ಮೇಘದೂತ ದರ್ಶನಂ

Author : ನಾರಾಯಣ ಘಟ್ಟ

Pages 80

₹ 120.00




Year of Publication: 2015
Published by: ಗಾರ್ಗಿ ಪ್ರಕಾಶನ
Address: ಕವಿತೆ, #823, 5ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, 4ನೇ ಹಂತ, ಬಿಇಎಂಎಲ್‌ ಲೇಔಟ್‌, ರಾಜರಾಜೇಶ್ವರಿನಗರ, ಬೆಂಗಳೂರು
Phone: 9916724041

Synopsys

ಮೇಘದೂತ ಒಂದು ವಿರಹದ ಕಾವ್ಯ. ಹಳೆಯ ಕಾವ್ಯಕ್ಕೆ ಹೊಸ ರಂಗು; ಹಳೆಯ ನೋಟ ಹೊಸ ಕಣ್ಣು. ಕವಿ ನಾರಾಯಣಘಟ್ಟರ ಈ ಕೃತಿಯ ಕಾಳಿದಾಸನ ದರ್ಶನದ ಜೊತೆ ಬೆರೆತು ಅದು ರಸವೋರಸವಾಗಿದೆ. ಕನ್ನಡದ ಪದ್ಯಗಳಾಗಿ ಆ ರಸವೈರಸವಿಶೇಷ ಮೂಡಿಬಂದಿದೆ. ಮೊದಲ ಪದ್ಯದಲ್ಲೆ ಕವಿ ಕಾಳಿದಾಸನ ಆಶೀರ್ವಾದ ಬೇಡುವ ನೆಪದಲ್ಲಿ ಆ ಕವಿಯ ದರ್ಶನವನ್ನು ತನ್ನಲ್ಲಿ ಆಹ್ವಾನಿಸಿಕೊಳ್ಳುವ ಪರಿ ಚೆನ್ನಾಗಿದೆ. 

“ನಿನ್ನಂತೆಯೇ-ನಾ-ನಾನೊಲವೊತ್ತಿಎದೆಯೊಳಗೆಬೆಂದು

ಹೊರಬಂದಮಾತುಗಳಂಚೆಲ್ಲಿಬೇಡವೆನಾಶೀರ್ವಾದಂ”

ಎದೆಯೊಳಗೆ ಬೆಂದು ಹೊರಬಂದ ಮಾತುಗಳನ್ನು ಪುಷ್ಪಾಂಜಲಿಯಾಗಿಸಿ ಕಾಳಿದಾಸನಿಗೆ ಅರ್ಚನೆ. ಈ ಕಾವ್ಯದ ಪದ್ಯಗಳಲ್ಲಿ ಕವಿ ನಾರಾಯಣ ತನ್ನ ಪೂರ್ವಸೂರಿ ಕಾಳಿದಾಸನಿಗಿಂತ ಸ್ವಲ್ಪ ಹೃದಯದಾಳಕ್ಕೆ ಇಳಿಯುತ್ತಾನೆ. ಭಾವಗಳನ್ನು ಹೊರಹಾಕುತ್ತಾನೆ. ನೋವನ್ನು ವ್ಯಕ್ತಪಡಿಸುತ್ತಾನೆ. ಇಂತಹ ಹಲವಾರು ಕಾವ್ಯಗಳನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ.

Related Books