ಮೂಕಹಕ್ಕಿಯ ಹಾಡು

Author : ಎನ್. ಜಗದೀಶ್ ಕೊಪ್ಪ

Pages 124

₹ 110.00




Year of Publication: 2017
Published by: ಮನೋಹರ ಗ್ರಂಥ ಮಾಲಾ

Synopsys

ಲೇಖಕ ಡಾ.ಎನ್. ಜಗದೀಶ್ ಕೊಪ್ಪ ಅವರ ಅನುವಾದಿತ ಕೃತಿ ‘ಮೂಕಹಕ್ಕಿಯ ಹಾಡು’. ಅದೊಂದು ಗ್ರಾಮ, ಹಿಂದುಳಿದ ವರ್ಗದ ಪುಟ್ಟಕುಟುಂಬ ತಂದೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ. ಅನಕ್ಷರಸ್ಥೆ ಮಗಳು, ವಿವಾಹ ವಿಚ್ಚೇದಿತೆ ಕೂಡ. ಧರ್ಮದ ಬೋಧನೆಗಳನ್ನು ಬಾಯಿಪಾಠದಲ್ಲೆ ತಾನು ಕಲಿತಿದ್ದು, ಅದನ್ನೇ ಹಳ್ಳಿಯ ಮಕ್ಕಳಿಗೆ ಕಲಿಸುತ್ತಾ ಜೀವನ ಸಾಗಿಸುತ್ತಾ ಇದ್ದಳು. ಅವಳ ಹನ್ನೆರಡು ವಯಸ್ಸಿನ ಸೋದರ ಒಂದು ದಿನ ಹೊಲದ ಬದಿಯಲ್ಲಿ ಆಡುವಾಗ ಕಬ್ಬಿನ ತೋಟಹೊಕ್ಕ, ಅದು ಅವರೂರಿನ ಮುಖಂಡನದಾಗಿತ್ತು. ಧರ್ಮದಲ್ಲಿ ಅವರು ಮೇಲ್ವರ್ಗದ ಮಂದಿ. ಕಬ್ಬು ತೆಗೆದುಕೊಂಡು ಬರುವಾಗ ಅವನಿಗಿಂತ ಹಿರಿಯ ವಯಸ್ಸಿನ ಮುಖಂಡನ ಮಗಳು ಸಿಕ್ಕಳು, "ಹೇಗಿದ್ದೀರಾ ಅಕ್ಕ" ಎಂದಷ್ಟು ಯೋಗಕ್ಷೇಮದ ಮಾತಾಯಿತು ಅಷ್ಟೆ, ಅದು ಮುಖಂಡನ ಕಿವಿಗೆ ಬಿತ್ತು. ನಡೆದೇ ಹೋಯಿತು ದುರಂತ!! ಸೋದರ ಪೋಲೀಸರ ಬಂಧಿಯಾದ. ಕ್ಷಮಾಯಾಚನೆಗೆ ಅಕ್ಕ ಮುಖಂಡನ ಮನೆಗೆ ಹೋಗ ಬೇಕಾಯಿತು. ಅಲ್ಲಿ ನಡೆದ ಮೇಲ್ವರ್ಗದ ಪಂಚಾಯತಿ, ಆಕೆಯ ಮೇಲೆ ಮುಖಂಡನ ಮನೆಯವರು ಅತ್ಯಾಚಾರ ಮಾಡಬೇಕೆಂಬ ತೀರ್ಪಿತ್ತಿತು. ಮುಖಂಡನ ಮನೆಯ ಗಂಡಸರು ನಡೆಸೇ ಬಿಟ್ಟರು ಘನಘೋರ ತೀರ್ಪಿನ ಪಾಲನೆ‌. ಕರಾಳರಾತ್ರಿಯಲ್ಲಿ ಆತ್ಮಸ್ಥೈರ್ಯಕುಗ್ಗಿದ ಸೋದರಿ ಮನೆತಲುಪಿದ್ದೇ ಸಾಕಾಯಿತು. ತಮ್ಮನ ಬಿಡುಗಡೆಗೆ ಠಾಣೆಗೆ ಹೋದಾಗ ಅತ್ಯಾಚಾರದ ಬಗ್ಗೆ ಸೊಲ್ಲೆತ್ತಬಾರದೆಂದು ಬೆದರಿಸಲಾಯಿತು. ಆದರೆ ಅದನ್ನು ನಿರಾಕರಿಸಿ ಧೈರ್ಯದಿಂದ ಎಲ್ಲಾ ಹೇಳಿದಳು. ಅನಕ್ಷರಸ್ಥೆಯಾದ ಅವಳ ದನಿಯಡಗಿಸುವ ಯತ್ನಗಳು ನಿರಂಕುಶ ವ್ಯವಸ್ಥೆಯಲ್ಲಿ ನಿರಂತರವಾಗಿ ಶುರುವಾಯಿತು...ಇಷ್ಟೆಲ್ಲಾ ನಡೆದಿದ್ದು ಯಾವುದೋ ಕಾಲದಲ್ಲಿ ಅಲ್ಲ 2002 ರಲ್ಲಿ!! ಧರ್ಮಾಧಾರಿತವಾಗಿ ವಿಭಜನೆಯಾದ ಪಾಕಿಸ್ತಾನದಲ್ಲಿ..ಆಕೆ ಗುಜಾರ್ ವರ್ಗದ "ಮುಕ್ತರ್ ಮಾಯಿ"..ಮುಂದೆ ಏನಾಯಿತು ಎಂಬ ಕುತೂಹಲವನ್ನು ಕೃತಿಯನ್ನು ಓದಿಯೇ ತಿಳಿಯಬೇಕಿದೆ.

About the Author

ಎನ್. ಜಗದೀಶ್ ಕೊಪ್ಪ

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. 1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ...

READ MORE

Related Books