ಮೌನ ಕಾರಣ

Author : ಎಸ್.ಆರ್.ಎನ್.‌ ಮೂರ್ತಿ

Pages 104

₹ 140.00




Year of Publication: 2022
Published by: ಸಂಜೆ ಪಬ್ಲಿಕೇಷನ್ಸ್‌
Address: ನಂ.11, 2ನೇ ಕ್ರಾಸ್‌, ಕೆಂಪೇಗೌಡ ನಗರ, ಟೆನಿಸ್‌ ವಿಲೇಜ್‌ ಹಿಂಭಾಗ, ಕೊಡಿಗೇಹಳ್ಳಿ, ಬೆಂಗಳೂರು- 560097
Phone: 9481278257

Synopsys

ಲೇಖಕ ಎಸ್.ಆರ್.ಎನ್.‌ ಮೂರ್ತಿ ಅವರ ಕವನ ಸಂಕಲನ ಕೃತಿ ʻಮೌನ ಕಾರಣʼ. ಪ್ರಸ್ತುತ ಪುಸ್ತಕದಲ್ಲಿ ಪ್ರೇಮಕವಿತೆ, ದೇಶಭಕ್ತಿಗೀತೆ, ಪ್ರಕೃತಿವರ್ಣನೆ, ಮಕ್ಕಳ ಕವಿತೆ, ಭಕ್ತಿಗೀತೆ, ಶೋಷಿತರಧ್ವನಿ ಹೀಗೆ ವಿವಿಧ ವಸ್ತುಗಳ ಮೇಲೆ ಕಟ್ಟಿದ ಕವಿತೆಗಳ ಗೊಂಚಲುಗಳಿವೆ. ಅವು ಒಂದೊಂದೂ ಅದರದ್ದೇ ಆದ ವೈಶಿಷ್ಟ್ಯವನ್ನು ಹೊಂದಿವೆ.

 ಪುಸ್ತಕದ ಪರಿವಿಡಿಯಲ್ಲಿ ಭಿಕ್ಷೆಬೇಡುವ ಹುಡುಗ, ನನ್ನ ತಂಗಿ, ನಾನೆಂದೂ ಒಬ್ಬಂಟಿಯಲ್ಲ, ಹಚ್ಚೋಣ ಬನ್ನಿ ಹೊಸದೀಪವ, ಪ್ರಕೃತಿ ನೀ ಸದಾ ಜವ್ವನೆ, ಚಿಣ್ಣರು ನಾವೆಲ್ಲ, ಗೂಡಿನೊಳಗಣ ಹಕ್ಕಿ, ಬದುಕೊಂದು ರೈಲು ಬಂಡಿ, ಒಲಿಯದ ದುಂಬಿ ನೀನು, ಅತ್ಮಾನುಸಂಧಾನ, ಮೌನ ಕಾರಣ, ಎಲೆಹಕ್ಕಿ ಶೀರ್ಷಿಕೆಗಳಲ್ಲಿ ಕವಿತೆಗಳಿವೆ.

About the Author

ಎಸ್.ಆರ್.ಎನ್.‌ ಮೂರ್ತಿ

ಎಸ್.ಆರ್.ಎನ್.‌ ಮೂರ್ತಿ ಅವರು ಮೂಲತಃ ಹಾಸನದ ಗೊರೊರು ಬಳಿಯ ಸೀಗೂರಿನವರು. ಕೃಷಿ ಹಿನ್ನೆಲೆ ಕುಟುಂಬದಿಂದ ಬಂದವರು. ಸದ್ಯ ಕೈಗಾ ಅಣುಸ್ಥಾವರದಲ್ಲಿ ಉದ್ಯೋಗಿಯಾಗಿದ್ದಾರೆ. ಬರವಣಿಗೆ ಇವರ ಹವ್ಯಾಸ. ಹಲವಾರು ಕವನಗಳನ್ನು ರಚಿಸಿದ್ದಾರೆ. ಕೃತಿ: ಮೌನ ಕಾರಣ (ಕಾವ್ಯ ಸಂಕಲನ) ...

READ MORE

Related Books