ಮೊದಲ ಮೆಟ್ಟಿಲು

Author : ಬಿ.ಎ. ವಿವೇಕ ರೈ

Pages 364

₹ 200.00




Year of Publication: 2017
Published by: ಆಕೃತಿ ಪುಸ್ತಕ
Address: # 31/1, ನೆಲಮಹಡಿ, 12ನೇ ಮುಖ್ಯರಸ್ತೆ, ಗಾಯತ್ರಿನಗರ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010
Phone: 098866 94580

Synopsys

ಖ್ಯಾತ ಸಾಹಿತಿ ಡಾ. ಬಿ.ಎ. ವಿವೇಕ ರೈ ಅವರ ಕೃತಿ-ಮೊದಲ ಮೆಟ್ಟಿಲು. ಸುಮಾರು 4-5 ದಶಕಗಳಲ್ಲಿ ಲೇಖಕರು ಬರೆದ (ಇಂಗ್ಲಿಷ್‍ ಕೃತಿಗಳನ್ನು ಹೊರತುಪಡಿಸಿ) ಕನ್ನಡ-ತುಳು ಭಾಷೆಗಳಲ್ಲಿ ರಚಿಸಿದ 17 ವೈವಿಧ್ಯಪೂರ್ಣ ಕೃತಿಗಳ ಪ್ರಸ್ತಾವನೆಗಳು, ಹಿರಿಯರ-ಗೆಳೆಯರ-ಶಿಷ್ಯರ ಕೃತಿಗಳಿಗೆ ಬರೆದಿರುವ 44 ಮುನ್ನುಡಿಗಳು ಮತ್ತು ಅವರು ಸಂಪಾದಿಸಿರುವ 15 ಕೃತಿಗಳಿಗೆ ಬರೆದಿರುವ ಸಂಪಾದಕೀಯಗಳು, ಈ ಎಲ್ಲವನ್ನೂ ಒಂದೆಡೆ ಕಟ್ಟಿಕೊಡುವ ಕೃತಿ ಇದು. ವಿವೇಕ ರೈ ಅವರ ಒಟ್ಟು ಚಿಂತನೆಯ ಸ್ವರೂಪವನ್ನು ಇಲ್ಲಿ ಕಾಣಬಹುದು.

About the Author

ಬಿ.ಎ. ವಿವೇಕ ರೈ
(08 December 1946)

ಡಾ. ಬಿ.ಎ.ವಿವೇಕ ರೈ ಸಂಸ್ಕೃತಿ ಚಿಂತಕರು. ಕನ್ನಡ-ತುಳು ಭಾಷೆಯ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು. ಅವರ ಹುಟ್ಟೂರು ಪುತ್ತೂರು ತಾಲೂಕಿನ 'ಪುಣಚಾ'. (ಜನನ: 1946ರ ಡಿಸೆಂಬರ್ 8ರಂದು), ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ, ಮತ್ತೂರಿನಲ್ಲಿ ಪಿಯುಸಿ, ಬಿಎಸ್ಸಿ ವ್ಯಾಸಂಗ, ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರಕೇಂದ್ರ ದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.  ಕನ್ನಡ ಮತ್ತು ತುಳು ಭಾಷೆಯ ಬಗ್ಗೆ ಅಪಾರ ಒಲವು-ಪಾಂಡಿತ್ಯ ಉಳ್ಳವರು. ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸಿದ ವಿದ್ವಾಂಸರು. ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ...

READ MORE

Related Books