗೊಳಿಸುವ ಸಾಂಸ್ಕೃತಿಕ ಪಂಪೇಕ್ಷ ಮಾತ್ರ ಕರ್ನಾಟಕವಾಗಿದೆ. ಆದರೆ ವಿಚಾರ ಮಂಡಿಸುವ ಬಗೆ, ಅದಕ್ಕೆ ಲೇಖಕರು ಬಳಸಿಕೊಳ್ಳುವ ತಾತ್ವಿಕ ಚೌಕಟ್ಟುಗಳು ಮತ್ತು ಪರಿಕಲ್ಪನೆಗಳು ಹಾಗೂ ಇವುಗಳನ್ನು ವಿವರಿಸಿ-ವ್ಯಾಖ್ಯಾನಿಸುವ ಬಗೆಗಳು ಸ್ಪಷ್ಟವಾಗಿವೆ. ಕನ್ನಡ ಸಂಶೋಧನೆಯ ಆರಂಭದ ದಾರಿಗಳು ಎಂಬ ಅಧ್ಯಾಯದಲ್ಲಿ ಕನ್ನಡ ಸಂಶೋಧನೆಯ ತಾತ್ವಿಕತೆಯ ಸ್ಕೂಲ ಪರಿಚಯವಿದೆ. ಈ ವಿದ್ವಾಂಸರು ಅನುಸರಿಸಿದ ವಿಧಾನ ಮತ್ತು ವಿಧಾನಕ್ರಮದ ಕುರಿತ ಚರ್ಚೆಗಳನ್ನು ಇನ್ನಷ್ಟು ಹಿಗ್ಗಿಸಬಹುದಾಗಿತ್ತು. ಆ ಮುಖೇನ ಅನುಭಾವವಾದ, ಪ್ರತ್ಯಕ್ಷ ಪ್ರಮಾಣವಾದ ಹಾಗೂ ಅನುಭಾವವಾದೀ ವಿಧಾನಕ್ರಮಗಳ ಬಗೆಗಿನ ಪ್ರಾಯೋಗಿಕ ನಿಲುವುಗಳನ್ನು ಮನಗಾಣಬಹುದಾಗಿತ್ತು. ಜೊತೆಗೆ ಕನ್ನಡದ ಪೂರ್ವಸೂರಿಗಳು ರೂಪಿಸಿಕೊಂಡಂತಹ ಸಂಶೋಧನೆಯ ದೇಶ ಮಾದರಿಗಳನ್ನು ನಿಕಟವಾಗಿ ಅರಿಯುವುದಕ್ಕೆ ಸಾಧ್ಯವಿತ್ತು. ಅಪಾರವಾದ ಮಾಹಿತಿ ಸಂಗ್ರಹವಿದೆ. ಆದರೆ ಈ ವಿದ್ವಾಂಸರು ಬಳಸಿಕೊಂಡ ಆಕರಗಳ ಸ್ವರೂಪ, ಗುಡ ಸಂಪಾದನೆಯ ಬಗೆಗಳನ್ನು ಕುಂತು ನನ್ನನ್ನು ಮುತುವರ್ಜಿಯನ್ನು ವಹಿಸಬೇಕಿತ್ತು.

