ಮೈಂಡ್ ಮ್ಯಾಜಿಕ್

Author : ಬಿ.ವಿ. ಪಟ್ಟಾಭಿರಾಮ್

Pages 312

₹ 165.00




Year of Publication: 2012
Published by: ವಾಸನ್ ಪಬ್ಲಿಕೇಷನ್ಸ್
Address: # 25, ವಾಸನ್ ಟವರ್, ಗುಡ್ ಶೆಡ್ ರಸ್ತೆ, ಟಿಸಿಎಂ ರಾಯನ್ ರಸ್ತೆ, ಸುಭಾಶ್ ನಗರ, ಕಾಟನ್ ಪೇಟೆ, ಬೆಂಗಳೂರು-560053
Phone: 08048535855

Synopsys

ಚಿಂತಕ -ಮನೋಚಿಕಿತ್ಸಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ರಚಿಸಿದ ಕೃತಿ-ಮೈಂಡ್ ಮ್ಯಾಜಿಕ್. ಮನಸ್ಸಿನ ಭಾಷೆಯನ್ನು, ಅದರ ಅದ್ಭುತ ಪರಿಯನ್ನು ತಿಳಿಸುವ ಕೃತಿ ಇದು. ವಿಜಯ ಎಂಬುದು ಒಂದು ಸಲ ಮಾತ್ರ ಬರುವಂತಹದ್ದಲ್ಲ. ಸಾಧಕನಿಗೆ ಅದು ನಿರಂತರವಾಗಿ ದೊರೆಯುತ್ತಿರುತ್ತದೆ. ಮನುಷ್ಯನ ಮಿದುಳು ಒಂದು ಅದ್ಭುತ ಅಂಗ. ಕಂಪ್ಯೂಟರ್ ಅನ್ನು ಈ ಮಿದುಳೇ ಸೃಷ್ಟಿಸಿದೆ ಮತ್ತು ಮಿದುಳಿನ ಕೆಲ ಕೆಲಸಗಳನ್ನು ಕಂಪ್ಯೂಟರ್ ಮಾಡಲು ಅಸಾಧ್ಯ. ಕೆಲವು ಕ್ಲಿಷ್ಟ ಸಂಕೇತಗಳನ್ನು, ಚಿನ್ಹೆಗಳನ್ನು ಭಾಷೆಯಾಗಿ ಪರಿವರ್ತಿಸುವ, ಆ ಮೂಲಕ ಸಂದೇಶ ರವಾನಿಸುವ ಮಿದುಳಿನ ಕಾರ್ಯ ನಿಗೂಢ. ಇಂತಹ ರಹಸ್ಯಗಳನ್ನು ಮನದಟ್ಟು ಮಾಡುವ ಮೂಲಕ ಅದರ ನಿರಂತರ ಬಳಕೆಯ ಅಗತ್ಯ ಹಾಗೂ ಅನಿವಾರ್ಯತೆಯನ್ನೂ ತಿಳಿಸುತ್ತದೆ.

About the Author

ಬಿ.ವಿ. ಪಟ್ಟಾಭಿರಾಮ್

ಲೇಖಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ವೃತ್ತಿಯಿಂದ ಮನೋವೈದ್ಯರು. ತೆಲಂಗಾಣದ ಹೈದ್ರಾಬಾದಿನಲ್ಲಿ ವಾಸಿಸುತ್ತಿದ್ದಾರೆ. ಬದುಕಿನಲ್ಲಿ ಹತಾಶೆಗೊಳ್ಳದೇ ಧೈರ್ಯದಿಂದ ಎದುರಿಸುವಂತಹ ಪ್ರೇರಣಾತ್ಮಕ ಬರಹಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಪ್ರಶಾಂತಿ ಕಣನ್ಸಿಲಿಂಗ್ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ, ಸೇವೆ ಮಾಡುತ್ತಿದ್ದಾರೆ. ಕೃತಿಗಳು: ಪಾಠ ಹೇಳುವುದೂ ಒಂದು ಕಲೆ, ಸೂತ್ರಧಾರರು, ಕಷ್ಟಪಟ್ಟು ಕೆಲಸ ಮಾಡಬೇಡಿ; ಇಷ್ಟಪಟ್ಟು ಕೆಲಸ ಮಾಡಿ, ಟರ್ನಿಂಗ್ ಪಾಯಿಂಟ್, ಸರ್ಕಾರವೇ ಮಾತನಾಡು, ಗುಡ್ ಸ್ಟೂಡೆಂಟ್, ಜೀನಿಯಸ್ ನೀವೂ ಸಹ, ಲೀಡರ್‍ ಷಿಪ್, ಪಾಜಿಟೀವ್ ಥಿಂಕಿಂಗ್, ಕೌನ್ಸೆಲಿಂಗ್ ಸೀಕ್ರೆಟ್ಸ್, ಗೆಲುವು ನಿಮ್ಮದೇ, ...

READ MORE

Related Books