ಮೂಢನಂಬಿಕೆ ಮತ್ತು ದೇವರು

Author : ಗಿರಿಮನೆ ಶ್ಯಾಮರಾವ್

Pages 174

₹ 90.00




Published by: ಗಿರಿಮನೆ ಪ್ರಕಾಶನ
Address: ಲಕ್ಷ್ಮೀಪುರಂ ಬಡಾವಣೆ ಸಕಲೇಶಪುರ - 573134
Phone: 9739525514

Synopsys

ಈ ಜಗತ್ತಿನಲ್ಲಿ ನಮ್ಮನ್ನು ಸದಾ ಕಾಡುವ ಪ್ರಶ್ನೆಗಳಲ್ಲಿ ಒಂದು ಮೂಡನಂಬಿಕೆ. ಹೌದು ಮೂಡನಂಭಿಕೆಗಳ ಕುರಿತಾಗಿ ಅದರ ಪ್ರಭಾವ ಮತ್ತು ಪರಿಣಾಮಗಳ ಕುರಿತಾಗಿ ಯಾವಾಗಲೂ ಒಂದಲ್ಲಾ ಒಂದು ರೀತಿಯ ಚರ್ಚೆ ನಡೆಯುತ್ತಲೇ ಇರುತ್ತದೆ. ಮೂಢನಂಬಿಕೆಗಳ ಬಗ್ಗೆ ಪರ ಮತ್ತು ವಿರೋಧವಾಗಿ ವಿಮರ್ಶಿಸಿವ ಎರಡು ಗುಂಪಿನ ಜನರು ಇದ್ದಾರೆ. ಹೀಗೆ ಮೂಢನಂಬಿಕೆಗಳು ಮತ್ತು ಅದರ ಮೇಲಿನ ನಂಬಿಕೆಯ ಬಗ್ಗೆ ಗಿರಿಮನೆ ಶ್ಯಾಮರಾವ್ ಅವರು ಬರೆದ ಕೃತಿಯೇ ‘ಮೂಢನಂಬಿಕೆ ಮತ್ತು ದೇವರು’. ವೇದ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಂಭಂದಿಸಿದ ಪ್ರಸ್ತುತ ಕೃತಿಯಲ್ಲಿ ಲೇಖಕರು ನಮ್ಮ ಸಮಾಜದಲ್ಲಿನ ನಿಜವಾದ ಮೂಢನಂಬಿಕೆಗಳು ಯಾವವು. ಕೇವಲ ಬಲಿ ಕೊಡುವುದು, ಭೂತ ಪ್ರೇತಗಳ ಕುರಿತಾದ ಆಚರಣೆಗಳು, ಅಥವ ಆಗುಂಬೆಯ ಭಾಗದಲ್ಲಿ ನಡೆಯುವ ‘ಸಿಡಿ’ಯಂತಹ ಆಚರಣೆಗಳು ಮಾತ್ರ ಮೂಢನಂಬಿಕೆಯೇ ಎಂಬಂತಹ ವಿಷಯಗಳ ಕುರಿತು ಬಹಳ ಗಾಢವಾದ ವಿಮರ್ಶೆಯನ್ನು ನೀಡಿದ್ದಾರೆ. ಲೇಖಕರ ಕೆಲವು ಚಿಂತನಾತ್ಮಕ ಪ್ರಶ್ನೆಗಳು ಪ್ರಸ್ತುತ ಕೃತಿಯಲ್ಲಿ ನಿಜವಾಗಿಯೂ ಪ್ರಶಂಸನೀಯ. ತಾವು ನಂಬಿದ್ದೇ ಸರಿ ಎಂದು ಮನುಷ್ಯರು ಕೆಲವೊಮ್ಮೆ ನಂಬುತ್ತಾರಲ್ಲ, ಅದು ಮೂಢನಂಬಿಕೆಯಲ್ಲವೇ ಎಂದು ಗಿರಿಮನೆ ಶ್ಯಾಮರಾವ್ ಪ್ರಶ್ನಿಸುತ್ತಾರೆ. ಹಾಗದರೆ, ಮನುಷ್ಯನ ನಂಬಿಕೆಗಳಿಗೊಂದು ಅಳತೆಗೋಲು ಇದೆಯೇ ಎನ್ನುವ ಲೇಖಕರು ಈ ಸಮಾಜದಲ್ಲಿ ಮೂಢನಂಬಿಕೆಗಳು ಎನ್ನಿಸಿರುವ ವಾಮಾಚಾರ ವಷೀಕರಣ, ಫಲಿತ ಜ್ಯೋತಿಷ್ಯ ಇವುಗಳಿಗೆಲ್ಲಾ ನಮ್ಮ ಸಂಸ್ಕøತಿ ಹಾಗೂ ನಾಗರೀಕತೆಯ ಬುನಾದಿ ಎನ್ನಿಸಿರುವ ವೇದಗಳಲ್ಲಿ ಉತ್ತರವಿದೆಯೇ, ವೇದಗಳು ಮೂಢನಂಬಿಕೆಗಳ ಬಗ್ಗೆ ಏನನ್ನುತ್ತವೆ ಎಂದಿರುವುದು ನಿಜಕ್ಕೂ ಚಿಂತನಾತ್ಮಕ. ಈ ರೀತಿ ಮೂಢನಂಬಿಕೆಗಳು ಹಾಗೂ ಅದರ ಸುತ್ತಲಿನ ನಂಬಿಕೆಗಳ ಕುರಿತು ಗಿರಿಮನೆ ಶ್ಯಾಮರಾವ್ ಬೆಳಕು ಚೆಲ್ಲುವ ಪ್ರಯತ್ನ ಮಾಡಿರುವುದು ನಿಜಕ್ಕೂ ಪ್ರಶಂಸನೀಯ. ‘ಮೂಢನಂಬಿಕೆ ಮತ್ತು ದೇವರು ಕೃತಿಯ ಮುಂದುವರಿದ ಭಾಗವಾಗಿ ಹೊರಬಂದ ಅದೇ ಅಂಶಗಳನ್ನು ಒಳಗೊಂಡಿರುವ ಮತ್ತು ವೇದದ ಸಾರ ಹಾಗೂ ಸತ್ಯಾಸತ್ಯತೆಗಳ ಕುರಿತು ಚರ್ಚಿಸುವ ಗಿರಿಮನೆ ಶ್ಯಾಮರಾವ್‍ರ ವೇದ ಮತ್ತು ವ್ಯಕ್ತಿತ್ವ ವಿಕಸನಕ್ಕೇ ಸಂಭಂದಿಸಿದ ಮತ್ತೊಂದು ಕೃತಿ’ಜಗತ್ತಿನ ಅದ್ಭುತ ನಿಯಮಗಳು’.

About the Author

ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...

READ MORE

Related Books