ಮೀಸಲಾತಿ ಭ್ರಮೆ ಮತ್ತು ವಾಸ್ತವ

Author : ಹೆಚ್. ಎನ್. ನಾಗಮೋಹನದಾಸ್

Pages 136

₹ 120.00




Year of Publication: 2022
Published by: ಜನಪ್ರಕಾಶನ
Address: #54, ಬೈರಯ್ಯ ನಿವಾಸ, 14 ತಿರುವು, 5 ಬಡಾವಣೆ, ಜಯನಗರ , ಬೆಂಗಳೂರು 560041
Phone: 9448324727

Synopsys

ಮೀಸಲಾತಿ ಭ್ರಮೆ ಮತ್ತು ವಾಸ್ತವ ಎಂಬ ಕೃತಿಯು ಹೆಚ್‌.ಎನ್‌ ನಾಗಮೋಹನದಾಸ ಅವರ ಲೇಖನಗಳ ಸಂಗ್ರಹವಾಗಿದೆ.  ಕರ್ನಾಟಕದಲ್ಲಿ ಮೀಸಲಾತಿ ನೀತಿಗೆ 100 ವರ್ಷಗಳ ಇತಿಹಾಸವಿದೆ. ಮೀಸಲಾತಿಯಿಂದ ಒಂದಷ್ಟು ಜನರಿಗೆ ಅನುಕೂಲವಾಗಿದೆ ಎಂಬುದು ಸತ್ಯ ಆದರೆ ಇಂದು ಸರ್ಕಾರಗಳು ಅನುಸರಿಸುತ್ತಿರುವ ನೀತಿಗಳು ಮೀಸಲಾತಿಯನ್ನು ಅಪ್ರಸ್ತುತಗೊಳಿಸುತ್ತಿವೆ. ದೇಶದ ರಾಜಕಾರಣವು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಿಲ್ಲ. ಮುಗ್ಧ ಜನರನ್ನು ಮೀಸಲಾತಿ ಭ್ರಮೆಯಲ್ಲಿ ಮುಳುಗಿಸಿದ್ದಾರೆ. ಸತ್ಯ ಏನೆಂಬುದನ್ನು ಜನರಿಗೆ ತಿಳಿಸುವ ಸಣ್ಣ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ ಎಂದು ಲೇಖಕರು ಹೇಳಿದ್ದಾರೆ.

About the Author

ಹೆಚ್. ಎನ್. ನಾಗಮೋಹನದಾಸ್

ನ್ಯಾ.ಎಚ್.ಎನ್.ನಾಗಮೋಹನದಾಸ್ ಅವರು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತಿಹೊಂದಿದ್ದಾರೆ. ಸಂವಿಧಾನ, ಕಾನೂನು, ಮಹಿಳಾ ಸಮಾನತೆ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಜನಭಾಷೆಯಲ್ಲಿ ಸರಳವಾಗಿ ಕಾನೂನನ್ನು ಅರ್ಥಮಾಡಿಸುವಲ್ಲಿ ಕಾರ್ಯ ಪ್ರೌರುತ್ತರು. ಕಾನೂನು, ಅಸಮಾನತೆ, ಸಂವಿಧಾನದ ಅರಿವಿನ ಕುರಿತಾಗಿ ಹಲವು ಕೃತಿಗಳನ್ನು ರಚಿಸಿರುವ ನಾಗಮೋಹನದಾಸರು ದಲಿತ, ಮಹಿಳಾಪರ ಹೋರಾಟಗಳಲ್ಲಿ ಭಾಗಿಯಾಗಿ ಕಾನೂನಿನ ಅರಿವು ಮೂಡಿಸುತ್ತಾರೆ. ಅವರ ಕೃತಿಗಳು- ಮಹಿಳಾ ಅಸಮಾನತೆ, ಸಂವಿಧಾನ ಓದು ವಿದ್ಯಾರ್ಥಿ ಯುವಜನರಿಗಾಗಿ ಕೈಪಿಡಿ ಇತ್ಯಾದಿ.  ...

READ MORE

Related Books