ಮಿಂಚುಗಣ್ಣು

Author : ಅಂತಃಕರಣ

Pages 112

₹ 100.00




Year of Publication: 2019
Published by: ಬೆನಕ ಬುಕ್ಸ್ ಬ್ಯಾಂಕ್
Address: ಯಳಗಲ್ಲು, ಕೋಡೂರು ಅಂಚೆ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ- 577418
Phone: 7338437666

Synopsys

‘ಮಿಂಚುಗಣ್ಣು’ 10ನೇ ತರಗತಿ ವಿದ್ಯಾರ್ಥಿ ಅಂತಃಕರಣ ಬರೆದ ಅಂಕಣಪ್ರಬಂಧ ಸಂಕಲನ. ಅಂತಃಕರಣನ 31ನೇ ಪುಸ್ತಕ ‘ಮಿಂಚುಗಣ್ಣು’ ಈ ಕೃತಿಯಲ್ಲಿ ಆಟ-ನೋಟಗಳಿವೆ. ಇದು ಅಂಕಣಗಳ ಸಂಕಲನವಲ್ಲ, ಅಂಕಣ ಪ್ರಬಂಧ ಸಂಕಲನ. ವಯೋಸಹಜವಾಗಿ ನೋಟಕ್ಕಿಂತ ಆಟವೇ ಇದೆ ಎಂದು ಭಾವಿಸಬೇಕಿಲ್ಲ. ಕಾರಣ, ಇಲ್ಲಿ ಆಟವಿರುವುದೂ ನೋಟದಲ್ಲೇ! ಇಲ್ಲಿ ವಿಜ್ಞಾನ-ತಂತ್ರಜ್ಞಾನದ ಇತಿ-ಮಿತಿಗಳನ್ನು ಹೇಳುವ ಪ್ರಬಂಧಗಳ ಜೊತೆ ಪೋಷಕರಿಗೂ ಕಿವಿಮಾತು ಹೇಳುವ ಅರಿವಿನ ಪಾಠವಿದೆ. ಹದಿಹರೆಯಕ್ಕೆ ಕಾಲಿಟ್ಟಿರುವ ಅಂತಕರಣನ ಸಿನಿಮಾ ಪ್ರೀತಿಯೂ ಇಲ್ಲಿದೆ. ನಟನೊಬ್ಬನ ಮೇಲೆಯೇ ಲೇಖನ ಕೇಂದ್ರಿಕೃತವಾಗದೆ ಇಡೀ ಸಿನಿಮಾದ ಅಧ್ಯಯನದಿಂದ ಕೂಡಿದೆ. ಕ್ರಿಕೆಟ್‍ನೆಡಗಿನ ಬೆರಗಿನಷ್ಟೇ ಸೂಕ್ಷ್ಮದ ಒಳನೋಟ ವಿಶ್ಲೇಷಣೆಗಳಿವೆ.

ಕ್ಯಾಪ್ಟನ್ ಕೂಲ್ ಧೋನಿಯ ಸಿಟ್ಟಿಗೆ ಕಾರಣವನ್ನು ವಿಶ್ಲೇಷಿಸಿದಾಗ ಅಂತಃಕರಣ ಓದುಗರ ಅಂತಃಕರಣವನ್ನೂ ಕೆದಕಿ ಎಂತಹವರನ್ನೂ ಭಾವುಕರನ್ನಾಗಿಸಿ ಬಿಡುತ್ತಾನೆ. ಖ್ಯಾತನಾಮರ ಜೊತೆ ಉದಯೋನ್ಮುಖರನ್ನು ಗುರುತಿಸಿ ಬರೆದಿರುವುದು ಈತನ ಸ್ಥಿತಪ್ರಜ್ಞತೆಗೆ ಕನ್ನಡಿ ಹಿಡಿದಿದೆ ಎನ್ನುತ್ತಾರೆ ಲೇಖಕ ಗುಬ್ಬಚ್ಚಿ ಸತೀಶ್. ವಯಸ್ಸಿಗೆ ಮೀರಿದ ಪ್ರೌಢಿಮೆಯನ್ನು ತನ್ನ ಬರಹದಲ್ಲಿ ಕಾಯ್ದುಕೊಳ್ಳುವ ಅಂತಃಕರಣನ ಪ್ರಬಂಧಗಳು ಸರಳವಾಗಿ ಓದುಗರನ್ನು ತಲುಪುತ್ತವೆ.

About the Author

ಅಂತಃಕರಣ

ಅಂತಃಕರಣ  ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ  ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ  ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...

READ MORE

Related Books