ಮೂರು ರಂಗ ರೂಪಾಂತರಗಳು

Author : ಬಿ.ಆರ್. ಲಕ್ಷ್ಮಣರಾವ್

Pages 176

₹ 90.00

Buy Now


Year of Publication: 2018
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಸಂ. ೯, ’ರಮ್ಯ’ , ಗೋಕುಲಂ, ೩ನೇ ಹಂತ, ಮೈಸೂರು. 

Synopsys

ಜೇನ್ಸ್ ಬ್ಯಾರಿಯ ಪ್ರಸಿದ್ಧ ಇಂಗ್ಲಿಷ್‌ ನಾಟಕಗಳ ಈ ಕನ್ನಡಾನುವಾದ 20ನೇ ಶತಮಾನದ ಆರಂಭಿಕ ಕಾಲಘಟ್ಟವನ್ನು ಓದುಗರ ಮುಂದೆ ತರುತ್ತದೆ. ಒಂದು ಮಕ್ಕಳ ನಾಟಕವೂ ಈ ಕೃತಿಯಲ್ಲಿದ್ದು ಕನ್ನಡದ ನೆಲದ ಗುಣಕ್ಕೆ ಹೊಂದುವಂತೆ ಅನುವಾದ ಕಾರ್‍ಯ ಸೊಗಸಾಗಿ ನಡೆದಿದೆ. ಸಮಾಜವಾದ ಸಾಮಾನ್ಯ ಮನುಷ್ಯನ ಬದುಕಿನಲ್ಲಿ ಹೇಗೆಲ್ಲಾ ವರ್ತಿಸುತ್ತದೆ ಎಂಬುದನ್ನೂ ಕೃತಿಯ ಮೂಲಕ ಅರಿಯಬಹುದು. 
 

ಖ್ಯಾತ ವಿಮರ್ಶಕ ಡಾ. ಸಿ.ಎನ್‌ ರಾಮಚಂದ್ರನ್‌  ಕೃತಿಯ ಬಗ್ಗೆ ಒಂದೆಡೆ ಹೀಗೆ ಹೇಳಿದ್ದಾರೆ: ನಾಂದಿ’ ಮತ್ತು ವಿಷ್ಕಂಭಕ’ಗಳಿಗೆ ಹತ್ತಿರವಿರುವ ದೃಶ್ಯಗಳ ಮೂಲಕ ಕಥೆಯನ್ನು ಮುಂದುವರಿಸುವುದು ಸುಲಭವಾಗುವಂತೆಯೇ ತಿಳಿಹಾಸ್ಯವನ್ನು ರಂಗದ ಮೇಲೆ ತರಲು ಲೇಖಕರಿಗೆ ಸಾಧ್ಯವಾಗಿದೆ. ಹಾಗೆಯೇ ಅಲ್ಲಲ್ಲಿ ಬರುವ ಒಂದೆರಡು ಹಾಡುಗಳು ನಾಟಕವನ್ನು ಮತ್ತಷ್ಟು ರಂಜನೀಯವಾಗಿಸುತ್ತವೆ. ಒಂದು ಪ್ರಸಿದ್ಧ ಇಂಗ್ಲಿಷ್ ನಾಟಕವನ್ನು ಯಶಸ್ವಿಯಾಗಿ ಕನ್ನಡಕ್ಕೆ ರೂಪಾಂತರಿಸಿರುವ ಲಕ್ಷ್ಮಣರಾವ್ ಕನ್ನಡ ಪ್ರೇಕ್ಷಕರ ಹಾಗೂ ಓದುಗರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.’

About the Author

ಬಿ.ಆರ್. ಲಕ್ಷ್ಮಣರಾವ್
(09 September 1946)

ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್‌. ಲಕ್ಷ್ಮಣರಾವ್‌ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...

READ MORE

Related Books