ಮಾತಿನ ಮನೆಯಲ್ಲಿ ಸ್ಪಟಿಕದ ಸಲಾಕೆ

Author : ಶಶಿಕಲಾಗೌಡ ಎಂ. ಎಸ್.

Pages 192

₹ 150.00
Year of Publication: 2018
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿದ್ದ ಎ.ಕೆ. ಸುಬ್ಬಯ್ಯ ಅವರು ತಮ್ಮ ಕಟುವಾದ ಟೀಕೆಗಳಿಂದ ಸರ್ಕಾರವನ್ನು ಪೇಚಿಗೆ ಸಿಲುಕಿಸುತ್ತಿದ್ದರು. ಸುಬ್ಬಯ್ಯ ಮಾತಿಗೆ ನಿಂತರೆ ತರ್ಕಬದ್ಧವಾದ ರೀತಿಯಲ್ಲಿ ಆಡಳಿತಯಂತ್ರದ ಲೋಪವನ್ನು ಬಯಲಿಗೆ ಎಳೆಯುತ್ತಿದ್ದರು. ಮೇಲ್ಮನೆಯಲ್ಲಿ ಮಾತಿನ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜೀವಂತವಾಗಿ ಇಡಲು ಯತ್ನಿಸಿದವರಲ್ಲಿ ಸುಬ್ಬಯ್ಯ ಕೂಡ ಒಬ್ಬರು. ಸುಬ್ಬಯ್ಯ ಅವರು ವಿಧಾನ ಪರಿಷತ್ತಿನಲ್ಲಿ ಮಾಡಿದ ಭಾಷಣಗಳನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ’ನುಡಿಯೆಂಬುದು ಉರಿಯ ಕೆಂಡ’ ಈ ಸಂಪುಟಗಳ ಪೈಕಿ ಮೊದಲನೆಯದು. ಸು‌ಬ್ಬಯ್ಯನವರ ಸದನದ ಭಾಷಣಗಳನ್ನು ಓದುವ ಮೂಲಕ ಮಾತಿನ ವೈಖರಿಯನ್ನು ಅರಿಯಬಹುದು.

About the Author

ಶಶಿಕಲಾಗೌಡ ಎಂ. ಎಸ್.
(12 October 1969)

ಶಶಿಕಲಾಗೌಡ ಎಂ.ಎಸ್., ಎಂ.ಎ., ರಾಷ್ಟಭಾಷಾ ಪ್ರವೀಣ್, ಡಿ.ಫಾರ್ಮಾ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ 12-10-1969ರಂದು ಜನಿಸಿದರು. ಇವರ ಕೃತಿಗಳು: ಎ.ಕೆ. ಸುಬ್ಬಯ್ಯ (ಜೀವನ ಚರಿತ್ರೆ-ಪ್ರತಿಭಾವಂತ ಸಂಸದೀಯ ಪಟುಗಳ ಮಾಲಿಕೆ) ಗಾಂಧಾರಿ (ಕೋಮಲ್ ಗಾಂಧಾರ್‌ ನಾಟಕದ ಅನುವಾದ ಹಿಂದಿಯಿಂದ) ಕೃತಿ ಪ್ರಕಟವಾಗಿದೆ. ಕನ್ನಡದಿಂದ ಹಿಂದಿಗೆ, ಹಿಂದಿಯಿಂದ ಕನ್ನಡಕ್ಕೆ ಕನ್ನಡದಿಂದ ಇಂಗ್ಲಿಷಿಗೆ ಕೃತಿಗಳ ಅನುವಾದ ಕೆಲಸವನ್ನು ಮಾಡಿದ್ದಾರೆ.  ವಸಂತ ಬಿರುಗಾಳಿ ಎಂಬ ಅಸ್ಸಾಮಿ ಮೂಲದ ಕನ್ನಡ ಅನುವಾದ ನಾಟಕ ರಾಷ್ಟ್ರೀಯ ನಾಟಕ ಮಾಲಿಕೆಯಲ್ಲಿ ಪ್ರಸಾರವಾಗಿದೆ. ನಾಟಕ ರಚನೆ, ಅಭಿನಯ, ವಸ್ತ್ರವಿನ್ಯಾಸ ಇತ್ಯಾದಿಯಲ್ಲಿ ಸಕ್ರಿಯರು. ಚಂದನವಾಹಿನಿಯ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 1998ರಿಂದಲೂ ರಾಷ್ಟ್ರ ...

READ MORE

Related Books