ಮಾಯಾಚಿಗರಿ

Author : ಬಿ.ಆರ್‌. ಪೊಲೀಸ್‌ ಪಾಟೀಲ

Pages 92

₹ 80.00




Year of Publication: 2014
Published by: ವಾತ್ಸಲ್ಯ ಪ್ರಕಾಶನ
Address: ಬನಹಟ್ಟಿ - 587311, ಬಾಗಲಕೋಟೆ ಜಿಲ್ಲೆ

Synopsys

ಲೇಖಕ ಬಿ.ಆರ್. ಪೊಲೀಸ್‌ ಪಾಟೀಲ ಅವರ ಅಂಕಣ, ಚಿಂತನಾ ಬರಹ ಹಾಗೂ ಲಲಿತ ಪ್ರಬಂಧಗಳ ಸಂಕಲನ ‘ಮಾಯಾಚಿಗರಿ’. ಪಾಟೀಲರ ಮಾತು ಹಾಗೂ ಮಂಥನ ಎರಡೂ ಆಪ್ಯಾಯಮಾನವಾಗಿದ್ದು,  ಅವರ ಬಹುಮುಖಿ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಈ ಕೃತಿ ಸಾಕ್ಷಿಯಾಗಿದೆ. ಈ ಕೃತಿಗೆ 2014ನೇ ಸಾಲಿನ ಆಜೂರು ಪ್ರತಿಷ್ಠಾನ ರಾಜ್ಯ ಪ್ರಶಸ್ತಿ ದೊರೆತಿದೆ.

About the Author

ಬಿ.ಆರ್‌. ಪೊಲೀಸ್‌ ಪಾಟೀಲ

ಲಾವಣಿ, ತತ್ವಪದ, ಬಯಲಾಟಗಳನ್ನು ಬರೆದು ತಂಡ ಕಟ್ಟಿಕೊಂಡು ಕಳೆದ ನಾಲ್ಕುವರೆ ದಶಕಗಳಿಂದಲೂ ಪ್ರಯೋಗಿಸುತ್ತಾ ಬಂದಿರುವ ಪೊಲೀಸ್‌ ಪಾಟೀಲ ಅವರ ಹಾಡಿನ ಮೋಡಿಗೆ ತಲೆಬಾಗದವರಿಲ್ಲ. ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲಿಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ನೂರಿಪ್ಪತ್ತು ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. 93 ನಾಟಕಗಳನ್ನು ಇವರು ರಚಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ವಿಶೇಷ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ...

READ MORE

Related Books