ಮಿಸ್ಸಿಂಗ್ ಲಿಂಕ್

Author : ಕೆ.ಪಿ. ಪೂರ್ಣಚಂದ್ರ ತೇಜಸ್ವಿ

Pages 132

₹ 90.00




Year of Publication: 2012
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570 009
Phone: 0821-2545774, 9448203730

Synopsys

ಮಾನವ ಶಾಸ್ತ್ರವನ್ನು ವಸ್ತುವಾಗುಳ್ಳ ಕೃತಿ ಮಿಸ್ಸಿಂಗ್ ಲಿಂಕ್ (1992). ಸುಮಾರು ಹದಿನೆಂಟು ಅಧ್ಯಾಯಗಳಲ್ಲಿ ನಿರೂಪಿಸುತ್ತದೆ. ಮಾನವನ ವಿಕಾಸದ ವಿವಿಧ ಹೆಜ್ಜೆಗಳನ್ನು ಪತ್ತೇದಾರಿ ಕಾದಂಬರಿಯ ಹಾಗೆ ಗುರುತಿಸುತ್ತದೆ. 'ಮಿಸ್ಸಿಂಗ್ ಲಿಂಕ್' ಹೆಸರೇ ಹೇಳುವಂತೆ, ವಿಕಾಸದ ಸರಪಳಿಯ ಕಳೆದುಹೋದ ಕೊಂಡಿಗಳ ಹುಡುಕಾಟ. ಈ ನಿಟ್ಟಿನಲ್ಲಿ ಕ್ಯಾಂಪ್ ಬೆಲ್ ಬರ್ನಾಡ್, ಚಾರ್ಲ್ಸ್ ಡಾರ್ವಿನ್, ಲೂಯಿಸ್ ಲೀಕಿ, ಗೂಡಾಲ್ ಜೇನ್ ರಂಥ ವಿಜ್ಞಾನಿಗಳ ವಿಚಾರಗಳನ್ನು ಬಳಸಿಕೊಂಡಿದೆ. ಈ ಕೃತಿಗೆ 1994ರ ಶಿವರಾಮ ಕಾರಂತ ಪ್ರಶಸ್ತಿ ಸಂದಿದೆ.

About the Author

ಕೆ.ಪಿ. ಪೂರ್ಣಚಂದ್ರ ತೇಜಸ್ವಿ
(08 September 1938 - 05 April 2007)

ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ  ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ತೇಜಸ್ವಿ ...

READ MORE

Related Books