ಮತ್ತೆ ಮತ್ತೆ ಹೇಗೆ ಹಾಡಲಿ

Author : ಸಂತೆಬೆನ್ನೂರು ಫೈಜ್ನಟ್ರಾಜ್

Pages 112

₹ 120.00




Year of Publication: 2022
Published by: ಅಕ್ಷರ ಮಂಟಪ ಪ್ರಕಾಶನ
Address: #1667, 6ನೇ ಸಿ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಂಪಿನಗರ, ಬೆಂಗಳೂರು-560104
Phone: 9448603689

Synopsys

ಮಾನವೀಯತೆಯ ಕವಿತೆಗಳು ಇಲ್ಲಿ ಪ್ರಧಾನವಾಗಿವೆ. ಮತ್ತೆ ಮತ್ತೆ ಕಾಡುವ ಕವಿತೆಗಳನ್ನು ಕವಿ ಸಂತೆಬೆನ್ನೂರು ಫೈಜ್ನಟ್ರಾಜ್‌ ಅವರ ‘ಮತ್ತೆ ಮತ್ತೆ ಹೇಗೆ ಹಾಡಲಿ’ ಕವನ ಸಂಕಲನವು ಓದುಗರಿಗೆ ನೀಡುತ್ತದೆ. ನಲವತ್ತು ಕವಿತೆಗಳ ಗುಚ್ಛವನ್ನು ಈ ಕೃತಿಯು ಒಳಗೊಂಡಿದೆ. ಕವಿತೆಗಳಲ್ಲಿ ಬಳಕೆಯಾಗಿರುವ ಪದಗಳು, ಹರಿ ಬಿಟ್ಟಿರುವ ಭಾವನೆಗಳು ಎದೆಯನ್ನು ನಾಟುತ್ತವೆ. ಇಲ್ಲಿನ ಕವಿತೆಗಳು ಒಂದೊಂದು ಕವಿತೆಗಳು ಮತ್ತೊಂದು ಕವಿತೆಯೊಂದಿಗೆ ಪೈಪೋಟಿಗೆ ನಿಲ್ಲುವಂತೆ ಪ್ರಬುದ್ಧವಾಗಿವೆ. ಬಹುಮುಖ್ಯವಾಗಿ ಕವನ ಸಂಕಲನದೊಳಗಿನ ಕವಿತೆಗಳು ಕವಿಯ ಕವಿತೆಗಳಲ್ಲ; ಓದುಗನ ಆಪ್ತ ಕವಿತೆಗಳು. ಕವನ ಸಂಕಲನದೊಳಗಿನ ಪ್ರತೀ ಕವಿತೆ ಹದಬೆರೆತ ಕವಿತೆ. ಇಲ್ಲಿರುವುದು ಓದಿ ಇತರರ ಕಿವಿಗೂ ಉಸುರಬಹುದಾದ ಕವಿತೆಗಳು. ಪದೇಪದೇ ಧೇನಿಸುವಂತೆ ಮಾಡುವ ಕವಿತೆಗಳನ್ನು ಈ ಕವನಸಂಕಲನವು ಒಳಗೊಂಡಿದೆ.

About the Author

ಸಂತೆಬೆನ್ನೂರು ಫೈಜ್ನಟ್ರಾಜ್

ಗೆಳೆಯ ನಟರಾಜ್ ಅವರ ಅಕಾಲಿಕ ಮರಣ ಸೈಯದ್‌ ಫೈಜುಲ್ಲಾ ಅವರಿಗೆ ಅರಗಿಸಿಕೊಳ್ಳಲಾಗಲೇ ಇಲ್ಲ. ಮಿತ್ರ ತನ್ನೊಂದಿಗೆ ಸದಾ ಇರಬೇಕೆಂಬ ಹಂಬಲ. ಪರಿಣಾಮ ತನ್ನ ಹೆಸರಿಗೆ ಗೆಳೆಯನ ಹೆಸರನ್ನು ಸೇರಿಸಿಕೊಂಡರು. ಸಂತೆಬೆನ್ನೂರು ಫೈಜ್ನಟ್ರಾಜ್ ಎಂದು ಬದಲಾದರು.  ಬಹುಶಃ ನಾಡಿನ ಪತ್ರಿಕೆಗಳನ್ನು ನಿಯತಕಾಲಿಕಗಳನ್ನು ನಿರಂತರ ಓದುವವರಿಗೆ ಫೈಜ್ನಟ್ರಾಜ್‌ ಹೆಸರು ಚಿರಪರಿಚಿತ. ಅವರ ಹೆಸರು ನಾಡಿನ ಯಾವುದಾದರೂ ಪತ್ರಿಕೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಹಾಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಲೇ ಇರುವ ನಿರಂತರತೆ ಯನ್ನು ಅವರು ಕಾಯ್ದುಕೊಂಡಿದ್ದಾರೆ.  ದಾವಣಗೆರೆ ಜಿಲ್ಲೆ ಚನ್ನಗಿರಿಯ ಸಂತೆಬೆನ್ನೂರು ಗ್ರಾಮದಲ್ಲಿ ಜನನ. ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರು. ’ಎದೆಯೊಳಗಣ ತಲ್ಲಣ’, ...

READ MORE

Related Books