ಮಿರ್ಜಾ ಗಾಲಿಬ್

Author : ಇಮಾಮ್ ಸಾಹೇಬ್ ಹಡಗಲಿ

Pages 280

₹ 250.00




Year of Publication: 2019
Published by: ಬನ ಪ್ರಕಾಶನ
Address: ಶ್ರೀಮತಿ ಯಾಸ್ಕಿನ್ ಬಾನು, ಗರಡಿಮನೆ ಹತ್ತಿರ, ಕೆಳಗೇರಿ, ಕೊಟ್ಟೂರು - 583134
Phone: 7022506528

Synopsys

ಗಾಲಿಬ್, ಆಸ್ಥಾನದ ಪರಾಕುಗಳ ನಡುವಿನಿಂದ ಬಂದ ಕವಿಯಲ್ಲ, ದೆಹಲಿಯ ಗಲ್ಲಿಗಳಲ್ಲಿ ಅರಳಿದ ಹೂವು. ಅವನ ಒಡನಾಟ ದರ್ಬಾರಿಗಳಿಗಿಂತ ದೆಹಲಿಯ ಕೆಳಮಧ್ಯಮ ವರ್ಗದ ಜೊತೆಗೆಯೇ ಹೆಚ್ಚು.ದರ್ಬಾರಿನಲ್ಲಿ ಜೌಕ್ ನಂತರ ಎರಡನೆಯ ಸ್ಥಾನ ಒಲ್ಲೆ ಎಂದ ಈ ಮಹಾನ್ ಸ್ವಾಭಿಮಾನಿ. ದೆಹಲಿಯ ಜೂಜುಕೋರರ ಜೊತೆಯಲ್ಲಿ, ಫಕೀರರ ಜೊತೆಯಲ್ಲಿ, ಜನಸಾಮಾನ್ಯರ ಜೊತೆಯಲ್ಲಿ ಇನ್ನಿಲ್ಲದಷ್ಟು ಸರಳತೆಯಿಂದ ಬೆರೆತು ಹೋಗುತ್ತಿದ್ದ. ಇಂತಹ ಮಹಾನ್ ಕವಿಯ ಮನಸ್ಸು ಖಾಲಿತನದಿಂದ ತುಂಬುವುದೇ ಇಲ್ಲ. ನೋವಿನಲ್ಲೂ ನಿರಾಳತೆ ಮೂಡಿಸುವ ಅವನ ಗಜಲ್‌ನ ಕೆಲವು ಸಾಲುಗಳು ಹೀಗಿವೆ ’ಮುಷ್ಕಿಲೆ ಮುಝ್ ಪರ್ ಪಡಿ ಇತ್ನಿ ಕಿ ಆಸಾನ್ ಹೋಗಯ’ (ನನ್ನ ಮೇಲೆ ಕಷ್ಟಗಳ ಮಳೆ ಯಾವ ಪರಿ ಬಿತ್ತೆಂದರೆ ಕಡೆಗೆ ಅದು ಸುಲಭವೇ ಆಗಿ ಹೋಯ್ತು), ‘ಇಶ್ರತ್ ಎ ಖತ್ರಾ ಹೈ ದರಿಯಾ ಮೆ ಫನಾ ಹೋ ಜಾನಾ, ದರ್ದ್ ಕ ಹದ್ ಸೆ ಗುಜರ್ನಾ ಹೈ ದವಾ ಹೋ ಜಾನ’ (ನೀರಿನ ಹನಿಯ ಗೆಲುವು ನದಿಯಲ್ಲಿ ಒಂದಾಗಿ ಇಲ್ಲವಾಗುತ್ತಲೇ ಎಲ್ಲವೂ ಆದಾಗ, ನೋವಿಗೆ ನೋವೆ ಔಷಧಿ ಆಗುವುದು, ನೋವು ಇನ್ನೊಂದು ನೋವನ್ನು ಸೇರಿ ಮಿತಿಯನ್ನು ದಾಟಿದಾಗ). ಮಿರ್ಜಾರ ಗಜಲ್‌ಗಳನ್ನು ಕನ್ನಡಕ್ಕೆ ನವಿರಾಗಿ ಭಾವಾಂತರ ಮಾಡಿದ್ದಾರೆ ಇಮಾಮ್ ಸಾಹೇಬ್ ಹಡಗಲಿ.ಅಲ್ಲಾರಿ ಗಿರಿರಾಜ್‌ ಮುನ್ನುಡಿ ಬರೆದಿದ್ದಾರೆ. 

About the Author

ಇಮಾಮ್ ಸಾಹೇಬ್ ಹಡಗಲಿ
(18 April 1982)

ಕವಿ ಇಮಾಮ್ ಸಾಹೇಬ್ ಹಡಗಲಿ ಮೂಲತಃ ಬಳ್ಳಾರಿ ಜಿಲ್ಲೆಯ ಹಂಪಿ ಬಳಿಯ ಕನಕಗಿರಿಯವರು. ಕೊಟ್ಟೂರಿನಲ್ಲಿ ಪ್ರೌಢಶಿಕ್ಷಣ ಮುಗಿಸಿ, ಗುಲಬರ್ಗಾ ವಿವಿಯಿಂದ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಕನಕಗಿರಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಭಾಷಾ ಉಪನ್ಯಾಸಕರು. ಕೃತಿಗಳು: ಮಿರ್ಜಾ ಗಾಲಿಬ್‌ (ಕವಿತೆಗಳ ಅನುವಾದ), ಜಾನಪದ ಜತನ (ಲೇಖನಗಳ ಸಂಗ್ರಹ)  ...

READ MORE

Related Books