ಅಂದರೆ ಆಧುನಿಕ ಸಾಹಿತ್ಯ ಸಂಶೋಧನೆಗೆ ಪೂರಕವಾದ ದಾರಿಗಳನ್ನು ರೂಪಿಸಲು ಒತ್ತಾಸೆಯಾಗುತ್ತಿತ್ತು. ದಿಟ, ಇಲ್ಲಿ ನಿರ್ದಿಷ್ಟ ನಿಲುವನ್ನು ತೆಗೆದುಕೊಂಡು ಸಂಶೋಧನೆಯ ಮಾರ್ಗಗಳನ್ನು ಗುರುತಿಸಲಾಗಿದೆ. ಆದರೆ ಅವುಗಳನ್ನು ಪರಾಮರ್ಶಿಸುವ ಗೋಜಿಗೆ ಹೋಗದೇ, 'ಸಾಹಿತ್ಯ-ಶಾಸನ, ಗ್ರಂಥಸಂಪಾದನೆ, ಇತ್ಯಾದಿಗಳ ಅಧ್ಯಯನ ಮಾಡುವಾಗ ರಾಜಕೀಯವಾದ ಎಚ್ಚರವನ್ನು ತಾಳಬೇಕು' (ಪು.೧೩೫), ಎಂದು ಹೇಳುತ್ತಲೇ ಸಾಂಸ್ಕೃತಿಕ ಸರಿತನದ ನಿಲುವುಗಳನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ. ಜ್ಞಾನ ಮತ್ತು ಅಧಿಕಾರ ಸಂಬಂಧಗಳ ಸ್ವರೂಪ ಎಂತಹದು ಎಂಬುದನ್ನು ಸಂಶೋಧನೆಯ ಮೂಲಕ ಕಾಣುವ ಚಹರೆಗಳನ್ನು ಮಾತ್ರ ಅತ್ಯಂತ ನಿಚ್ಚಳವಾಗಿ ಗುರುತಿಸಲಾಗಿದೆ.

ಕನ್ನಡ ಸಾಹಿತ್ಯ ಸಂಶೋಧನೆಯ ವಿಭಿನ್ನ ನೆಲೆಗಳನ್ನು ಗುರುತಿಸುವಲ್ಲಿ ಹಲವು ಬಗೆಯ ವಿಶಿಷ್ಟ ಚರ್ಚೆಗಳನ್ನು ಬೆಳೆಸಲಾಗಿದೆ. ಕನ್ನಡ ಚಿಂತನೆಯ ನಕ್ಷೆಯನ್ನು ನಿಗದಿಪಡಿಸುವ ವೈಚಾರಿಕ ಕಣೋಟಗಳು ಇಲ್ಲಿ ಪ್ರಕಟಗೊಂಡಿವೆ. ಕೆ.ಬಿ ಪಾಠಕ, ಗೋವಿಂಧ ಪೈ, ಮುಳಿಯ ತಿಮ್ಮಪ್ಪಯ್ಯ, ಎಸ್ ಶೆಟ್ಟರ್, ಕೀರ್ತಿನಾಥ ಕುರ್ತಕೋಟಿ, ಕೆ.ವಿ ಸುಬ್ಬಣ್ಣ, ಡಿ.ಎನ್.ಎಸ್ ಭಟ್, ಕೆ.ಎ.ನಾರಾಯಣ, ಡಿ.ಆರ್ ನಾಗರಾಜ, ವಿಜಯಾ ದಬ್ಬೆ, ಎಚ್.