ಮೊಳದಷ್ಟು ಹೂವು

Author : ಶ್ರೀಧರ ಬಳಗಾರ

Pages 280

₹ 250.00




Year of Publication: 2019
Published by: ನಿವೇದಿತ ಪ್ರಕಾಶನ,
Address: #3437, (1ನೇ ಮಹಡಿ), 4ನೇ ಮುಖ್ಯ ರಸ್ತೆ, 9ನೇ ಅಡ್ಡ ರಸ್ತೆ, ಶಾಸ್ತ್ರೀನಗರ, ಬನಶಂಕರಿ, 2ನೇ ಹಂತ, ಬೆಂಗಳೂರು-28,
Phone: 9448733323

Synopsys

‘ಮೊಳದಷ್ಟು ಹೂವು’ ಕೃತಿಯು ಶ್ರೀಧರ ಬಳಗಾರ ಅವರ ಸಂಪಾದಿತ ಪ್ರಬಂಧಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಸ. ರಘುನಾಥ ಅವರು ಕೆಲವೊಂದು ವಿಚಾರಗಳನ್ನು ಹೀಗೆ ಹಂಚಿಕೊಂಡಿದ್ದಾರೆ : ಮುನ್ನುಡಿ, ಕೃತಿ ಮಾತು (ವಿಮರ್ಶೆ), ವಸ್ತು, ದೃಶ್ಯ, ಸ್ಥಳ ಕುರಿತು ಬರೆಯುವುದೆಂದರೆ, ವಿಭಿನ್ನ ಕುಟುಂಬಗಳ ಒಳಗೆ ಹೋಗಿ, ಅಷ್ಟೇ ಅನುಭವಗಳೊಂದಿಗೆ ಹೊರಬಂದು, ಮತ್ತೆ ಮೆಲುಕಿಗೆ ತಂದುಕೊಳ್ಳುವುದು ಮತ್ತು ನಿರೂಪಿಸಿಕೊಳ್ಳುವುದು. ಇದು ಮನಸ್ಸಿಗೂ ಆದೀತು, ಬರಹರೂಪದ್ದೂ ಇದ್ದೀತು. ರೂಪ ಯಾವುದಾದರೇನು ಗುಣವಷ್ಟೆ ಮುಖ್ಯ. ಇದನ್ನು ಶ್ರೀಧರ ಬಳಗಾರರು ತಮ್ಮ ‘ಮೊಳದಷ್ಟು ಹೂವು’ದಲ್ಲಿ ಮೊಳಹಾಕಿ ಕೊಟ್ಟಿರುವರು. ಇಡೀ ಮೊಳವನ್ನೇ ಮುಡಿಯಬಹುದು, ಇಲ್ಲವೆ ಅದರಲ್ಲಿ (ಅರಶಿನ-ಕುಂಕುಮಕ್ಕೆ ಹೋದಾಗ ಕೊಡುವರಲ್ಲ ಹಾಗೆ)ತುಂಡು ಮಾಡಿಕೊಳ್ಳಬಹುದು, ಹೂವಂತೂ ಇರುವುದೇ, ಬಳಗಾರರ ಲೇಖನಗಳನ್ನು ಹೀಗೆ ಓದಿಕೊಳ್ಳಬಹುದು. ಮಳೆಯೋಗ ಕಂಡು ಮಣ್ಣಿಗೆ ತಕ್ಕ ಬಿತ್ತನೆ ಮಾಡುವ ರೈತನಂತೆ ಸಣ್ಣ ಕಥೆಗಳನ್ನು ಕೊಡುತ್ತ ಬಂದ ಶ್ರೀಧರ ಬಳಗಾರರು ವಿಷಯ, ಕೃತಿಗಳನ್ನು ಕುರಿತು ಬರೆಯುವಾಗಲೂ ಕತೆಗಾರತನವನ್ನು ಬಿಟ್ಟುಕೊಡುವುದಿಲ್ಲ. ಒಳಗೇ ಕಾಯ್ದುಕೊಂಡ ಕವಿತನದ ಗುಣವನ್ನು ಗದ್ಯ- ಪದ್ಯ ಕುರಿತು ಬರೆಯುವಾಗ ಬಳಸಿಕೊಂಡಿದ್ದಾರೆ. ತನಗೆ ವರ್ತಮಾನದಲ್ಲದ ಪುರಂದರದಾಸರನ್ನು ತನ್ನ ಸಮಕಾಲೀನ ಕವಿ ಎಂಬಂತೆ, ಸಲಿಗೆಯಲ್ಲಿ ಕಂಡು ಬರೆದಿರುವುದು (ಕೃಷ್ಣಲೋಕ) ಬಳಗಾರರ ನೋಟ ಕ್ರಮಕ್ಕೆ ಒಂದು ಉದಾಹರಣೆ ಮಾತ್ರ. ಇವರು ಕೃತಿಯನ್ನು ಹಿತಗೊಳಿಸಿಕೊಂಡು ಓದಿರುವದು ಆ ಕುರಿತ ಬರಹಗಳಲ್ಲಿ ಕಾಣಿಸುತ್ತದೆ’ ಎಂದು  ವಿವರಿಸಿದ್ದಾರೆ.

About the Author

ಶ್ರೀಧರ ಬಳಗಾರ

ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ  ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ  'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ. ...

READ MORE

Related Books