ಮಿಷನರಿಗಳ ಕನ್ನಡ ವೃತ್ತಾಂತವು

Author : ಎ.ವಿ. ನಾವಡ

Pages 244

₹ 360.00




Published by: ಶೋಧನ ಪ್ರಕಾಶನ
Address: # 301, ಕಲ್ಪನಾ ರಸ್ತೆ, ವಾಸ್‌ ಲೇನ್‌, ಮಂಗಳೂರು– 575002

Synopsys

ನಮ್ಮ ಸಾಹಿತ್ಯ, ಸಂಸ್ಕೃತಿಯನ್ನು ಶೋಧಿಸುವ, ದಾಖಲಿಸುವ ಕಾರ್ಯದಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರ ದೊಡ್ಡದು.  ಕನ್ನಡ ನಾಡಿನಲ್ಲಿ ಕ್ರೈಸ್ತ ಮಿಷನರಿಗಳು, ಅದರ ಪ್ರತಿನಿಧಿಗಳಾಗಿ ಬಂದ ಹಲವು ವಿದ್ವಾಂಸರು ಮಾಡಿದ ಗಣನೀಯ ಕೆಲಸವನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಕ್ರೈಸ್ತ ಮಿಷನರಿಗಳು, ಪ್ರಾದೇಶಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಲ್ಲಿನ ಜನರ ಅಗತ್ಯತೆಗಳನ್ನು ಅರಿತುಕೊಂಡು ನಂತರ ಧರ್ಮಪ್ರಚಾರ ಮಾಡಿದರು. ಅವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಶಾಲೆಗಳನ್ನು ತೆರೆದರು. ಹಲವು  ಕ್ರೈಸ್ತ ವಿದ್ವಾಂಸರ ಕನ್ನಡದ ಕೆಲಸಗಳು ಮತ್ತು ಅದರಿಂದ ಕನ್ನಡಕ್ಕೆ ಉಂಟಾದ ಉಪಯೋಗಗಳನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಎ.ವಿ. ನಾವಡ
(28 April 1946)

ಎ.ವಿ. ನಾವಡ ಅವರು 1946 ಏಪ್ರಿಲ್ 28ರಲ್ಲಿ ಮಂಗಳೂರು ಸಮೀಪದ ಕೋಟೆಕಾರು ಎಂಬಲ್ಲಿ ಜನಿಸಿದರು. ತಂದೆ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ, ತಾಯಿ ಪಾರ್ವತಿ. ಮಂಗಳೂರಿನ ಸಂತ ಎಲೋಷಿಯಸ್ ಕಾಲೇಜಿನಲ್ಲಿ ಪದವಿಯನ್ನೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನೂ ಪಡೆದರು. ಕುಂದಾಪುರದ ಭಂಡಾರ್‌ಕರ್ಸ್‌ ಕಾಲೇಜಿನಲ್ಲಿ 1970ರಿಂದ-94ರವರೆಗೆ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ 24 ವರ್ಷ ಸೇವೆ ಸಲ್ಲಿಸಿದರು. 1994ರಿಂದ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಪುರಂದರದಾಸ ಅಧ್ಯಯನ ಪೀಠದ ಅಧ್ಯಕ್ಷರಾಗಿ, ಉಡುಪಿಯ ಎಂ.ಜಿ.ಎಂ. ಕಾಲೇಜಿನ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಸಂಶೋಧಕರಾಗಿ, ಉಡುಪಿಯ ಗೋವಿಂದಪೈ ಸಂಶೋಧನ ಕೇಂದ್ರದ ...

READ MORE

Related Books