ಮೊದಲ ಪತ್ನಿಯ ದುಗುಡ

Author : ಭಾರತಿ ಹೆಗಡೆ

Pages 164

₹ 130.00




Year of Publication: 2019
Published by: ಅಂಬಾರಿ
Address: ಮೈಸೂರು

Synopsys

ಪತ್ರಕರ್ತೆ ಭಾರತಿ ಹೆಗಡೆ ಅವರ ’ಮೊದಲ ಪತ್ನಿಯ ದುಗುಡ’ ಪುಸ್ತಕವು ೩೮ ಬರೆಹಗಳನ್ನು ಒಳಗೊಂಡಿರುವ ಸಂಕಲನ. ಭಾರತೀಯ ಸಂಸ್ಕೃತಿಯ ಭಾಗ ಅಥವಾ ಮುಂದುವರಿಕೆ ಆಗಿರುವ ಭಾರತೀಯ ಚಲನಚಿತ್ರಗಳು ಮಾತ್ರವಲ್ಲದೆ ಸಿನಿಮಾ ರಂಗದ ’ಮಹತ್ವ’ ಸಿನಿಮಾಗಳನ್ನು ಸ್ತ್ರೀಪರ ನೋಟಕ್ರಮದಿಂದ ನೋಡುವ ಒಂದು ವಿಶಿಷ್ಟ ವಿಧಾನವನ್ನು ಭಾರತಿಯವರು ಈ ಸಂಕಲನದಲ್ಲಿ ಮಾಡಿದ್ದಾರೆ.

ಪುರುಷ ಕೇಂದ್ರಿತ ಆಲೋಚನಾ ಕ್ರಮವು ಹೇಗೆ ತನ್ನದೇ ಯಾಜಮಾನ್ಯವನ್ನು ಚಿತ್ರಿಸುತ್ತ, ದಾಖಲಿಸುತ್ತ, ಅದನ್ನೇ ಖಚಿತ ನೆಲ-ನೆಲೆಯಾಗಿಸುವ ಪರಿಯನ್ನು ವಿವರಿಸುವ-ನೋಡುವ ಭಾರತಿ ಅವರ ಬರವಣಿಗೆಯು ಅದೇ ಕಾರಣಕ್ಕೆ ಪ್ರಿಯವಾಗುತ್ತದೆ. ’ಅಹಲ್ಯ’ದಂತಹ ಬೆಂಗಾಲಿ ಕಿರುಚಿತ್ರದ ಬಗೆಗಿನ ಅವರ ವಿಶ್ಲೇಷಣೆಯು ಭಿನ್ನವಾಗಿದೆ-ಸೊಗಸಾಗಿದೆ.

ಸಿನಿಮಾಗಳ ಕುರಿತು ಬರೆಯುವುದು ಎಂದರೆ ಕತೆಯ ಸಂಕ್ಷಿಪ್ತ ಚಿತ್ರಣ ನೀಡುವುದಕ್ಕೆ ಸೀಮಿತವಾದ ಬರಹಗಳೇ ಹೆಚ್ಚು. ಇದು ಕನ್ನಡದ ಸಿನಿಮಾ ಬರವಣಿಗೆಯೂ ಕೇವಲ ಸುದ್ದಿ ’ಮಾಧ್ಯಮ’ ಕೇಂದ್ರಿತವಾಗಿರುವ ಕಾರಣ ಉಂಟಾಗಿರುವ ’ಮಿತಿ’. ಬಹುತೇಕ ಸಿನಿಮಾ ಕುರಿತು ಬರೆಯುವ ಲೇಖಕರು ಪತ್ರಕರ್ತರೇ ಆಗಿರುವುದು ಅದಕ್ಕೆ ಕಾರಣ ಇರಬಹುದು. ಭಾರತಿಯವರು ಅದನ್ನು ಮೀರಿ ’ವಿಶ್ಲೇಷಣೆ’ಗೆ ತೊಡಗುತ್ತಾರೆ. ಅದು ಈ ಪುಸ್ತಕದ ವಿಶೇಷ. ಬಾಜಿರಾವ್ ಮಸ್ತಾನಿಯ ಪ್ರೇಮಕತೆಯನ್ನು ಆಧರಿಸಿದ ಜನಪ್ರಿಯ ಚಿತ್ರದಲ್ಲಿ ಮೊದಲ ಪತ್ನಿಯ ದುಗುಡ-ಆತಂಕಗಳೆಡೆಗೆ ಗಮನ ಹರಿಸುವುದೇ ವಿಭಿನ್ನ ನೆಲೆಗಟ್ಟನ್ನು ಒದಗಿಸುತ್ತದೆ. ಆಂತರಿಕ ತಲ್ಲಣ-ಹುಡುಕಾಟಗಳು ಗಮನ ಸೆಳೆಯದೇ ಇರಲಾರವು.

ಬಹುಪಾಲು ಲೇಖನಗಳು ಭಾರತೀಯ ಚಿತ್ರಗಳಿಗೆ ಸಂಬಂಧಿಸಿದವುಗಳಾದರೂ ಕೇವಲ ಅವುಗಳಿಗೇ ಸೀಮಿತವಾಗಿಲ್ಲ. ವಿಶ್ವ ಸಿನಿಮಾಗಳಲ್ಲಿ ಹಾಗೂ ರಂಗಭೂಮಿಯಲ್ಲಿ ಮಹಿಳೆ ಕುರಿತಾಗಿಯೂ ಬರೆದ ಭಾರತಿಯವರ ಬರೆಹಗಳು ಗಮನ ಸೆಳೆಯುತ್ತವೆ. ಅರ್ಥ ಮಾಡಿಸಬೇಕಾದದ್ದು ಇನ್ನೂ ಇದೆ. ಕನ್ನಡ ಸಿನಿಮಾಗಳಲ್ಲಿ ಸ್ತ್ರೀಪಾತ್ರಗಳ ಸ್ವಂತಿಕೆ ಕುರಿತ ಬರೆಹಗಳು ಕೂಡ ಸೊಗಸಾಗಿವೆ.

About the Author

ಭಾರತಿ ಹೆಗಡೆ
(01 April 1969)

ಪತ್ರಕರ್ತೆ, ಕವಯತ್ರಿ ಭಾರತಿ ಹೆಗಡೆಯವರ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ. ಇವರು ಕೃತಿಗಳು: ಮೊದಲಪತ್ನಿಯ ದುಗುಡ (ಸಿನಿಮಾದಲ್ಲಿನ ಮಹಿಳಾ ಪಾತ್ರಗಳ ವಿಶ್ಲೇಷಣೆ), ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು (ಸಣ್ಣ ಕಥಾಸಂಕಲನ), ಮಣ್ಣಿನ ಗೆಳತಿ (ಕೃಷಿ ಮಹಿಳೆಯರ ಅನುಭವ ಕಥನ), ಹಾಗೂ ಹರಿವ ನದಿ (ಮೀನಾಕ್ಷಿ ಭಟ್ಟ ಅವರ ಆತ್ಮಕಥನ) ...

READ MORE

Related Books