ಮೌಲ್ಡರ್ ರಾಜಣ್ಣ

Author : ಎಲ್. ಶಿವಲಿಂಗಪ್ಪ

Pages 76

₹ 50.00




Year of Publication: 2012
Published by: ಕರ್ನಾಟಕ ಶಿಲ್ಪಕಲಾ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು- 560001

Synopsys

‘ಮೌಲ್ಡರ್ ರಾಜಣ್ಣ’ ಕಲಾವಿದ ಮೌಲ್ಡರ್ ರಾಜಣ್ಣ ಅವರ ಕಲಾಬದುಕಿನ ಕುರಿತಾದ ಪ್ರಬಂಧ ಸಂಕಲನ. ಈ ಕೃತಿಯನ್ನು ಕಲಾವಿದ, ಲೇಖಕ ಎಲ್. ಶಿವಲಿಂಗಪ್ಪ ಅವರು ರಚಿಸಿದ್ದಾರೆ. ಇಲ್ಲಿ ಮೌಲ್ಡರ್ ರಾಜಣ್ಣ(ಎಸ್.ವಿ.ರಾಜು), ಚಲನಚಿತ್ರ ಜಗತ್ತಿನಲ್ಲಿ ಸ್ನಾತಕನಾದ, ಪಲ್ಪ್ ನ ಬೃಹತ್ ಶಿಲ್ಪಗಳು, ಪುರಾಣ ದೇವತೆಗಳ ಶಿಲ್ಪಗಳು, ಸಿನೆಮಾ ಬಿಟ್ಟು ನಾಟಕ ಕಂಪನಿಯಲ್ಲಿ, ಸಿಮೆಂಟ್ ಮೌಲ್ಡ್ ಗಳು(ಅಚ್ಚುಗಳು), ಪೇಪರ್ ಪಲ್ಫ್ ಆಭರಣಗಳು, ತದ್ರೂಪ ಶಿಲ್ಪಗಳು, ಸಂಯೋಜನೆಯ ಸೃಜನಶೀಲ ಶಿಲ್ಪಗಳು, ಸಂದ ಸನ್ಮಾನಗಳು ಸೇರಿದಂತೆ ಮೌಲ್ಡರ್ ರಾಜಣ್ಣ ಅವರ ಬದುಕಿನ ವಿವಿಧ ಮಜಲುಗಳನ್ನು ಪರಿಚಯಿಸುವ ಪ್ರಬಂಧಗಳು ಸಂಕಲನಗೊಂಡಿವೆ.

About the Author

ಎಲ್. ಶಿವಲಿಂಗಪ್ಪ

ಮೈಸೂರಿನಲ್ಲಿ 1947ರಲ್ಲಿ ಜನಿಸಿದ ಎಲ್. ಶಿವಲಿಂಗಪ್ಪ ಅವರು ಮೈಸೂರು ಅರಮನೆಯ ಖ್ಯಾತ ಕಲಾವಿದ, ಶಿಲ್ಪ ಸಿದ್ದಾಂತಿ ಸಿದ್ದಲಿಂಗಸ್ವಾಮಿ ಅವರಿಂದಲೇ ಪ್ರಾಥಮಿಕ ಹಂತದ ಚಿತ್ರಕಲಾಭ್ಯಾಸ ಮಾಡಿದವರು. 1966ರಲ್ಲಿ ಬೆಂಗಳೂರಿಗೆ ಬಂದ ನಂತರ ಎಂ.ಟಿ.ವಿ. ಆಚಾರ್ಯರ ಕಲಾಶಾಲೆಯಲ್ಲಿ ಕ್ರಮಬದ್ಧ ಶಿಕ್ಷಣ ಹಾಗೂ ಪದವಿ ಪಡೆದರು. ಚಿತ್ರ-ಶಿಲ್ಪ ಎರಡೂ ಕ್ಷೇತ್ರಗಳಲ್ಲಿ ಹಲವಾರು ಪ್ರಯೋಗ ಮಾಡಿರುವ ಶ್ರೀಯುತರು ನಾಲ್ಕು ಏಕವ್ಯಕ್ತಿ ಪ್ರದರ್ಶನಗಳಲ್ಲದೆ ಹಲವಾರು ಗುಂಪು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. 1997 - 2000 ರಲ್ಲಿ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿದ್ದು, ಮರಳಚ್ಚಿನಲ್ಲಿ (Sand cast) ಹಾಗೂ ಥರ್ಮೊಕೋಲ್‌ಗಳಲ್ಲಿ ಶಿಲ್ಪ ರಚಿಸುವ ಬಗ್ಗೆ ಹಲವಾರು ಯಶಸ್ವಿ ಪ್ರಯೋಗಗಳನ್ನು ಮಾಡಿದ್ದಾರೆ. ...

READ MORE

Related Books