ಮಾಸಿದ ಸೆರಗು

Author : ಹೆಚ್. ಎಸ್. ಪಾರ್ವತಿ

Pages 150

₹ 50.00




Year of Publication: 1976
Published by: ನ್ಯಾಷನಲ್ ಬುಕ್ ಟ್ರಸ್ಟ್. ಇಂಡಿಯಾ
Address: ಎ-5, ಗ್ರೀನ್ ಪಾರ್ಕ್, ನವದೆಹಲಿ. 110016

Synopsys

ಹಿಂದೀ ಭಾಷೆಯ ಪ್ರಸಿದ್ಧ ಕಾದಂಬರಿಕಾರ ಫಣೀಶ್ವರನಾಥ 'ರೇಣು' ಅವರ ಮೊದಲ ಕಾದಂಬರಿ ’ಮೈಲಾ ಆಂಚಲ್’ ನ ಕನ್ನಡ ಅನುವಾದವಿದು. 1954 ರಲ್ಲಿ ಪ್ರಕಟವಾದ ಈ ಕಾದಂಬರಿ 'ರೇಣು’ ಅವರಿಗೆ ಬಹು ದೊಡ್ಡ ಹೆಸರನ್ನು ತಂದುಕೊಟ್ಟಿತು. ಅನೇಕ ವಿಮರ್ಶಕರು ಕಾದಂಬರಿಯನ್ನು ಹಿಂದಿಯ ಮತ್ತೊಬ್ಬ ಪ್ರಸಿದ್ಧ ಕಾದಂಬರಿಕಾರ ಪ್ರೇಮಚಂದರ ಪ್ರಮುಖ ಕಾದಂಬರಿ ’ಗೋದಾನ’ದ ಜೊತೆಗೆ ಹೋಲಿಸಿ,’ಗೋದಾನ’ ದ ನಂತರದ ಮತ್ತೊಂದು ಮಹತ್ವದ ಕಾದಂಬರಿ ಎಂದು ಬಣ್ಣಿಸಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತೀಯ ಜೀವನದ ಕಲಾಪೂರ್ಣ ಯಥಾರ್ಥವಾದಿ ಮಹಾಕಾವ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ವಾತಂತ್ರ್ಯದ ನಂತರದ ಗ್ರಾಮೀಣ ಭಾರತದ ಚಿತ್ರಣ ಇಲ್ಲಿದೆ. ಇಲ್ಲಿನ ಘಟನೆ ಬಿಹಾರದ ಒಂದು ಚಿಕ್ಕ ಕ್ಷೇತ್ರದಲ್ಲಿ ನಡೆಯುವಂಥದಾದರೂ ಅದು ಇಡೀ ಗ್ರಾಮೀಣ ಭಾರತದ ಬದುಕನ್ನು ಪ್ರತಿನಿಧಿಸುತ್ತದೆ. ಇಂದು ಹರಡುತ್ತಿರುವ ವೇದನೆ, ದುಃಖ  ಕ್ಷೋಭೆಗಳ ಯಥಾರ್ಥ ಚಿತ್ರಣ ಇಲ್ಲಿದೆ.

About the Author

ಹೆಚ್. ಎಸ್. ಪಾರ್ವತಿ
(03 February 1934 - 09 November 2015)

ಹಿರಿಯ ಸಾಹಿತಿ ಪಾರ್ವತಿ ಎಚ್.ಎಸ್ ಅವರು ವೃತ್ತಿಯಲ್ಲಿ ಆಕಾಶವಾಣಿ ಕಾರ್ಯಕ್ರಮ ಸಂಯೋಜಕಿಯಾಗಿ ಸೇವೆ ಸಲ್ಲಿಸಿದ್ದರು. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿದ್ದ ಅವರು ನೇಸರ-ನೆರಳು, ಮಡಿಲು, ಯುಗಪುರುಷ ಮುಂತಾದ ಕಾದಂಬರಿಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ   ಮಹತ್ವದ ಕೊಡುಗೆ ನೀಡಿದ್ದಾರೆ.  ಇವರಿಗೆ ಅನುಪಮಾ ಪ್ರಶಸ್ತಿ, ಸೌಹ ಸಮಾನ ಲಿಪಿಪ್ರಾಜ್ಞೆ ಪ್ರಶಸ್ತಿ, ಕೆ.ಎಸ್.ಭಾರತಿ ರಾಜಾರಾಮ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಒಲಿದುಬಂದಿವೆ.  ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ಕಲೆಗೆ ಜಾತಿಯ ಹಂಗಿಲ್ಲ, ಇದು ಬರಿ ಬೆಳಗಲ್ಲ, ಹೆಣ್ಣು ಹೃದಯ, ಬದಲಾದ ಪ್ರತಿಬಿಂಬ, ಸ್ವರ ಅಪಸ್ವರ, ಒಂಟಿ ಮೋಡ, ನೆನಪು ...

READ MORE

Related Books