ಮೌನ ಕ್ರಾಂತಿ

Author : ಹಂ.ಗು.ರಾಜೇಶ್

Pages 72

₹ 60.00




Year of Publication: 2013
Published by: ಚೈತ್ರಾ ಪ್ರಕಾಶನ
Address: ತಿಮ್ಮಯ್ಯ ಚೇಂಬರ್‍ಸ್ ,1ನೇ ಅಡ್ಡರಸ್ತೆ ಗಾಂಧಿನಗರ,ಬೆಂಗಳೂರು-560009
Phone: 22382535

Synopsys

ಲೇಖಕರು ಕಳೆದ ಐದು ವರ್ಷಗಳಿಂದ ಸಮಕಾಲೀನ ವಿದ್ಯಮಾನಗಳಿಗೆ, ಸಮಸ್ಯೆಗಳಿಗೆ ಮೌನವಾಗಿ ಪ್ರತಿಕ್ರಿಯಿಸುತ್ತಾ ಬದಲಾವಣೆಯ ಆಶಯವನ್ನು ಬಯಸಿ ಬರೆದ ಬರವಣಿಗೆಗಳನ್ನು ಈ ಕೃತಿಯೂ ಒಳಗೊಂಡಿದೆ. ಇಲ್ಲಿ ಸಂಕಲನವಾಗಿರುವ ಲೇಖನಗಳು ಹಾಗು ಬರವಣಿಗೆಗಳು ಇತಿಹಾಸ ದರ್ಪಣ ಎಂಬ ಪತ್ರಿಕೆಯ ಸಂಪಾದಕೀಯದ ಆಯ್ದ ಭಾಗಗಳ ಪರಿಷ್ಕ್ರತ ರೂಪವಾಗಿದೆ. ಇಲ್ಲಿರುವ ಲೇಖನಗಳು ನಮ್ಮ ಸಾಮಾಜಿಕ ಸಂಗತಿಯೊಂದಿಗೆ ಲೇಖಕರು ನಡೆಸಿದ ಅನುಸಂಧಾನವಾಗಿದೆ. ವ್ಯವಸ್ಥೆಯ  ಹಿಂದಿನ ರಾಜಕೀಯ ಹುನ್ನಾರಗಳನ್ನು ಖಂಡಿಸುತ್ತಲೇ ಕನ್ನಡ , ಶಿಕ್ಷಣ, ಸಮಾಜ , ಇತಿಹಾಸಗಳು, ತಮ್ಮದೇ ಆದ ದೇಸಿ ನೆಲೆಗಳ ಮೂಲಕ ಮತ್ತೆ ಹೊಸದಾಗಿ ಮರುಸೃಷ್ಟಿಸಿಕೊಳ್ಳಬೇಕಾದ ಎಚ್ಚರವನ್ನು ಈ ಸಂಕಲನ ಒಳಗೊಂಡಿದೆ. ಯಂತ್ರಯುಗವಾದ ಪ್ರಸ್ತುತ ನಮ್ಮ ಕಾಲದಲ್ಲಿ ಎಲ್ಲ ವೈಚಾರಿಕತೆಯನ್ನು ನುಂಗಿ ಹಾಕುತ್ತಿರುವ ಆರ್ಥಿಕ, ಧಾರ್ಮಿಕ, ರಾಜಕಾರಣದ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ಹಂ.ಗು.ರಾಜೇಶ್

ಲೇಖಕ ಹಂ.ಗು. ರಾಜೇಶ್ ಮೂಲತಃ ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗ ಹೋಬಳಿಯ  ಹಂದಲಗೆರೆ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಹಾಗೂ ಬಿ.ಎಡ್ ಪದವೀಧರರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನ ತರಗತಿ ಕುರಿತು ಡಿಪ್ಲೊಮಾ ಪದವೀಧರರು.ಪ್ರಸ್ತುತ ಬೆಂಗಳೂರು ದಕ್ಷಿಣ ತಾಲೂಕು ದೊಡ್ಡೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿಗಾಗಿ ಸಂಶೋಧನೆ ಮಾಡುತ್ತಿದ್ದಾರೆ. ಪ್ರಥಮ ಪಿ.ಯು.ಸಿ. ಮತ್ತು 6-7ನೇ ತರಗತಿಗಳ ಇತಿಹಾಸ ಪಠ್ಯ ಪುಸ್ತಕ ರಚನಾ ಸಮಿತಿ ಮತ್ತು ಪರಿಷ್ಕರಣಾ ಸಮಿತಿಗಳಲ್ಲಿ ಸದಸ್ಯರಾಗಿದ್ದರು.  ಇತಿಹಾಸ ಸಂಶೋಧನೆ ಮತ್ತು ಪುರಾತತ್ತ್ವ ಅಧ್ಯಯನ ಇವರ ಆಸಕ್ತ ಕ್ಷೇತ್ರಗಳು. 'ಇತಿಹಾಸ ದರ್ಪಣ' ತ್ರೈಮಾಸಿಕದ ಸಂಸ್ಥಾಪಕ ...

READ MORE

Related Books