ಮಾವೋವಾದ-ಒಂದು ಎಡಪಂಥೀಯ ವಿಶ್ಲೇಷಣೆ

Author : ವಿಶ್ವ ಕುಂದಾಪುರ

Pages 120

₹ 100.00




Year of Publication: 2011
Published by: ಕ್ರಿಯಾ ಪ್ರಕಾಶನ
Address: ಸಂ. 40, ಸುರಿಭವನ, 16ನೇ ಅಡ್ಡರಸ್ತೆ, 2ನೇ ಬಿ ಮುಖ್ಯರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು-560027
Phone: 080-22234369/9448578021

Synopsys

'ಮಾವೋವಾದ'ದ ಹೆಸರಿನಲ್ಲಿ ದೇಶದ ಹಲವೆಡೆ ನಡೆಯುತ್ತಿರುವ ಅಮಾನವೀಯ ಹಾಗೂ ಕ್ರೂರ ಘಟನೆಗಳ ಕುರಿತು ವಿವರಣೆಗಳಷ್ಟೇ ಅಲ್ಲದೆ ವಿಚಾರಪೂರ್ಣ ವಿಶ್ಲೇಷಣೆಯನ್ನೂ ಕೃತಿ ಒಳಗೊಂಡಿದೆ. ನಾಲ್ಕು ಲೇಖನಗಳು ಇರುವ ಕೃತಿ ಸಮಯೋಚಿತವಾದುದಾಗಿದೆ.  

ಬಡತನ, ಅಸಮಾನತೆ, ಶೋಷಣೆ ಇವುಗಳಲ್ಲಿ ನರಳುವುದರ ಜೊತೆಗೆ ವ್ಯವಸ್ಥೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾದ ಗ್ರಾಮಾಂತರ ಹಾಗೂ ಅರಣ್ಯ ಪ್ರದೇಶಗಳ ಜನಗಳ ಕುರಿತಾಗಿ ತಾವು ಹೋರಾಡುತ್ತಿರುವುದಾಗಿ ಹೇಳಿಕೊಳ್ಳುವ ಮಾವೋವಾದಿಗಳು, ಅದೇ ನಿರ್ಗತಿಕರನ್ನು, ಬಡ ಪೊಲೀಸ್ ಪೇದೆಗಳನ್ನು ಹಳ್ಳಿಗರನ್ನು 'ಜನತಾ ಶತ್ರುಗಳು' ಎಂಬ ಹೆಸರಿನಲ್ಲಿ ಕೊಲ್ಲುತ್ತಿದ್ದಾರೆ.  ವ್ಯವಸ್ಥೆಯ ಕೌರ್ಯವನ್ನು ತಮ್ಮ ಕೌರ್ಯಕ್ಕೆ ಸಮರ್ಥನೆಯಾಗಿ ಬಳಸುತ್ತಿದ್ದಾರೆ. ತಮ್ಮ ಹಾಗೆಯೇ ಬಡಜನರು, ಕಾರ್ಮಿಕರು, ಕೂಲಿಕಾರರ ಕುರಿತಾಗಿ ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡುತ್ತಿರುವ ಎಡಪಂಥೀಯರನ್ನು ವ್ಯವಸ್ಥೆಯ ಕೈಗೊಂಬೆಗಳು ಎಂಬಂತೆ ಸಿನಿಕತನದಲ್ಲಿ ವರ್ಣಿಸುತ್ತಾರೆ. ಹಿಂಸಾಮಾರ್ಗ ಎಷ್ಟು ಅಪ್ರಯೋಜಕ, ಎಷ್ಟು ಅಪಾಯಕಾರಿ ಹಾಗೂ ಸದ್ಯದ ಯುಗದಲ್ಲಿ ಎಷ್ಟು ಆತ್ಮಘಾತುಕ ಎಂಬುದನ್ನು ವಿಜಯಪಸಾದ್ ಅವರು 'ಮಾವೋವಾದದ ಅಸಾಂಗತ್ಯಗಳು' ಎಂಬ ಲೇಖನದಲ್ಲಿ ಪರಿಣಾಕಾರಿಯಾಗಿ ತೋರಿದ್ದಾರೆ.

