ಮಸಾಲೆ ದೋಸೆಗೆ ಕೆಂಪು ಚಟ್ನಿ

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 176

₹ 150.00




Year of Publication: 2015
Published by: ಅಂಕಿತ ಪುಸ್ತಕ
Address: 53, ಶ್ಯಾಮ್ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004 0
Phone: 080 - 2661 7100 / 2661 7755

Synopsys

‘ಮಸಾಲೆ ದೋಸೆಗೆ ಕೆಂಪು ಚಟ್ನಿ’ ಪತ್ರಕರ್ತ, ಲೇಖಕ ಜೋಗಿ ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಯ ಬಗ್ಗೆ ಬರೆಯುತ್ತಾ..’ಕಾಡಲ್ಲಿದ್ದುಕೊಂಡು ಪ್ರಾಣಿಗಳನ್ನು ಕಲ್ಲಲ್ಲಿ ಜಜ್ಜಿ ಹಸಿಹಸಿಯಾಗಿ ತಿನ್ನುತ್ತಿದ್ದ ಮನುಷ್ಯ, ಒಂದು ಕಡೆ ನೆಲೆ ನಿಂತು, ಬತ್ತ ಬೆಳೆದು, ಅದನ್ನು ಕುಟ್ಟಿ ಅಕ್ಕಿ ಮಾಡಲು ಕಲಿತು, ಅದನ್ನು ರುಬ್ಬಿ ತೆಳ್ಳಗೆ ಬೇಯಿಸಿ, ಅದಕ್ಕೆ ಆಲೂಗಡ್ಡೆ ಮತ್ತು ಈರುಳ್ಳಿಯ ಪಲ್ಪ ಬೆರೆಸಿ ತಿನ್ನಬಹುದೆಂದು ಕಲಿತದ್ದು ಮನುಕುಲದ ಅತಿದೊಡ್ಡ ಆವಿಷ್ಕಾರಗಳಲ್ಲಿ ಒಂದು ಎನ್ನುತ್ತಾರೆ ಲೇಖಕ ಜೋಗಿ.

ಇಂಥ ತರಲೆ ಮತ್ತು ಹೊಟ್ಟೆ ತುಂಬಿಸುವ ಉಪಾಯಗಳನ್ನು ಅಭಿರುಚಿಯನ್ನಾಗಿ ಮಾಡಿಕೊಂಡಾಗ, ಮಸಾಲೆದೋಸೆಗೆ ಕೆಂಪು ಚಟ್ಟಿ ಸವರಿದರೆ ಕಲಾತ್ಮಕವಾಗಿರುತ್ತೆ ಎಂದು ಅದ್ಯಾರಿಗೋ ಹೊಳೆದಿರಬೇಕು ಎಂಬುದ ಅವರ ವಾದ. ಹೊಟ್ಟೆಪಾಡನ್ನು ಹೀಗೆ ಕಲೆಗಾರಿಕೆಯನ್ನಾಗಿ ಮಾಡಿಕೊಳ್ಳುವ ನಮ್ಮ ಪ್ರಯತ್ನದಲ್ಲೇ ಬದುಕಿನ ಸಾರ್ಥಕತೆ ಇದೆ ಅನ್ನಿಸುತ್ತದೆ. ನಾವು ಏಕಕಾಲಕ್ಕೆ ಬದುಕಲೂ ಬೇಕು, ಜೀವಿಸಲೂ ಬೇಕು. ನಮಗೆ ಜೀವಶಾಸ್ತ್ರವೂ ಬೇಕು, ಭಾವಶಾಸ್ತ್ರವೂ ಬೇಕು. ಇಲ್ಲಿರುವ ಬರಹಗಳು ಬದುಕೆಂಬ ಮಸಾಲೆದೋಸೆಗೆ ಕೆಂಪು ಚಟ್ಟಿ ಇದ್ದಂತೆ! ಎನ್ನುತ್ತಾರೆ. ಈ ಕೃತಿಯಲ್ಲೂ ಜೋಗಿಯ ವಿಶಿಷ್ಟ ಶೈಲಿಯ ಅಂಕಣಬರಹಗಳನ್ನು ಒಟ್ಟುಗೂಡಿಸಿ ನೀಡಲಾಗಿದೆ. 

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books