ಮೋದಿ ಎಂಬ ವಿಸ್ಮಯ

Author : ಜಿ.ಎಸ್ ಭಟ್ (ಮೈಸೂರು)

Pages 252

₹ 225.00




Year of Publication: 2020
Published by: ಸೌಮ್ಯ ಪ್ರಕಾಶನ
Address: ಮೈಸೂರು.

Synopsys

ಹಿರಿಯ ಲೇಖಕ ಜಿ.ಎಸ್. ಭಟ್ಟ ಅವರು ಭಾರತದ ಪ್ರಧಾನಿ ಮೋದಿ ಅವರ ವ್ಯಕ್ತಿತ್ವ ಕುರಿತು ಬರೆದ ಕೃತಿ-ಮೋದಿ ಎಂಬ ವಿಸ್ಮಯ. ದೇಶದ ವಾಸ್ತವಿಕತೆಯ ಹಿನ್ನೆಲೆಯಲ್ಲಿ ಒಬ್ಬ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಉತ್ತಮ ನಿರ್ಧಾರಗಳನ್ನು ಪ್ರಕಟಿಸುತ್ತಿದ್ದು, ದೇಶದ ಸಮಗ್ರತೆಯ ದೃಷ್ಟಿಯಿಂದ ಮಹತ್ವದ್ದು ಎಂದು ಪ್ರಶಂಸಿಸಿರುವ ಲೇಖನಗಳು ಈ ಕೃತಿಯಲ್ಲಿ ಒಳಗೊಂಡಿವೆ. ನರೇಂದ್ರ ಮೋದಿ ಬೆಳೆದು ಬಂದ ಹಾದಿ, ಪ್ರಧಾನಿ ಪಟ್ಟ ಏರಿದ ಬಗೆ, ಆಡಳಿತದ ವೈಖರಿ ಇತ್ಯಾದಿ ಕುರಿತು ಚಿತ್ರಣ ನೀಡುವ ಕೃತಿ ಇದು.

About the Author

ಜಿ.ಎಸ್ ಭಟ್ (ಮೈಸೂರು)

ಹಿರಿಯ ಲೇಖಕ ಜಿ.ಎಸ್ ಭಟ್ (ಮೈಸೂರು). 1943, ಮೇ 6 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜನನ. ತಂದೆ ಸುಬ್ಬರಾಯ ಭಟ್, ತಾಯಿ ಸರಸ್ವತಿ. ಕಲಾವಿದರಾಗಿರುವ ಜಿ.ಎಸ್.ಭಟ್ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.  ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಸಾಹಿತಿ ಪ್ರೊ.ದೇಜಗೌ ಅವರಿಂದ ಪ್ರೇರಿತರಾಗಿ 1969ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗಕ್ಕೆ ವಿಶ್ವಕೋಶದ ಸಂಪಾದಕರಾಗಿ ಸೇರಿದರು. ಅಷ್ಟೇ ಅಲ್ಲದೆ ವಿಶ್ವವಿದ್ಯಾನಿಲಯದೊಂದಿಗೆ 33 ವರ್ಷಗಳ ಅವಧಿಯಲ್ಲಿ ವಿಶ್ವಕೋಶದ 14 ಸಂಪುಟಗಳನ್ನು ಹೊರತಂದ ಕೀರ್ತಿಯು ಅವರಿಗೆ ಸಲ್ಲುತ್ತದೆ. ನಿವೃತ್ತಿಯ ನಂತರವೂ ಭಟ್ ಕನ್ನಡ ವಿಶ್ವಕೋಶದ ಕೆಲಸವನ್ನು ಮುಂದುವರೆಸಿದರು. ಯಕ್ಷಗಾನ ಮತ್ತು ಬಯಲಾಟ ಸೇರಿದಂತೆ 75 ...

READ MORE

Related Books