ಹಿರಿಯ ಚಿಂತಕ ಜಿ.ಕೆ. ಗೋವಿಂದರಾವ್ ಅವರು  ’ಮಾವೋವಾದಿಗಳ ಉದ್ದಿಶ್ಯಗಳೇನು ಹೊಸವಲ್ಲ, ಎಲ್ಲ ಪ್ರಗತಿಪರ, ಸಮಾಜವಾದಿ, ಆರ್ಥಿಕ-ಸಾಮಾಜಿಕ ಸಮಾನತಾ ಸಿದ್ದಾಂತಗಳಲ್ಲಿ ನಂಬಿಕೆಯಿರುವವರೆಲ್ಲರದೂ ಅದೇ ಉದ್ದಿಶ್ಯಗಳು, ಮೌಲ್ಯಗಳು ಆಗಿವೆ. ಆದರೆ ಮಾನವೀಯ ಹಾಗೂ ಭವಿಷವಾದೀ ಗುರಿಗಳಿರುವರಾರೂ ಅಮಾನವೀಯ ಹಿಂಸಾಮಾರ್ಗಗಳಿಂದ ಆಕರ್ಷಿತರಾಗುವುದಿಲ್ಲ ಎಂಬ ಪಾಥಮಿಕ ಅಂಶ ಮಾವೋವಾದಿಗಳಿಗೆ ಅರ್ಥವಾಗುವ ಹಾಗೆ ಕಾಣುವುದಿಲ್ಲ...’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸೇನ್‌ಜಿತ್ ಬೋಸ್ ಅವರು ಸಂಪಾದಿಸಿದ ಕೃತಿಯನ್ನು ಕನ್ನಡಕ್ಕೆ ವಿಶ್ವಕುಂದಾಪುರ ಅವರು ಅನುವಾದಿಸಿದ್ದಾರೆ.

About the Author

ವಿಶ್ವ ಕುಂದಾಪುರ

ವಿಶ್ವ ಕುಂದಾಪುರ ಅವರು ವಿದ್ಯಾರ್ಥಿ ದಿನಗಳಿಂದಲೂ ಪ್ರಗತಿಪರ ಆಂದೋಲನದಲ್ಲಿ ಗುರುತಿಸಿಕೊಂಡವರು. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅವರು 'ದಿ ಹಿಂದೂ’ ಇಂಗ್ಲಿಷ್ ದೈನಿಕದ ಪ್ರಧಾನ ವರದಿಗಾರರಾಗಿ ಕೋಲಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ’ಸಮತೆಯ ನಾಡಿನ ಉದಯಕ್ಕಾಗಿ’ (ಹರಿಕಿಷನ್ ಸಿಂಗ್ ಸುರ್ಜಿತ್), ವಿಮೋಚನೆಯ ಸಮರದಲ್ಲಿ (ಮೇಜರ್ ಜೈಪಾಲ್ ಸಿಂಗ್), ’ಮಾವೋವಾದ: ಒಂದು ಎಡಪಂಥೀಯ ವಿಶ್ಲೇಷಣೆ' (ವಿವಿಧ ಲೇಖಕರು), `ಚಿತ್ತಗಾಂಗ್ ಶಸ್ತ್ರಾಗಾರ ದಾಳಿ' (ಸುಜೂದ್ ರಾಮ್ ) ಅವರ ಕೆಲವು ಪ್ರಮುಖ ಅನುವಾದ ಕೃತಿಗಳು. ಅವರ “ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿ’ ಪ್ರಬಂಧವು ಕನ್ನಡದಲ್ಲಿ ಅಪರೂಪದ ಕೃತಿ. `ವಿಮೋಚನೆಯ ಸಮರ’ದಲ್ಲಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2009ನೇ ಸಾಲಿನ ಅತ್ಯುತ್ತಮ ...

READ MORE

Related Books