ಎಸ್. ಶ್ರೀಮತಿ, ಶೆಲ್ಡನ್ ಪೊಲಾಕ್, ಶಿವರಾಮ ಪಡಿಕ್ಕಲ್ ಮೊದಲಾದ - ವಿದ್ವಾಂಸರ ಮಹತ್ವದ ಸಂಶೋಧನೆಗಳನ್ನು ಒಂದು ಬಗೆಯ ಕನ್ನಡ ಸಂಶೋಧನೆಯ ಮಾದರಿಗಳನ್ನಾಗಿ ವಿಶ್ಲೇಷಿಸಲಾಗಿದೆ. ವಿಶೇಷವಾಗಿ ಕೆವಿಎನ್ ಅವರ ತಾತ್ವಿಕತೆಯನ್ನು * ಅತ್ಯಂತ ಪರಿಣಾಮಕಾರಿಯಾಗಿ ವಿವರಿಸಲಾಗಿದೆ. ಆದರೆ ಕಿರಿಯ ತಲೆಮಾರಿನ ಸಂಶೋಧಕರನ್ನು ಇಲ್ಲಿ ಪರಿಗಣಿಸಲಾಗಿಲ್ಲ. ಕೇವಲ ಮನು ದೇವದೇವನ್, ಎನ್.ಎಸ್. - ಗುಂಡೂರು ಅವರನ್ನು ಕೆಲವು ಕಡೆ ಉಲ್ಲೇಖಿಸಲಾಗಿದೆ. ವಸಾಹತು ಸನ್ನಿವೇಶದ ಮಿಶನರಿ ವಿದ್ವಾಂಸರು ಹಾಗೂ ವಸಾಹತೋತ್ತರ ಸನ್ನಿವೇಶದ ದೇಶಿ-ಅನ್ಯದೇಶಿ - ವಿದ್ವಾಂಸರು ಕೈಗೊಂಡ ಮಹತ್ವದ ಸಂಶೋಧನೆಯ ಚರಿತ್ರೆಯನ್ನು ಇಲ್ಲಿ ಪ್ರಕಟಿಸಲಾಗಿದೆ. ಆದರೆ ಗ್ರಹಿಕೆಯ ಸ್ವರೂಪಗಳನ್ನು ವಿಶ್ಲೇಷಿಸುವಲ್ಲಿ, ಸಂಸ್ಕೃತ, ಪಾಕೃತ ಹಾಗೂ ಯುರೋಪು – ಕೇಂದ್ರಿತ ಚಿಂತನೆಗಳು ಹೇಗೆ ಕನ್ನಡ ಸಾಹಿತ್ಯದ ಸಂಶೋಧನೆಯ ದಾರಿ ಮತ್ತು ಗಾಂಗಳನ್ನು ನಿರ್ಧರಿಸುವಲ್ಲಿ ಒತ್ತಾಸೆಯಾದ ಬಗೆಗಳ ಕಡೆಗೆ ಗಮನಹರಿಸಬೇಕಿತ್ತು.

ಸಂಶೋಧನ ಸಂಸ್ಕೃತಿಯ ಎಚ್ಚರ ಮತ್ತು ವಿವೇಕದ ಮೂಲಕ ಸಾಹಿತ್ಯ ಪಠ್ಯವನ್ನು ಹೇಗೆ ಒಂದು ಸಾಮಾಜಿಕ ಸಂಕಥನವನ್ನಾಗಿ ಪರಿಗಣಿಸಬೇಕು ಎನ್ನುವ ಮಹತ್ವದ ನಿಲುವನ್ನು ಈ ಹೊತ್ತಿಗೆಯಲ್ಲಿ ತಾಳಲಾಗಿದೆ. ಕನ್ನಡ ಸಂಶೋಧನೆಯ ಕ್ಷೇತ್ರದಲ್ಲಿ ಸಂಶೋಧನೆಯನ್ನು ಕುರಿತ ಅತ್ಯಂತ ಮಹತ್ವದ ತಾತ್ವಿಕ ಗ್ರಂಥವೊಂದು ಇದುವರೆಗೂ - ಬಂದಿರಲಿಲ್ಲ. ಆ ಕೊರತೆಯನ್ನು ಈ ಹೊತ್ತಿಗೆ ನೀಗಿಸಿದೆ. ಆದರೆ ಇಲ್ಲಿಯ ಚರ್ಚೆಗಳನ್ನು ರ ಸಂವಾದದ ಮೂಲಕ ಬೆಳೆಸುವ ಬಗೆಯೇ ಈ ಹೊತ್ತಿಗೆಯ ಒಂದು ವೈಚಾರಿಕ * ಮಿತಿಗೆ ಕಾರಣವಾಗಿದೆ.

