ಮಿಥ್ಯೆಯ ಬೆನ್ನಟ್ಟಿ

Author : ಎಸ್. ವೆಂಕಟೇಶ

Pages 128

₹ 125.00




Year of Publication: 2020
Published by: ಗೀತಾಂಜಲಿ ಪಬ್ಲಿಕೇಷನ್ಸ್
Address: ನಂ. 64, 2 `‘ಡಿ’ ಕ್ರಾಸ್, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು-72
Phone: 9740066842

Synopsys

ಲೇಖಕ ಎಸ್. ವೆಂಕಟೇಶ ಅವರು ಬರೆದ ಕೃತಿ-ಮಿಥ್ಯೆಯ ಬೆನ್ನಟ್ಟಿ. ಅಪಸ್ಮಾರ ರೋಗ ಹಾಗೂ ರೋಗಿಗಳೊಂದಿಗಿನ ತಮ್ಮ ಅನುಭವಗಳನ್ನು ದಾಖಲಿಸಿದ ಕೃತಿ ಇದು. ಸ್ಕಿಜೋಫ್ರೇನಿಯಾ, ಪಾರ್ಕಿನ್ ಸನ್ ಡಿಸೀಸ್, ಖಿನ್ನತೆ- ಇಂತಹ ಮನೋರೋಗಗಳ ಕುರಿತು ಸಮಾಜದಲ್ಲಿರುವ ತಪ್ಪು ತಿಳಿವಳಿಕೆ ಹೋಗಲಾಡಿಸಲು ಲೇಖಕರು ಶ್ರಮಿಸುತ್ತಿರುವುದರ ಭಾಗವಾಗಿ ಈ ಕೃತಿ ರಚನೆಗೊಂಡಿದೆ. 

ಅಪಸ್ಮಾರ ರೋಗದ ಮಾಹಿತಿ, ರೋಗಿಗಳ ಅನುಭವ ಹಾಗೂ ಈ ರೋಗ ಮತ್ತು ರೋಗಿಯ ಕುರಿತಾದ ಸಮಾಜದ ಒಟ್ಟು ಗ್ರಹಿಕೆ -ಈ ಎಲ್ಲ ಅಂಶಗಳನ್ನು ಒಳಗೊಂಡಿದ್ದು, ಓದುಗರಿಗೆ ಅಪಸ್ಮಾರ ರೋಗ ಕುರಿತು ವೈಜ್ಞಾನಿಕವಾಗಿ ಉತ್ತಮ ಮಾಹಿತಿ ನೀಡುತ್ತದೆ. 

ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ಮಾಜಿ ನಿರ್ದೇಶಕರು ಹಾಗೂ ವಿಶ್ರಾಂತ ಉಪಕುಲಪತಿಗಳಾದ ಡಾ. ಡಿ. ನಾಗರಾಜ ಹಾಗೂ ಡಾ. ಪಿ. ಸತೀಶ ಚಂದ್ರ ಅವರು ಕೃತಿಗೆ ಬೆನ್ನುಡಿ ಬರೆದು ‘ ಅನೇಕ ವೈದ್ಯರು ಸಾಮಾನ್ಯರ ಅಜ್ಞಾನ ಹೋಗಲಾಡಿಸಲು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಆದರೆ, ಅವುಗಳಲ್ಲಿ ಬಹಳಷ್ಟು ಪಠ್ಯಕ್ರಮದ ಕನ್ನಡ ಅನುವಾದಗಳೇ ಆಗಿರುತ್ತವೆ. ಜನರ ಮನಸ್ಸನ್ನು ಮುಟ್ಟಲು ವಿಫಲವಾಗುತ್ತವೆ.  ಅವು ವೈಜ್ಞಾನಿಕ ಪ್ರಬಂಧದಿಂದ ಹೊರಬರುವುದೇ ಇಲ್ಲ. ಆದರೆ, ಎಸ್. ವೆಂಕಟೇಶ ಅವರು ಅಪಸ್ಮಾರ ಕುರಿತು ಪುರಾಣ, ಕಲ್ಪನೆ, ನೈಜ ಘಟನೆಗಳ ಮೂಲಕ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಅವರು ಜನಸಾಮಾನ್ಯರನ್ನು ಮುಟ್ಟಲು ಸಮರ್ಥರಾಗಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

About the Author

ಎಸ್. ವೆಂಕಟೇಶ

ಲೇಖಕ ಎಸ್. ವೆಂಕಟೇಶ ಅವರು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರು. ಪ್ರವೃತ್ತಿಯಲ್ಲಿ ಅವರು ನಟ, ನಾಟಕಕಾರ, ಸಾಹಿತಿ, ನಿರ್ದೇಶಕರು. ಇಂಡಿಯನ್ ಎಪಿಲೆಪ್ಸಿ ಅಸೋಷಿಯೇಶನ್ ಸ್ಥಾಪಿಸಿ, ಜನಸಮೂಹದಲ್ಲಿ ಅಪಸ್ಮಾರ (ಮೂರ್ಚೆ ರೋಗ) ಕುರಿತು ರಂಗನಾಟಕ ಹಾಗೂ ಬೀದಿನಾಟಕಗಳ ಮೂಲಕ ಶ್ರಮಿಸುತ್ತಿದ್ದಾರೆ. ಸ್ಕಿಜೊಫ್ರೇನಿಯಾ, ಪಾರ್ಕಿನ್ ಸನ್ ಡಿಸೀಸ್, ಪ್ಯಾರಾಲೆಸಿಸ್ ಸ್ಟ್ರೋಕ್, ಖಿನ್ನತೆ ಹಾಗೂ ಲೈಂಗಿಕ ತಪ್ಪು ತಿಳಿವಳಿಕೆ ವಿರುದ್ಧ ಜಾಗೃತಿ ಮೂಡಿಸಲು ನಾಟಕಗಳನ್ನು ರಚಿಸಿ ಅಭಿನಯಿಸಿದ್ದಾರೆ. ಕೃತಿಗಳು: ಮನೋಲೋಕದ ಮಧ್ಯದೊಳಗೆ (ವೃತ್ತಿಯ ಹಾಗೂ ನೈಜ ಘಟನೆ ಆಧರಿತ ಅನುಭವಗಳ ಸಂಕಲನ), ...

READ MORE

Related Books