ಮೇನಕಾ

Author : ಮಾಲತಿ ಮುದಕವಿ

Pages 400

₹ 400.00




Year of Publication: 2020
Published by: ಅಜಬ್ ಪಬ್ಲಿಕೇಷನ್ಸ್,
Address: #7092, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಶೋಕನಗರ, ನಿಪ್ಪಾಣಿ-591237
Phone: 9689890420

Synopsys

ದೇವತೆಗಳು ಹಾಗೂ ದೈತ್ಯರು ಜೊತೆಗೂಡಿ ಸಮುದ್ರ ಮಂಥನ ಮಾಡುತ್ತಲಿದ್ದರು. ಮೇರು ಪರ್ವತವು ಕಡೆಗೋಲಾಗಿಯೂ ವಾಸುಕಿ ನಾಗನು ಹಗ್ಗವಾಗಿಯೂ ಉಪಯೋಗವಾಗಿದ್ದವು. ವಾಸುಕಿಯ ಬಾಲವು ದೇವತೆಗಳ ಕೈಯಲ್ಲಿದ್ದರೆ, ತಲೆ ದೈತ್ಯರ ಕೈಯಲ್ಲಿತ್ತು. ದೇವತೆಗಳ ಕಡೆಗೆ ಇಬ್ಬರು ಮಾನವರಿದ್ದರು. ವಾನರ ಮಾನವರಾದ ವಾಲಿ ಹಾಗೂ ಸುಗ್ರೀವರು. ಇಬ್ಬರೂ ಸೋದರರು. ವಾಲಿ ಅತ್ಯಂತ ಬಲಾಢ್ಯ ಯುಕ್ತಿಗಳನ್ನು ಹೊಂಚುವುದರಲ್ಲಿ ಇಂದ್ರದೇವರಷ್ಟು ಧೂರ್ತತನ ಮತ್ತಾರಿಗೂ ಇರಲು ಸಾಧ್ಯವಿಲ್ಲ. ಬಲಿರಾಜನೂ ಕೂಡ ಇಂದ್ರದೇವನ ಎದುರು ಸೋಲಲೇಬೇಕಾಯಿತು. ದೇವತೆಗಳು ವಿಷ್ಣುದೇವರ ಮಾತನ್ನೇ ಕೇಳುವಂಥವರು. ಆದರೆ ಅವರ ಶಕ್ತಿ ಹಾಗೂ ಅಧಿಕಾರ ಕೇವಲ ಸ್ವರ್ಗಕ್ಕೆ ಮಾತ್ರ ಸೀಮಿತವಾದದ್ದು. ಅದರಲ್ಲೂ ಮಹೇಶ್ವರ ಉರ್ಫ್ ಶಂಕರರಲ್ಲಿ ವಿಶ್ವವನ್ನೇ ಸಂಹಾರ ಮಾಡುವ ಶಕ್ತಿ ಇತ್ತು. ಬ್ರಹ್ಮ ದೇವರಿಗೆ ನಿರ್ಮಾಣದ ಶಕ್ತಿ. ಆವರು ವಿಶ್ವದ ನಿರ್ಮಾಣವನ್ನೇ ಮಾಡಿದ್ದರು. ವಿಷ್ಣುದೇವರ ಹತ್ತಿರ ವಿಶ್ವದ ಮೇಲೆ ಪೂರ್ಣ ಅಧಿಕಾರವಿತ್ತು.ಇಂದ್ರದೇವರು ಅವರ ಕೆಳಗಿನ ಸ್ಥಾನದಲ್ಲಿದ್ದವರು. ವಾಲಿ ಸೂರ್ಯದೇವನ ಕಟ್ಟಾ ಭಕ್ತ. ಅಲ್ಲದೇ ಇಂದ್ರದೇವನ ಮಗನೂ ಆಗಿದ್ದನು. ಆದರೆ ಅವನ ತಾಯಿ ಮಾತ್ರ ಇಂದ್ರದೇವನ ಪತ್ನಿಯಾದ ಶಚಿದೇವಿಯಲ್ಲ. ಅವಳೊಬ್ಬ ವಾನರ ಮಾನವಿ. ಅವಳ ಹೆಸರು ವಿಯತಿ. ಇಂದ್ರದೇವರಿಗೆ ಸ್ರ್ತೀಯರಲ್ಲಿ ಅಭಿರುಚಿ ಅಪಾರ. ಆದರೆ ಅವರು ನಂತರದ ಪರಿಣಾಮದ ಬಗ್ಗೆ ಎಂದೂ ಯೋಚಿಸಿದವರಲ್ಲ. ಅಂದರೆ ಪುತ್ರಪ್ರಾಪ್ತಿಯ ಜವಾಬ್ದಾರಿಯನ್ನು ಎಂದೂ ಹೊರುತ್ತಿರಲಿಲ್ಲ. ಈ ರೀತಿ ಸಮುದ್ರದಿಂದ ಜನ್ಮ ತಾಳಿದ ಆರು ಜನರ ಸುಂದರಿಯರಲ್ಲಿ ಮೇನಕೆಯು ಕೂಡ ಒಬ್ಬಳು. ಇದು ಅವಳದೆ ಕೆಥೆಯಾಗಿದೆ. 

 

About the Author

ಮಾಲತಿ ಮುದಕವಿ
(10 April 1950)

ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ.  ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ...

READ MORE

Related Books