(ಕೃಪೆ: ಹೊಸಮನುಷ್ಯ, ಬರಹ: ಮೇಟಿ ಮಲ್ಲಿಕಾರ್ಜುನ)

---

ಡಾ.ನಿತ್ಯಾನಂದರಶೆಟ್ಟರ ಸಂಶೋಧನ ‘ಮಾರ್ಗಾನ್ವೇಷಣೆ’

ನಮ್ಮ ಸುತ್ತಲೂ ಪಿಎಚ್ ಡಿ ಪದವಿಗಾಗಿ ಜಿಲ್ಲೆಯ ಮಾಡುತ್ತಿರುವ ಕೆಲವರನ್ನು ಗಮನಿಸಿದರೆ ಒಂದು ವಿಚಿತ್ರ ಸಂಗತಿ ಗಮನಕ್ಕೆ ಬರುತ್ತದೆ. ಸಂಶೋಧನೆಯನ್ನು ಮಾಡುವ ಮಾರ್ಗ ಈಗಾಗಲೇ ಸಮವಾಗಿದೆ. ಆ ಮಾರ್ಗವು ಮಾರ್ಗದರ್ಶಿಗೆ ಸಂಶೋಧನಾ ವಿದ್ಯಾರ್ಥಿಯು ಈಗಾಗಲೇ ಗೊತ್ತಿರುವ ಕ್ರಮದಲ್ಲಿ ಅಧ್ಯಯನ ಮಾಡಿ Com ಬರೆದರೆ ಸಂಶೋಧನೆ ನಡೆಸಿದಂತೆ ಎನ್ನುವ ತಿಳಿವಳಿಕೆಯಿದೆ. ಆದರೆ ನಿಜದಲ್ಲಿ ಸಂಶೋದ ಸುವರು. ಹಾಗಿರುವುದಿಲ್ಲ. ಅರ್ಜಿಯೊಂದನ್ನು ತುಂಬುವ ಹಾಗೆ ಈಗಾಗಲೇ ಇರುವ ಸಿದ್ಧ ಮಾದರಿಯ ಮಾರ್ಗದಲ್ಲಿ ವಿವರಗಳನ್ನು ಪೋಣಿಸುವುದು ಮಾತ್ರವಲ್ಲ ಬದಲಿಗೆ ಓದುವ, ಬರೆಯು ಹೊಸಮಾರ್ಗವನ್ನು ಶೋಧಿಸಿಕೊಳ್ಳುವುದೇ ಸಂಶೋಧನೆ ಎನ್ನುವುದನ್ನು ನಿತ್ಯಾನಂದಶೆಟ್ಟಿ ತಮ್ಮ 'ಮಾರ್ಗಾನ್ವೇಷಣೆ: ಸಾಹಿತ್ಯ ಸಂಶೋಧನೆಯ ರೀತಿ-ನೀತಿ' ಎನ್ನುವ ಪುಸ್ತಕದಲ್ಲಿ ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ.

ಪಿಎಚ್.ಡಿ ವಿದ್ಯಾರ್ಥಿಗಳನ್ನೇ ಗಮನದಲ್ಲಿ ಇಟ್ಟುಕೊಂಡು ಪಿಎಚ್.ಡಿ. ಎಂದರೇನು ಪಶ್ಚಿಮದಲ್ಲೂ ಭಾರತದಲ್ಲೂ ಈ ಪದವಿಯ ಇತಿಹಾಸವೇನು, ಸಂಶೋಧನಾ ಪ್ರಸ್ತಾವ ಎಂದರೇನು ಅದು ಹೇಗಿರಬೇಕು ಎಂದು ಸುದೀರ್ಘವಾಗಿ ಚರ್ಚಿಸುವ ಈ ಕೃತಿ ಅಷ್ಟಕ್ಕೆ ನಿಲ್ಲುವುದಿಲ್ಲ. ಅಧ್ಯಯನ ಮತ್ತು ಸಂಶೋಧನೆಗಳೊಂದಿಗೆ ಪ್ರಭುತ್ವ ಮತ್ತು ಬಂಡವಾಳಶಾಹಿಯ ಕಾಣದ ಕೈಗಳು ಹೇಗೆ ಕೆಲಸ ಮಾಡುತ್ತಿರುತ್ತದೆ. ನಮ್ಮ ಸುತ್ತಲಿನ ಮತ್ತು ನಾವು ಅಧ್ಯಯನ ಮಾಡುತ್ತಿರುವ ಪಠ್ಯವು ರಚನೆಯಾದ ಸಂದರ್ಭದ ರಾಜಕೀಯ ಹೇಗೆ ಸಾಹಿತ್ಯ ಸಂಶೋಧನೆಯನ್ನು ಪ್ರಭಾವಿಸುತ್ತದೆ ಎನ್ನುವುದನ್ನೂ ವಿವರವಾಗಿ ಬಿಡಿಸಿಡುತ್ತದೆ, ಕನ್ನಡ ಸಾಹಿತ್ಯ ಚರಿತ್ರೆಯನ್ನು ಹೇಳುವ ರೀತಿಯಲ್ಲಿ ಕನ್ನಡ ಸಾಹಿತ್ಯ ಸಂಶೋಧನೆಯ ಚಿಂತೆಯನ್ನು ಶೆಟ್ಟರು ಹೇಳುತ್ತಾರೆ. ಹಾಗಾಗಿ ಈ ಕೃತಿಯು ಕೇವಲ ಪಿಎಚ್.ಡಿ ಯಲ್ಲಿ ಆಸಕ್ತರಾದವರಿಗೆ ಮಾತ್ರವಲ್ಲದೆ ಸಾಹಿತ್ಯ, ಸಂಶೋದನೆ, ಜಾನ ನಿರ್ಮಾಣದ ಕುರಿತು ಕುತೂಹಲ ಹೊಂದಿರುವವರಿಗೂ ಮಾಹಿತಿಯನ್ನು, ಒಳನೋಟಗಳನ್ನು ಒದಗಿಸುತ್ತದೆ, ಜೊತೆಗೆ, ವಿಶ್ವವಿದ್ಯಾಲಯದ ಹೊರಗಿದ್ದುಕೊಂಡು ಸಾಹಿತ್ಯ ಸಂಶೋಧನಾದಿ ಸಂಗತಿಗಳಲ್ಲಿ ಆಸಕ್ತರಾಗಿರುವ ನನ್ನಂಥವರಿಗೆ ವಿಶ್ವವಿದ್ಯಾಲಯಗಳೊಳಗೆ ಈಗ ಏನು ನಡೆಯುತ್ತಿದೆ. ಅದರ ಗುಣದೋಷಗಳೇನು ಎನ್ನುವ ಗುಟ್ಟನ್ನು ಕೂಡ ಕಿವಿಯಲ್ಲಿ ಸಣ್ಣದಾಗಿ ಉಸುರುತ್ತದೆ.

ಸಾಹಿತ್ಯ ಸಂಶೋಧನೆ ಎನ್ನುವುದು ಇವತ್ತು ಕೇವಲ ಸಾಹಿತ್ಯಕ್ಕೆ ಸೀಮಿತವಾಗಿ ಉಳಿದಿಲ್ಲ ಸಾಹಿತ್ಯದ ಅಧ್ಯಯನವು ಹಲವು ಬೇರೆ ಶಿಸ್ತುಗಳ ಜೊತೆಗೆ ಸಮ್ಮಿಳಿತಗೊಂಡಿದೆ ಅಥವಾ ಸಂಕರಗೊಂಡಿದೆ. ನಿತ್ಯಾನಂದಶೆಟ್ಟರು, ಸಾಹಿತ್ಯ ಸಂಶೋಧನೆಯನ್ನು ಅದರ ಎಲ್ಲ ಸಂಕೀರ್ಣತೆಯಲ್ಲಿ ಚಿತ್ರಿಸುವಾಗ ಸಂಸ್ಕೃತಿ ಅಧ್ಯಯನ, ಸಮಾಜಶಾಸ್ತ್ರ ಮುಂತಾದ ಶಿಸ್ತುಗಳೊಂದಿಗೆ ಅದು ಇಟ್ಟುಕೊಂಡಿರುವ ಹೊಂದಾಣಿಗೆ, ಹೊಣೆಗಾರಿಕೆ, ಹೊಡೆದಾಟಗಳನ್ನೂ ವಿವರಿಸುತ್ತಾರೆ.

