ಮೋಡಿ ಲಿಪಿಯ ಚಾರಿತ್ರಿಕ ಮಹತ್ವ

Author : ಸಂಗಮೇಶ ಕಲ್ಯಾಣಿ

Pages 87

₹ 40.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560110
Phone: 134 - 23183311, 23183312

Synopsys

ಕನ್ನಡವನ್ನು ಮೋಡಿ ಲಿಪಿಯಲ್ಲೂ ಬರೆಯಲಾಗುತ್ತಿತ್ತು. ಮೋಡಿ ಲಿಪಿ ಯಾವುದು? ಯಾವಾಗ ಆ ಲಿಪಿಯ  ಬಳಕೆಯಾಗುತ್ತಿತ್ತು? ಈ ಲಿಪಿಯಲ್ಲಿರುವ ಕನ್ನಡ ನಾಡಿನ ಹಲವು ಮಹತ್ವದ ಸಾಂಸ್ಕೃತಿಕ ದಾಖಲೆಗಳು ಯಾವುವು?  ಮುಂತಾದ ಪ್ರಮುಖ ವಿಷಯಗಳ ಕುರಿತು ಲೇಖಕ  ಸಂಗಮೇಶ ಕಲ್ಯಾಣಿ ಅವರು ’ಮೋಡಿ ಲಿಪಿಯ ಚಾರಿತ್ರಿಕ ಮಹತ್ವ’ ಎಂಬ  ಕೃತಿಯಲ್ಲಿ ವಿವರಗಳನ್ನು ನೀಡಿದ್ದಾರೆ. 

ಸಾಹಿತ್ಯದ ಒರತೆಯಲ್ಲಿ ಇತಿಹಾಸವನ್ನು ಬಗೆದಷ್ಟು ಅದು ಅತಿಯಾಗಿ ಕಂಡು ಬರುತ್ತದೆ. ಇದರಲ್ಲಿ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಯಾವುದನ್ನು  ಹೇಗೆ ಹುಡುಕಬೇಕು ಹಾಗೂ ಯಾವುದನ್ನು ಬಳಸಬೇಕು ಎನ್ನುವುದೇ ಇಲ್ಲಿರುವ ಮುಖ್ಯ ಸಂಗತಿಯಾಗಿದೆ. ಇತಿಹಾಸಕ್ಕೆ ಹೊಸ ಆಕರವಾಗಬಹುದಾದ ಸಾಹಿತ್ಯವು ಮೋಡಿ ಲಿಪಿಗಳಲ್ಲಿಯೂ ಸಹ ಲಭ್ಯವಿರುವುದನ್ನು ಕಾಣಬಹುದು. ಮೋಡಿ ಲಿಪಿಯ ಉಗಮ, ಸ್ವರೂಪ, ವಿಕಾಸ ಅದರ ಮಹತ್ವವನ್ನು ವಿವರಿಸಿದ್ದಾರೆ. 

Related Books