ಮೋಳಿಗೆ ಮಾರಯ್ಯ

Author : ವಿಜಯಶ್ರೀ ಸಬರದ

Pages 60

₹ 12.00




Year of Publication: 2005
Published by: ಶ್ರೀಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮು, ಗುಲಬರ್ಗಾ- 585101

Synopsys

ವಿಜಯಶ್ರೀ ಸಬರದ ಅವರು ರಚಿಸಿರುವ 'ಮೋಳಿಗೆ ಮಾರಯ್ಯ' ಜೀವನ ಚರಿತ್ರೆ ಶರಣರ ಕುರಿತು ಅಭ್ಯಾಸ ಮಾಡುವವರಿಗೆ ಕೈದೀವಿಗೆಯಾಗಿದೆ ಎಂದಿದ್ದಾರೆ ನಾಡೋಜ ಗೀತಾ ನಾಗಭೂಷಣ. ಈ ಕೃತಿಗೆ ಬೆನ್ನುಡಿ ಬರೆದಿರುವ ಅವರು ಹೈದ್ರಾಬಾದ ಕರ್ನಾಟಕದಲ್ಲಿ ಮಹಿಳಾ ಬರಹಗಾರರು ಕಡಿಮೆ. ಹಿರಿಯ ಹಾಗೂ ನಂತರ ತಲೆಮಾರುಗಳಲ್ಲಿ ಕೇಳಿ ಬರುವ ಹೆಸರು ಡಾ. ವಿಜಯಶ್ರೀ ಸಬರದ ಅವರದು. ಮೂಲತಃ ಬೀದರ್ ಜಿಲ್ಲೆಯವರು ಅಕ್ಕಮಹಾದೇವಿ ಕಾಲೇಜು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿಯೇ ಕಾವ್ಯ ಕ್ಷೇತ್ರ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಹೊಂದಿದ್ದಾರೆ ಎಂದಿದ್ದಾರೆ. ಹಾಗೇ ಬಂಡಾಯ ಸಾಹಿತ್ಯ-ಸಂಘಟನೆ -ಹೋರಾಟದ ಮೂಲಕ ಕಾವ್ಯ ಕ್ಷೇತ್ರಕ್ಕೆ ಕಾಲಿಟ್ಟು ಜ್ವಲಂತ, ಲಕ್ಷಣರೇಖೆದಾಟಿದವರು ಮತ್ತು ಮುಗಿಲ ಮಲ್ಲಿಗೆ ಎಂಬ ಮೂರು ಸಂಕಲನ ಹೊರತಂದವರು. ಸ್ತ್ರೀ ಸಂವೇದನೆ ಜನಪರ ಕಾಳಜಿಗಳನ್ನು ಕಾವ್ಯದಲ್ಲಿ ಕಾಣಬಹುದಾಗಿದೆ. ಅನುಪಮಾ ನಿರಂಜನರ ಕಾದಂಬರಿಗಳ ಕುರಿತು ವಿಮರ್ಶಾತ್ಮಕ ಸಂಶೋಧನಾ ಅಧ್ಯಯನ ಮಾಡಿದವರು. ವಚನ ಸಾಹಿತ್ಯಕ್ಕೆ ತಮ್ಮದೇ ಆದ ವಿಶೇಷ ಕೊಡುಗೆ ನೀಡಿದ್ದಾರೆ. ಅಕ್ಕಮಹಾದೇವಿ, ಬಸವಣ್ಣ, ವಚನವಾಹಿನಿಯ ಮೂಲಕ ಅವರು ಕಟ್ಟಿಕೊಡುವ ವಿಷಯ ಗಮನ ಸೆಳೆಯುತ್ತವೆ. ಜಾಗತೀಕರಣದ ಇಂದಿನ ಸಂದರ್ಭದಲ್ಲಿ ವಚನ ಸಾಹಿತ್ಯವನ್ನು ಮುಖಾಮುಖಿ ಮಾಡುತ್ತ ತೌಲನಿಕ ದೃಷ್ಟಿಯಿಂದ ಹೊರ ಹಾಕಿರುವುದನ್ನು ಕಾಣುತ್ತೇವೆ. ಹೀಗಾಗಿ ಡಾ. ವಿಜಯಶ್ರೀ ಸಬರದ ಕವಯತ್ರಿಯಾಗಿ, ವಿಮರ್ಶಕಿಯಾಗಿ, ಸಂಶೋಧಕಿಯಾಗಿ, ಲೇಖಕಿಯಾಗಿ, ಸಂಪಾದಕಿಯಾಗಿ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಸದ್ದುಗದ್ದಲವಿಲ್ಲದೇ ಕೆಲಸ ನಿರ್ವಹಿಸಿದ್ದಾರೆ ಇವರಿಗೆ ಹಲವು ಪ್ರಶಸ್ತಿ ಗೌರವಗಳು ಕೂಡಾ ದೊರಕಿವೆ. ಮೋಳಿಗೆಯ ಮಾರಯ್ಯನ ಕುರಿತು ಸಮಗ್ರವಾದ ವಚನಗಳ ಹಿನ್ನೆಲೆಯಲ್ಲಿ ಹೇಗೆ ವಚನಕಾರರ ಇಂದಿನ ಆಧ್ಯಾತ್ಮ ಸಾಮಾಜಿಕ ಹಾಗೂ ಹಲವು ಆಯಾಮಗಳಲ್ಲಿ ಸ್ಪಂದಿಸಿದ ಎನ್ನುವುದನ್ನು ವಚನಗಳ ಆಧಾರದ ಮೇಲೆ ವಿಮರ್ಶಾತ್ಮಕವಾಗಿ ರಚಿಸಿದ್ದನ್ನು ಸ್ಮರಿಸಬಹುದಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ವಿಜಯಶ್ರೀ ಸಬರದ
(01 February 1957)

ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸುವ ಲೇಖಕಿ ವಿಜಯಶ್ರೀ ಸಬರದ. ಅವರು ಜನಿಸಿದ್ದು 1957ರ ಫೆಬ್ರುವಿರ 1ರಂದು. ತಂದೆ ಗುಣವಂತರಾವ ಪಾಟೀಲ. ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್‌ನಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ ಪಡೆದರು. ಬೀದರ್‌ನ ಅಕ್ಕ ಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ...

READ MORE

Related Books