ಕನ್ನಡದ ಕೆಲಸವನ್ನು ಮಾಡಿದ ಮಂಜೇಶ್ವರ ಗೋವಿಂದಪೈ, ಸೇಡಿಯಾಪು ಕೃಷ್ಣಭಟ್ಟ , ಆ‌, ನಾಗರಾಜ, ಕೆ.ವಿ.ಸುಬ್ಬಣ್ಣ, ಎಂ.ಎಂ.ಕಲಬುರ್ಗಿ, ಹೆಚ್.ಎಸ್. ಶ್ರೀಮತಿ, ಡಿ.ಎನ್. ಶಂಕರಭಟ, ರಾಜೇಂದ್ರಚೆನ್ನಿ, ಬಿ.ಎನ್, ಸುಮಿತಾಬಾಯಿ ರಹಮತ್ ತರೀಕೆರೆ, ವಿಜಯಾದಬ್ಬೆ, ಗೆಲ್ಲನೋಲಕ್ ಅಷ್ಟೇ ಅಲ್ಲದೆ ಕನ್ನಡ ಸಂಶೋಧನೆಯ ಕುರಿತ ಮಾತುಕತೆಯಲ್ಲಿ ಅಷ್ಟೆಲ್ಲ ಪ್ರಸಾಪಕ್ಕೊಳಗಾಗದ ಆದರೆ ವಿದ್ವತ್ತಿಗೆ ಹೆಸರಾದ ಸುಂದರ್ಸ ರುಕ್ಕೆ, ಜಾರ್ಜಿವರ್ಗಿಸ್ಟೋಸೆಫ್, ಬೂಸ್ಟಾ ಪರರೀತಿಯ ನೂರಾರು ಚಿಂತಕರು, ಬರಹಗಾರರನ್ನು ಚುಟುಕಾಗಿಯಾದರೂ ಪರಿಚಯಿಸುವ, ಕೆಲವೊಮ್ಮೆ ವಿವರಿಸುವ, ಕೆಲವೊಮ್ಮೆ ಟೀಕಿಸುವ ಶೆಟ್ಟರ ಪುಸ್ತಕದ ಹರವು ಬಹಳ ವಿಸ್ತಾರವಾದದ್ದು. ತಮ್ಮ ಗಮನಕ್ಕೆ ಬಂದ ಚಿಂತನೆಗಳನ್ನು ಬಿಡಿಬಿಡಿಯಾಗಿ ಪ್ರಸ್ತಾಪಿಸದೇ ಅವುಗಳ ನಡುವೆ ಇರುವ ಸಂವಾದಗಳನ್ನು, ಅವು ಮಾಡಿದ ಸಾಹಿತ್ಯಕ, ಸಾಮಾಜಿಕ ಪರಿಣಾಮಗಳನ್ನು ಈ ಪುಸ್ತಕವು ಗಮನಿಸಿ ಗುರುತಿಸುತ್ತದೆ. ಸಂದರ್ಭಾನುಸಾರವಾಗಿ ಶೆಟ್ಟರು ಕೊಡುವ ವಿದ್ವಾಂಸರ ಮತ್ತು ಅವರ ಕೃತಿಗಳ ಉದ್ದುದ್ದ ಯಾದಿಗಳು ಓದಿಗೆ ಶುಷ್ಕವೆನ್ನಿಸಿದರೂ ಕನ್ನಡದ ಕುರಿತು ನಡೆದ ಅಗಾಧ ಪ್ರಮಾಣದ ಜ್ಞಾನ ನಿರ್ಮಾಣವನ್ನು ನೆನಪಿಸುವಲ್ಲಿ ಸಫಲವಾಗುತ್ತವೆ.

