ಮೋದಾಳಿ

Author : ಪಿ. ಚಂದ್ರಿಕಾ

Pages 88

₹ 75.00




Year of Publication: 2019
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು
Phone: 9448804905

Synopsys

ಕವಯತ್ರಿ- ಲೇಖಕಿ ಪಿ. ಚಂದ್ರಿಕಾ ಅವರ ಮೊದಲ ನಾಟಕ   ’ಮೋದಾಳಿ’. ಒಂದೆಡೆ ಸರಕಿನಂತೆ ತೋಳ್ಬಲದ ವಶವಾಗುವ , ಇನ್ನೊಂದೆಡೆ ಮಾಲೆ ಹಾಕಿದವರ ಸೊತ್ತಾಗುವ, ತುತ್ತಾಗುವ ಹೆಣ್ಣಿನ ಸ್ಥಿತಿಗತಿ ಪ್ರಸ್ತುತ ಸಮಾಜದಲ್ಲಿರುವಂತದ್ದು. ಪ್ರೀತಿಯ ಪಸೆಯೇ ಇಲ್ಲದ ತನ್ನ ಬದುಕಿನ ಆಚೆಗೆ ಆಕೆ ಸಹಜ ಪ್ರೀತಿಗಾಗಿ ಒಮ್ಮೆ ಹೆಣಗಲೂ ಕೂಡ ಹಕ್ಕಿಲ್ಲದವಳಾಗುತ್ತಾಳೆ. ಗಂಡಿನದು ಸ್ವ ಇಚ್ಛೆಯಾದರೆ, ಹೆಣ್ಣಿನದು ಸ್ವೇಚ್ಛೆಯಾಗಿ ಪರಿಗಣಿತವಾಗುತ್ತದೆ. ಅವಳ ವ್ಯಕ್ತಿತ್ವದ ಕಡೆ ಗಮನವೇ ಇಲ್ಲದ ವಿವರಣೆ, ದಂಡನೆ, ವಿಚಾರಣೆ, ಇತ್ಯಾದಿಗಳಲ್ಲಿ ಅದು ಕೊನೆಗೊಳ್ಳುತ್ತದೆ. ಮೋದಾಳಿ, ಕುಡುಕ, ಸ್ನೇಹಿತೆಯರು, ಸುನಂದ, ಚಂದ್ರಮತಿ, ಸೇವಕಿಯರು, ಸೂರ್ಯಮಿತ್ರ, ಭಟ1, ಭಟ2, ಮುದುಕಿ, ಕುರಿಡಿ, ಬೋದ, ನಂದ, ದತ್ತ, ನಾಗಶೂರ, ಮೇಳದವರು4  ಇವಿಷ್ಟು ಕತೆಗಳನ್ನು ಈ ಕೃತಿಯು ಒಳಗೊಂಡಿದೆ. 

ಹಳಗನ್ನಡ ಗದ್ಯ ಕೃತಿ ವಡ್ಡಾರಾಧನೆಯಲ್ಲಿ ಬರುವ  ಒಂದು ಕತೆಯ ಎಳೆಯನ್ನು ಗ್ರಹಿಸಿ ಈ ’ಮೋದಾಳಿ’ ನಾಟಕ ರಚಿತವಾಗಿದೆ. ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ಮಲ್ಲಿಕಾ ದತ್ತಿ  ಪ್ರಶಸ್ತಿ ದೊರೆತಿದೆ.

About the Author

ಪಿ. ಚಂದ್ರಿಕಾ

ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಲ್ಲಿ ಜನಿಸಿದ ಚಂದ್ರಿಕಾ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗವನ್ನು ನಡೆಸಿದರು. ‘ಕನ್ನಡ ಸಾಹಿತ್ಯ ವಿಮರ್ಶೆಯ ಐತಿಹಾಸಿಕ ಅಧ್ಯಯನ’ ಇವರ ಪಿಎಚ್. ಡಿ ಪ್ರಬಂಧ. ಹಲವಾರು ಕಿರುತೆರೆ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಥಾ ವಿಸ್ತರಣೆ, ಸಂಭಾಷಣೆ, ಕಿರುಚಿತ್ರಗಳ ನಿರ್ದೇಶನ, ನಿರ್ಮಾಣ, ನಿರ್ವಹಣೆ, ರಾಜ್ಯಮಟ್ಟದ ವಿಚಾರ ಸಂಕಿರಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಕವಿತಾ ವಾಚನ, ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಹ ಸಂಪಾದಕಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆಯಾಗಿ ಕೆಲಸ ನಿರ್ವಹಣೆ ಮಾಡಿದ ಅನುಭವ ಲೇಖಕಿಯದು. ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ, ಸೂರ್ಯಗಂಧೀ ...

