ಮಿರ್ಜಾ ಗಾಲಿಬ್

Author : ದಸ್ತಗೀರ್‌ಸಾಬ್‍ ದಿನ್ನಿ



Year of Publication: 2022
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113
Phone: 9840354507

Synopsys

ಲೇಖಕ ದಸ್ತಾಗೀರ್ ಸಾಬ್ ದಿನ್ನಿ ಅವರು ಸಂಪಾದಿಸಿರುವ ಕೃತಿ ‘ಮಿರ್ಜಾ ಗಾಲಿಬ್’ . ಕರುಳ ಬೆಂಕಿಯ ಪತಂಗ ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ವಿರಹ,ವಿಯೋಗ,ವಿದ್ರೋಹ,ಪ್ರೇಮ, ವ್ಯಾಮೋಹ ,ವಿಷಣ್ಣತೆ,ತೀವ್ರತೊಳಲಾಟ, ಹೂ ಪುಳಕ, ಬದುಕಿನ ಚೆಲುವುಗಳನ್ನು ಗಜಲುಗಳ ಮೂಲಕ ಕಟ್ಟಿ ಕೊಟ್ಟ ಮಿರ್ಜಾ ಗಾಲಿಬ್ ಉರ್ದು ಕಾವ್ಯ ಲೋಕದ ಮೇರು ಪ್ರತಿಭೆ.ಅವರ ಗಜಲುಗಳ ಉದ್ದಕ್ಕೂ ಸೃಜನಶೀಲತೆಯ ಸೂಕ್ಷ್ಮ ತಂತುಗಳಿವೆ.ಮರಕ್ಕೆ ಎಲೆಗಳು ಮೂಡಿದ ಹಾಗೆ ರೂಪಕ , ಪ್ರತಿಮೆಗಳು ಸಹಜವಾಗಿ ಇಡಿಕಿರಿದಿವೆ. ಬದುಕಿನುದ್ದಕ್ಕೂ ಗಜಲನ್ನೇ ಧೇನಿಸಿದ ಮಹತ್ವಾಕಾಂಕ್ಷೆಯ ಕವಿ. ಅವನ ಗಜಲುಗಳ ಕಲರವವನ್ನು ಕೇಳುತಿದ್ದರೆ ನಮ್ಮ ನೋವುಗಳನ್ನು ಹಗೂರವಾಗಿ ಮರೆಯಬಹುದು.ಬದುಕಿನಲ್ಲಿ ಪಟ್ಟ ಪಾಡನ್ನೇ ಹಾಡಾಗಿಸಿ ಎದೆಯಿಂದ ಎದೆಗೆ ದಾಟಿಸಿದ ಕವಿ ಗಾಲಿಬ್. ಸದಾ ಹಾಸ್ಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದ ಗಾಲಿಬನ ಪ್ರತಿ ಮಾತು ಕಾವ್ಯಾತ್ಮಕವಾಗಿತ್ತು . ಈ ಕೃತಿಯಲ್ಲಿ ಫಕೀರ್‍ ಮುಹಮ್ಮದ್ ಕಟ್ಪಾಡಿ, ರವಿ ಬೆಳಗೆರೆ ಸೇರಿ 25 ಜನ ಬರೆಹಗಾರರು ಅವನ ಖಯಾಲಿ, ವಿಶಿಷ್ಟ ಬದುಕು , ಸಾಹಿತ್ಯದ ವಿಭಿನ್ನ ಚಹರೆಗಳ ಮಹತ್ವ ಮತ್ತು ಒಂದಿಷ್ಟು ಅನುವಾದಿತ ಗಜಲುಗಳನ್ನು ಕಟ್ಟಿ ಕೊಟ್ಪಿದ್ದಾರೆ.ಇದಕ್ಕೆ ಸೊಗಸಾದ ಮುಖಪುಟವನ್ನು ಹಿರಿಯ ಕಲಾವಿದರಾದ ಸುಧಾಕರ ದರ್ಬೆಯವರು ಮಾಡಿದ್ದಾರೆ.

About the Author

ದಸ್ತಗೀರ್‌ಸಾಬ್‍ ದಿನ್ನಿ
(01 June 1971)

ರಾಯಚೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕವಿ-ಲೇಖಕ ದಸ್ತಗೀರ್‌ಸಾಬ ದಿನ್ನಿ, ತಾಳಕೇರಿ ಬಸವರಾಜ, ಬಿಸಿಲ ಹೂ, ಎಲ್ಲಾ ಕಾಲದ ಬೆಳಕು, ಆದಯ್ಯ, ಹೊಸಗನ್ನಡ ಕಥಾಸಂಗ್ರಹ, ಹಗೇವು, ದಿನ್ನಿ ತಾಳಪಲ್ಲಿ ವೆಂಕಯ್ಯ, ಸಾಹಿತ್ಯ ಸಲ್ಲಾಪ, ಜಾಗತೀಕರಣ ಮತ್ತು ಸಂಸ್ಕೃತಿ ಅವರ ಪ್ರಕಟಿತ ಕೃತಿಗಳು. ರಾಯಚೂರು ತಾಲೂಕಿನ ದಿನ್ನಿ ಗ್ರಾಮದಲ್ಲಿ ಜನನ.ಕವನ , ಗಜಲ್ , ಲೇಖನ, ವಿಮರ್ಶೆ ಬರೆದಿದ್ದಾರೆ. ...

READ MORE

Related Books