ಈ ಪುಸ್ತಕವು ಸಾಕಷ್ಟು ಮಾಹಿತಿಯನ್ನು, ಒಳ್ಳೆಯ ಒಳನೋಟಗಳನ್ನು ಹೊಂದಿದೆ ಎನ್ನುವಷ್ಟೇ ಮುಖ್ಯ ಈ ವಿಚಾರಗಳನ್ನು ಶೆಟ್ಟರು ಮಂಡಿಸಿರುವ ರೀತಿ, ಸಂಶೋಧನಾ ಕೃತಿಗಳು, ಸಂಶೋಧನೆಯ ಕುರಿತ ಬರಹಗಳು, ತೀರಾ ವಿಶೇಷ ಉದಾಹರಣೆಗಳನ್ನು ಹೊರತುಪಡಿಸಿದರೆ, ಒಂದು ಪ್ರಬಂಧದ ರೀತಿ ಇರುತ್ತವೆ. ಈ ಕೃತಿಯಲ್ಲಿ ಶೆಟ್ಟರು ಅಪರೂಪವೆನ್ನಿಸುವಂತೆ ಸಂವಾದದ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಒಬ್ಬ ಮಾರ್ಗದರ್ಶಕ ಅಥವಾ ಮೇಷ್ಟ್ರು ತನ್ನ ವಿದ್ಯಾರ್ಥಿ ಅಥವಾ ಸಂಶೋಧನಾಸಕ್ತನ ಜೊತೆ ನಡೆಸಿದ ಮಾತುಕತೆಯ ರೂಪದಲ್ಲಿ ಇಡೀ ಪುಸ್ತಕದ ನಿರೂಪಣೆಯಿದೆ. ಶೈಕ್ಷಣಿಕ ಶಿಸ್ತಿನ ಬರವಣಿಗೆಗಳನ್ನು ಹೆಚ್ಚಾಗಿ ನಿರೂಪಣೆಯ ರೂಪದಲ್ಲಿ ಕಂಡಿರುವ ನಮ್ಮ ಓದಿಗೆ ಈ ಸಂವಾದದ ಮಾರ್ಗವು ಒಂದು ಅಗತ್ಯ ಲಘುತ್ವವನ್ನು ತಂದು ಕೊಡುತ್ತದೆ. ಸಂಭಾಷಣೆಯ ಪ್ರಸ್ತುತಿಯು ಶೆಟ್ಟರ ಬರವಣಿಗೆಗೆ ಚೆಲುವನ್ನೂ, ಚಲನಶೀಲತೆಯನ್ನೂ, ಚಂಚಲಶೀಲತೆಯನ್ನೂ ತಂದುಕೊಟ್ಟಿದೆ. ಮಾತುಕತೆಯಲ್ಲಿ ಆಗುವಂತೆ ಕೆಲವೊಮ್ಮೆ ಬರವಣಿಗೆಯು ಒಂದು ವಿವರಿಸಿನ ಮ ಹೊರಳುವುದು ಆಕರ್ಷಕವೆನ್ನಿಸಿದರೂ ವಿಷಯಗಳು ಚದುರಿ ಹೋಗುವುದು ಗಮನಕ್ಕೆ ಬಾರದೇ ಹೋಗುವುದಿಲ್ಲ.