READ MORE

Reviews

ಒಂದೆಡೆ ಸರಕಿನಂತೆ ತೋಳ್ಬಲದ ವಶವಾಗುವ, ಇನ್ನೊಂದೆಡೆ ಮಾಲೆ ಹಾಕಿದವರ ಸೊತ್ತಾಗುವ ತೊತ್ತಾಗುವ ಹೆಣ್ಣಿನ ಸ್ಥಿತಿಗತಿ ಇವತ್ತು ನಿನ್ನೆಯದಲ್ಲ ಪ್ರೀತಿಯ ಪಸೆಯೇ ಇಲ್ಲದ ತನ್ನ ಬದುಕಿನ ಆಚೆಗೆ ಆಕೆ ಸಹಜ ಪ್ರೀತಿಗಾಗಿ ಒಮ್ಮೆ ಹಣುಕಿ ಬರಲೂ ಕೂಡ ಹಕ್ಕಿಲ್ಲದವಳು. ಏನಿದ್ದರೂ ಗಂಡಿನದು ಸ್ವ-ಇಚ್ಚೆಯಾದರೆ ಹೆಣ್ಣಿನದು ಸ್ವೇಚ್ಛೆಯಾಗಿ ಪರಿಗಣಿತವಾಗುತ್ತದೆ. ಅವಳ ವ್ಯಕ್ತಿತ್ವದ ಘನತೆಯ ಕಡೆ ಲಕ್ಷ್ಯವೇ ಇಲ್ಲದೆ ವಿಚಾರಣೆ, ದಂಡನೆ, ತಲೆದಂಡ ಇತ್ಯಾದಿಗಳಲ್ಲಿ ಅದು ಕೊನೆಗೊಳ್ಳುತ್ತದೆ. ವಡ್ಢಾರಾಧನೆಯಲ್ಲಿ ಬರುವ ಇಂಥ ಒಂದು ಕತೆಯ ಎಳೆಯನ್ನು ಹಿಡಿದು ಪಿ. ಚಂದ್ರಿಕಾ ಪ್ರಸ್ತುತ ತಮ್ಮ 'ಮೊದಾಳಿ' ನಾಟಕದಲ್ಲಿ ಭೂತ ವರ್ತಮಾನಗಳನ್ನು ಹೊಲಿಗೆ ಕಾಣದಂತಹ ಕೌಶಲದಲ್ಲಿ ಜೋಡಿಸಿ ವಿಸ್ತರಿಸಿದ್ದಾರೆ. ಇವತ್ತಿಗೂ 'ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ' ಮಾತ್ರವಲ್ಲ ಇದಕ್ಕೂ ಮೀರಿದ ಭೀಕರ ಸುದ್ದಿಗಳನ್ನು ಮುಖಪುಟದಲ್ಲಿ ಓದಬೇಕಾದ ಹಣೆಬರಹದ ಪ್ರಪಂಚವಿದು. ನಾಟಕ ಓದಿ ಮುಗಿಯುತ್ತಲೂ ಈ ಜಗತ್ತು ಬದಲಾಗಿದೆಯೇ? ಅಂತೆಯೇಇದೆಯೇ? ಬದಲಾಗಿದ್ದರೆ ಅದು ಎಲ್ಲಿ ಯಾರ ಪಾ ಲಿಗೆ?ಇತ್ಯಾದಿ ಅನೇಕ ಪ್ರಶ್ನೆಗಳಲ್ಲಿ ಮನಸ್ಸು ಒಳಮುಖವಾಗುತ್ತದೆ. -ವೈದೇಹಿ (ಬೆನ್ನುಡಿ)

 

Related Books