ಮಾರ್ಕ್ಸ್ ವಾದ ಮತ್ತು ಅನ್ಯವಾದಗಳು

Author : ಕೆ. ಕೇಶವ ಶರ್ಮ

Pages 352

₹ 315.00




Year of Publication: 2016
Published by: ದೇಸಿ ಪುಸ್ತಕ
Address: #121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040.
Phone: 9845096668

Synopsys

ಲೇಖಕ -ಚಿಂತಕ ಕೆ. ಕೇಶವ ಶರ್ಮ ಅವರು ಮಾರ್ಕ್ಸ್ ವಾದ ಹಾಗೂ ಅನ್ಯವಾದಗಳು ಕುರಿತು ತೌಲನಿಕ ಅಧ್ಯಯನದೊಂದಿಗೆ ಜಿಜ್ಞಾಸೆ ನಡೆಸಿದ ಕೃತಿ ಇದು. ವರ್ಗ ಸಿದ್ಧಾಂತ, ಜಾತಿ ಸಿದ್ಧಾಂತ, ಮಾನವತಾವಾದ, ಅಸ್ತಿತ್ವವಾದ, ಸಮಾಜವಾದ, ಸಮಾನತಾವಾದ ಹೀಗೆ ವಿವಿಧ ವಾದಗಳನ್ನು ಅಧ್ಯಯನ ವ್ಯಾಪ್ತಿಗೆ ಒಳಪಡಿಸಿದ ಈ ಕೃತಿಯು ಮಾರ್ಕ್ಸ್ ವಾದದ ವಿಸ್ತ್ರತ ವಿವರಣೆಯನ್ನು ಕಾಣಬಹುದು. ಮಾರ್ಕ್ಸ್ ವಾದವು ವಿಶ್ವ ವ್ಯಾಪಿಯಾದ ಬಗೆಯನ್ನು ಸಹ ಇಲ್ಲಿ ಚರ್ಚಿಸಲಾಗಿದೆ. 19 ನೇಯ ಶತಮಾನದ ಮೂರು ಪ್ರಧಾನ ಸೈದ್ಧಾಂತಿಕ ವಿಚಾರಧಾರೆಗಳಾದ ಜರ್ಮನಿಯ ತತ್ವಶಾಸ್ತ್ರ ಇಂಗ್ಲೆಂಡಿನ ರಾಜಕೀಯ ಅರ್ಥಶಾಸ್ತ್ರ ಮತ್ತು ಫ್ರಾನ್ಸಿನ ಸಮಾಜವಾದಿ ಚಿಂತನೆಗಳು ಒಳಗೊಂಡಿದ್ದು, ಕೃತಿಯ ಮಹತ್ವ ಹೆಚ್ಚಿಸಿದೆ.

About the Author

ಕೆ. ಕೇಶವ ಶರ್ಮ

ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ...

READ MORE

Related Books