‘ಹಿಂದೆ ಸ್ವರಾಜ್' ನಲ್ಲಿ ಗಾಂಧಿ ಇದೇ ಸಂಭಾಷಣೆಯ ರೂಪವನ್ನು ತಿಳಿದಾಗ ಅದರಲ್ಲಿ ಬರುವ ಮತ್ತೊಂದು ಪಾತ್ರವು ಪೂರ್ವಪಕ್ಷವನ್ನು ಪ್ರತಿನಿಧಿಸುತ್ತದೆ ಅಥವಾ ಸ ಮಾರ್ಗವಾಗುತ್ತದೆ. ಅಲ್ಲಿ ಬರುವ 'ಓದುಗನು ಸಂಪಾದಕ'ನು ಒಳನೋಟಗಳನ್ನು ಹೊಂದಿದ ಚುರುಕಾದ ಪ್ರಶ್ನೆಗಳನ್ನು ನಿರ್ಭಿಡೆಯಿಂದ ಕೇಳುತ್ತಾನೆ. ಆದರೆ, ಶೆಟ್ಟರ ಕೃತಿಯಲ್ಲಿ ವಿದ್ಯಾರ್ಥಿಯು ಮುಗ್ಧವಾದ ಚುಟುಕು ಪ್ರಶ್ನೆಗಳನ್ನು ಕೇಳುತ್ತಾನೆ. ಅದಕ್ಕೆ ಅಧ್ಯಾಪಕನು ವಿದ್ವರ್ಣ ಸ ಉತ್ತರಗಳನ್ನು ಕೊಡುತ್ತಾನೆ. ಅಧ್ಯಾಪಕನು ಹೇಳುವ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಶಕ್ತಿಯ ಹೊಂದಿದಂತೆ ಕಾಣುವ ಈ ವಿದ್ಯಾರ್ಥಿಯು ಎಲ್ಲಿಯೂ ತನ್ನ ಮೇವನ್ನು ಎದುರು ಹಾಕಿಕೊಳ್ಳು ವಿಮರ್ಶಿಸುವುದಿಲ್ಲ. ಬದಲಿಗೆ ಹೇಳಿದ್ದೆಲ್ಲವನ್ನೂ ಒಪ್ಪಿಕೊಳ್ಳುತ್ತಾನೆ. ಪ್ರಶ್ನೆಗಳನ್ನು ಕೇಳಿದಾಗ ಹಲವ ಸಾರಿ 'ಮ್ಸ್' ಎನ್ನುತ್ತಾನೆ. ಹಾಗಾಗಿ, ಪ್ರಾರಂಭದಲ್ಲಿ ಆಕರ್ಷಣೀಯವಾಗಿ ಕಾಣುವ ಸಂದಾನ ನ ಓದುತ್ತಾ ಹೋದಂತೆ ಇದೊಂದು ಬರಿಯ ತಂತ್ರ, ವಿದ್ಯಾರ್ಥಿಯನ್ನು ಎದುರಿಗೆ ಕೂರಿಸಿಕೊಂಡು ಆಡುವ ಸ್ವಗತ ಎನ್ನಿಸಿ ಬಿಡುತ್ತದೆ. ನಿಜವಾದ ಸಂಶೋಧನೆಯ ಸಂದರ್ಭದಲ್ಲಿ ಇದು ಬದಲಾಗಬೇಕ ಮಾರ್ಗದರ್ಶಿ ಅಪಣೆ ಮಾಡುವವ, ವಿದ್ಯಾರ್ಥಿ ಅದನ್ನು ಅನುಸರಿಸುವವ ಎನ್ನುವುದು ಹೋಗಿ ಎಲ್ಲರಿಗೂ ಸಮಾನ ಅವಕಾಶ ದೊರೆತಾಗ, ವಿದ್ಯಾರ್ಥಿಯು ಸಹವರ್ತಿಯಾದಾಗ, ಮಾರ್ಗಾನ್ವೇಷಣೆಯ ಹೆಚ್ಚು ಪ್ರಜಾಸತ್ತಾತ್ಮಕವೂ ಫಲಕಾರಿಯೂ ಆಗಬಲ್ಲುದು ಎಂಬ ಇಂಗಿತವನ್ನು ಇಟ್ಟುಕೊಂಡು ಬರೆದಿರುವ ಈ ಪುಸ್ತಕವು ತನ್ನ ವಸ್ತುವಿಷಯದ ಬಲದಿಂದಲೇ ವಿದ್ಯಾರ್ಥಿಗಳನ್ನು ಆ ಮಟ್ಟಕ್ಕೆ ಕೆಲಸವನ್ನು ಒಂದಷ್ಟಾದರೂ ಮಾಡುತ್ತದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.  

(ಕೃಪೆ : ಪುಸ್ತಕಲೋಕ, ಬರಹ : ಮಾಧವ ಕುಪ್ಪಳಿ)

Related Books